- Kannada News Photo gallery Ragini Dwivedi Birthday Sandalwood star actress turns 32 here is One to One actress glamourous and bold photos
Ragini Dwivedi Birthday: ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ರಾಗಿಣಿ; ‘ತುಪ್ಪದ ಬೆಡಗಿ’ಯ ಗ್ಲಾಮರಸ್ ಫೋಟೋಗಳು ಇಲ್ಲಿವೆ
Ragini Dwivedi glamourous photos: ಸ್ಯಾಂಡಲ್ವುಡ್ ಸೇರಿದಂತೆ ವಿವಿಧ ಭಾಷಾ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟಿ ರಾಗಿಣಿ ದ್ವಿವೇದಿಗೆ ಇಂದು ಜನ್ಮದಿನದ ಸಂಭ್ರಮ. 32ನೇ ವಸಂತಕ್ಕೆ ಕಾಲಿಟ್ಟ ನಟಿ ಗ್ಲಾಮರಸ್ ಅವತಾರಗಳಲ್ಲಿ ಮಿಂಚಿದವರು. ನಟಿಯ ಬೋಲ್ಡ್ ಫೋಟೋಗಳು ಇಲ್ಲಿವೆ.
Updated on:May 24, 2022 | 11:32 AM

Happy Birthday Ragini: ಬಹುಭಾಷಾ ನಟಿ ರಾಗಿಣಿ ದ್ವಿವೇದಿ ಪ್ರಸ್ತುತ ಸ್ಯಾಂಡಲ್ವುಡ್ ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಸಕ್ರಿಯರಾಗಿದ್ದಾರೆ. ‘ತುಪ್ಪದ ಬೆಡಗಿ’ ಎಂದೇ ಕರೆಸಿಕೊಳ್ಳುವ ಈ ನಟಿ ‘ಕೆಂಪೇಗೌಡ’, ‘ವೀರಮದಕರಿ’ ಮೊದಲಾದ ಚಿತ್ರಗಳಿಂದ ಸ್ಟಾರ್ ಪಟ್ಟಕ್ಕೇರಿದ್ದರು.

ನಂತರದಲ್ಲಿ ಮಹಿಳಾ ಪ್ರಧಾನ ಆಕ್ಷನ್ ಚಿತ್ರಗಳಲ್ಲೂ ರಾಗಿಣಿ ಬಣ್ಣಹಚ್ಚಿದ್ದರು. ಇದೀಗ ಮತ್ತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ನಟಿ.

ರಾಗಿಣಿ ಸಿನಿಮಾಗಳಲ್ಲಿ ಟ್ರೆಡಿಷನಲ್ ಲುಕ್ಗಳಿಗಿಂತ ಗ್ಲಾಮರಸ್ ಅವತಾರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಅವರ ಬೋಲ್ಡ್ ಫೋಟೋಗಳು ಇಲ್ಲಿವೆ.

ಚಿತ್ರಗಳ ವಿಷಯಕ್ಕೆ ಬಂದರೆ ನಟಿ, ‘ಗಾಂಧಿಗಿರಿ’, ‘ಒನ್ ಟು ಒನ್’ ಮೊದಲಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ‘ಒನ್ ಟು ಒನ್’ ತಮಿಳು ಚಿತ್ರವಾಗಿದೆ.

ಇವುಗಳಲ್ಲದೇ ‘ಕರ್ವ 3’, ‘ಜಾನಿವಾಕರ್’ ಚಿತ್ರಗಳಲ್ಲೂ ನಟಿ ಬಣ್ಣ ಹಚ್ಚುತ್ತಿದ್ದಾರೆ.

ಹಿಂದಿ, ಕನ್ನಡ, ಮಲಯಾಳಂನಲ್ಲಿ ತಯಾರಾಗುತ್ತಿರುವ ‘ಸಾರಿ ಕರ್ಮ ರಿಟರ್ನ್ಸ್’ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ರಾಗಿಣಿ.

ಇಂದು (ಮೇ 24) ರಾಗಿಣಿಗೆ ಜನ್ಮದಿನದ ಸಂಭ್ರಮ. 32ನೇ ವಸಂತಕ್ಕೆ ಕಾಲಿಟ್ಟ ನಟಿಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಕಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅವರನ್ನು ಮತ್ತೆ ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ.
Published On - 11:13 am, Tue, 24 May 22














