Updated on: Mar 01, 2023 | 10:59 AM
ರಾಕುಲ್ ಪ್ರೀತ್ ಸಿಂಗ್ ಅವರು ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ರಾಕುಲ್ ಪ್ರೀತ್ ಸಿಂಗ್ಗೆ ಇತ್ತೀಚೆಗೆ ಅದೃಷ್ಟ ಕೈಕೊಟ್ಟಿದೆ. ಅವರ ಸಿನಿಮಾಗಳು ಸಾಲು ಸಾಲು ಫ್ಲಾಪ್ ಆಗುತ್ತಿರುವ ಬಗ್ಗೆ ಮಾತನಾಡಿದ್ದಾರೆ.
2022ರಲ್ಲಿ ರಾಕುಲ್ ನಟನೆಯ ಐದು ಚಿತ್ರಗಳು ರಿಲೀಸ್ ಆದವು. ಅಟ್ಯಾಕ್, ರನ್ವೇ 34, ಕಟ್ಪುಟ್ಲಿ, ಡಾಕ್ಟರ್ ಜಿ, ಥ್ಯಾಂಕ್ ಗಾಡ್ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಲು ವಿಫಲ ಆದವು. ಈಗ ರಾಕುಲ್ ಪ್ರೀತ್ ಸಿಂಗ್ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಬಾಕ್ಸ್ ಆಫೀಸ್ ಗಳಿಕೆ ಮೇಲೆ ಚಿತ್ರ ಫ್ಲಾಪ್ ಅಥವಾ ಹಿಟ್ ಎಂಬುದನ್ನು ಅಳೆಯಲಾಗುತ್ತದೆ. ಆ ರೀತಿ ಮಾಡಬಾರದು ಅನ್ನೋದು ರಾಕುಲ್ ಅಭಿಪ್ರಾಯ. ಇದನ್ನು ಅವರು ವಿವರಿಸಿದ್ದಾರೆ.
‘ಪ್ರತಿ ವಾರ ಸಿನಿಮಾ ರಿಲೀಸ್ ಆಗುತ್ತದೆ. ಕೆಲವೊಮ್ಮೆ ವಾರಕ್ಕೆ ಎರಡು ಚಿತ್ರಗಳು ತೆರೆಗೆ ಬರುತ್ತವೆ. ಎಲ್ಲ ಚಿತ್ರಗಳನ್ನು ಜನರು ನೋಡಬೇಕು ಎಂದು ಬಯಸಿದರೆ ತಪ್ಪಾಗುತ್ತದೆ. ಎಲ್ಲ ಚಿತ್ರಗಳನ್ನೂ ನೋಡೋಕೆ ಜನರ ಬಳಿ ದುಡ್ಡಿಲ್ಲ. ಹೀಗಾಗಿ ಬಾಕ್ಸ್ ಆಫೀಸ್ ಗಳಿಕೆ ಮೇಲೆ ಸಿನಿಮಾನ ಅಳೆಯಬಾರದು’ ಎಂದಿದ್ದಾರೆ ರಾಕುಲ್.
ರಾಕುಲ್ ಪ್ರೀತ್ ಸಿಂಗ್ ಅವರು ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಈ ಕಾರಣಕ್ಕೂ ಅವರು ಸುದ್ದಿಯಲ್ಲಿದ್ದಾರೆ.