Rajinikanth: ಜಯನಗರದ ಬಿಎಂಟಿಸಿ ಡಿಪೋಗೆ ಭೇಟಿ ನೀಡಿ ಹಳೆಯ ನೆನಪು ಮೆಲುಕು ಹಾಕಿದ ರಜನಿಕಾಂತ್
ಜಯನಗರದ ಬಿಎಂಟಿಸಿ ಡಿಪೋಗೆ ಬೆಳಗ್ಗೆ 11:30ಕ್ಕೆ ರಜನಿಕಾಂತ್ ಆಗಮಿಸಿದ್ದಾರೆ. ಅವರ ಆಗಮನ ಅನೇಕರಿಗೆ ಸರ್ಪ್ರೈಸ್ ನೀಡಿದೆ. 11:45ರವರೆಗೂ ರಜನಿಕಾಂತ್ ಡಿಪೋದಲ್ಲೇ ಇದ್ದರು. ಅಲ್ಲಿದ್ದ ಸಿಬ್ಬಂದಿ ಜೊತೆ ರಜನಿ ಮಾತುಕತೆ ನಡೆಸಿದ್ದಾರೆ. ಸಿಬ್ಬಂದಿ ಜೊತೆ ಕೆಲ ಹೊತ್ತು ಮಾತನಾಡಿದ ಬಳಿಕ ರಜನಿಕಾಂತ್ ಅವರು ಡಿಪೋ ಒಳಗೆ ಸುತ್ತಾಡಿದ್ದಾರೆ.
Updated on:Aug 29, 2023 | 1:07 PM

ರಜನಿಕಾಂತ್ ಅವರು ಸೂಪರ್ ಸ್ಟಾರ್. ಸದ್ಯ ‘ಜೈಲರ್’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರು ಇಂದು (ಆಗಸ್ಟ್ 29) ಬೆಂಗಳೂರಿನ ಜಯನಗರ ಬಿಎಂಟಿಸಿ ಡಿಪೋಗೆ ಭೇಟಿ ನೀಡಿದ್ದಾರೆ. ಈ ಭೇಟಿ ಅನೇಕರಿಗೆ ಅಚ್ಚರಿ ಮೂಡಿಸಿದೆ.

ರಜನಿಕಾಂತ್ ಅವರು ಸರಳ ಸ್ವಭಾವದ ವ್ಯಕ್ತಿ. ಕಷ್ಟಗಳನ್ನು ನೋಡಿ ಅವರು ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಈ ಕಾರಣಕ್ಕೋ ಏನೋ ಅವರಿಗೆ ಗರ್ವ ಬಂದೇ ಇಲ್ಲ. ಇದಕ್ಕೆ ಹೊಸ ಸಾಕ್ಷಿ ಸಿಕ್ಕಿದೆ. ರಜನಿ ಸರಳತೆಯನ್ನು ಜನರು ಹೊಗಳಿದ್ದಾರೆ.

ಜಯನಗರದ ಬಿಎಂಟಿಸಿ ಡಿಪೋಗೆ ಬೆಳಗ್ಗೆ 11:30ಕ್ಕೆ ರಜನಿಕಾಂತ್ ಆಗಮಿಸಿದ್ದಾರೆ. ಅವರ ಆಗಮನ ಅನೇಕರಿಗೆ ಸರ್ಪ್ರೈಸ್ ನೀಡಿದೆ. 11:45ರವರೆಗೂ ರಜನಿಕಾಂತ್ ಡಿಪೋದಲ್ಲೇ ಇದ್ದರು. ಅಲ್ಲಿದ್ದ ಸಿಬ್ಬಂದಿ ಜೊತೆ ರಜನಿ ಮಾತುಕತೆ ನಡೆಸಿದ್ದಾರೆ.

ಸಿಬ್ಬಂದಿ ಜೊತೆ ಕೆಲ ಹೊತ್ತು ಮಾತನಾಡಿದ ಬಳಿಕ ರಜನಿಕಾಂತ್ ಅವರು ಡಿಪೋ ಒಳಗೆ ಸುತ್ತಾಡಿದ್ದಾರೆ. ಈ ಮೂಲಕ ಹಳೆಯ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಎಲ್ಲರೂ ರಜನಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ರಜನಿ ಹೀರೋ ಆಗುವುದಕ್ಕೂ ಮೊದಲು ಬಿಎಂಟಿಸಿ ಕಂಡಕ್ಟರ್ ಆಗಿ ಕೆಲಸ ಮಾಡಿದ್ದರು. ಅವರು ಕೆಲಸ ಮಾಡಿದ್ದು ಜಯನಗರ ಡಿಪೋದಲ್ಲಿಯೇ. ಈ ಕಾರಣಕ್ಕೆ ಅವರು ಇಲ್ಲಿ ಆಗಮಿಸಿದ್ದಾರೆ. ಅವರ ಗೆಳೆಯ ಸ್ನೇಹಿತ ರಾಜ್ ಬಹದ್ದೂರ್ ಕೂಡ ರಜನಿ ಜೊತೆ ಇದ್ದರು.

ರಜನಿಕಾಂತ್ ಅವರು ‘ಜೈಲರ್’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 558 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೂರನೇ ಸೋಮವಾರ (ಆಗಸ್ಟ್ 29) ಚಿತ್ರದ ಗಳಿಕೆ ತಗ್ಗಿದೆ.

ರಜನಿಕಾಂತ್ ಅವರು ‘ಜೈಲರ್’ ರಿಲೀಸ್ಗೂ ಮೊದಲೇ ಹಿಮಾಚಲ ಪ್ರದೇಶ ಭಾಗಕ್ಕೆ ತೆರಳಿದ್ದರು. ಅಲ್ಲಿ ಹಲವು ಅಧ್ಯಾತ್ಮ ಗುರುಗಳನ್ನು ಭೇಟಿ ಮಾಡಿ ಅವರು ಬಂದಿದ್ದರು. ಈ ಫೋಟೋಗಳು ವೈರಲ್ ಆಗಿದ್ದವು.
Published On - 1:07 pm, Tue, 29 August 23



















