- Kannada News Photo gallery Rakshitha Shetty Is The Bigg Boss Kannada Season 12 Winner Wikipedia Wrong Update geos Viral
‘ರಕ್ಷಿತಾ ಶೆಟ್ಟಿ ವಿನ್ನರ್’; ವೀಕ್ಷಕರಿಗೆ ಶಾಕ್ ಕೊಟ್ಟ ವಿಕಿಪೀಡಿಯಾ
ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ನಡೆಯುತ್ತಿದೆ. ಸಂಜೆ ಆರು ಗಂಟೆಯಿಂದ ಫಿನಾಲೆ ಆರಂಭ ಆಗುತ್ತಿದೆ. ಹೀಗಿರುವಾಗಲೇ ವಿನ್ನರ್ ಘೋಷಣೆ ಆಗಿದೆ. ಹಾಗಂದ ಮಾತ್ರಕ್ಕೆ ಇದು ಸುದೀಪ್ ಮಾಡಿದ ಘೋಷಣೆ ಅಲ್ಲ. ಈ ಘೋಷಣೆ ಮಾಡಿದ್ದು, ವಿಕಿಪೀಡಿಯಾ. ಇದು ವೀಕ್ಷಕರಿಗೆ ಶಾಕ್ ಕೊಟ್ಟಿದೆ.
Updated on:Jan 18, 2026 | 6:25 PM

ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ನಡೆಯುತ್ತಿದೆ. ರಘು, ಗಿಲ್ಲಿ ನಟ, ರಕ್ಷಿತಾ, ಅಶ್ವಿನಿ ಗೌಡ, ಧನುಶ್ ಹಾಗೂ ಅಶ್ವಿನಿ ಅವರು ಬಿಗ್ ಬಾಸ್ ಫಿನಾಲೆಯಲ್ಲಿ ಇದ್ದಾರೆ. ಇವರ ಪೈಕಿ ಒಬ್ಬರಿಗೆ ಗೆಲುವು ಸಿಗಲಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಕ್ಷಿತಾ ಶೆಟ್ಟಿ ಅವರು ಟಫ್ ಫೈಟ್ ನೀಡುತ್ತಿದ್ದಾರೆ. ಅವರು ಬಂದ ವಾರವೇ ಮನೆಯಿಂದ ಹೊರಹೋಗಿದ್ದರು. ನಂತರ ಅವರನ್ನು ಮತ್ತೆ ಕರೆಸಲಾಯಿತು.

ಈಗ ರಕ್ಷಿತಾ ಅವರೇ ವಿನ್ನರ್ ಎಂದು ಘೋಷಣೆ ಆಗಿದೆ. ಇದನ್ನು ಮಾಡಿದ್ದು ವಿಕಿಪೀಡಿಯಾ. ವಿಕಿಪೀಡಿಯಾದಲ್ಲಿ ರಕ್ಷಿತಾ ವಿನ್ನರ್ ಎಂದು ಬರೆಯಲಾಗಿದೆ. ಈ ರೀತಿ ಎಡಿಟ್ ಮಾಡಲಾದ ಪೋಸ್ಟ್ ವೈರಲ್ ಆಗಿದೆ. ನಂತರ ಇದನ್ನು ಬದಲಾಯಿಸಲಾಗಿದೆ.

ವಿಕಿಪೀಡಿಯಾನ ಯಾರು ಬೇಕಿದ್ದರೂ ಎಡಿಟ್ ಮಾಡಬಹುದು. ಹೀಗಾಗಿ, ಯಾರೋ ರಕ್ಷಿತಾ ಅಭಿಮಾನಿಗಳು ಈ ಕೆಲಸ ಮಾಡಿರಬಹುದು ಎಂದು ಹೇಳಲಾಗುತ್ತಾ ಇದೆ. ರಾತ್ರಿ ವೇಳೆಗೆ ವಿನ್ನರ್ ಘೋಷಣೆ ಆಗಲಿದೆ.

ಕಿಚ್ಚ ಸುದೀಪ್ ಅವರು ವಿನ್ನರ್ ಘೋಷಣೆ ಮಾಡಲಿದ್ದಾರೆ. ರಕ್ಷಿತಾ ಶೆಟ್ಟಿಗೆ ರನ್ನರ್ ಅಪ್ ಸ್ಥಾನ ಸಿಗಬಹುದು ಎಂಬುದು ಅಭಿಮಾನಿಗಳ ಊಹೆ. ಅಶ್ವಿನಿ ಗೌಡ ಕೂಡ ಒಳ್ಳೆಯ ರೀತಿಯಲ್ಲಿ ಫೈಟ್ ನೀಡುತ್ತಿದ್ದಾರೆ.
Published On - 6:14 pm, Sun, 18 January 26




