- Kannada News Photo gallery Ramya Dubai trip with Shiva Rajkumar and Geetha Shiva Rajkumar here is the pics
ಶಿವಣ್ಣ-ಗೀತಕ್ಕ ದಂಪತಿ ಜೊತೆ ದುಬೈ ಸುತ್ತಾಡಿದ ರಮ್ಯಾ: ಚಿತ್ರಗಳ ನೋಡಿ
Shiva Rajkumar-Ramya: ರಮ್ಯಾ, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಅವರುಗಳ ಜೊತೆಗೆ ದುಬೈನಲ್ಲಿ ಸುತ್ತಾಡಿದ್ದಾರೆ. ಚಿತ್ರಗಳನ್ನು ಸಹ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ದುಬೈ ಕನ್ನಡಿಗರ ಕೂಟ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಮ್ಯಾ, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು. ಇಲ್ಲಿವೆ ನೋಡಿ ಚಿತ್ರಗಳು...
Updated on: Nov 12, 2025 | 1:37 PM

ನಟಿ ರಮ್ಯಾ, ದೊಡ್ಮನೆಗೆ ಬಹಳ ಆಪ್ತರು. ತಮ್ಮದೇ ಕುಟುಂಬದಲ್ಲಿ ಒಬ್ಬ ಸದಸ್ಯೆಯಂತೆಯೇ ಅವರನ್ನು ದೊಡ್ಮನೆಯವರು ಸಹ ಅವರನ್ನು ನೋಡುತ್ತಾ ಬಂದಿದ್ದಾರೆ.

ಇದೀಗ ರಮ್ಯಾ, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಅವರುಗಳ ಜೊತೆಗೆ ದುಬೈನಲ್ಲಿ ಸುತ್ತಾಡಿದ್ದಾರೆ. ಚಿತ್ರಗಳನ್ನು ಸಹ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಗಲ್ಫ್ ಕನ್ನಡ ಮೂವೀಸ್ ಮತ್ತು ದುಬೈ ಕನ್ನಡಿಗರ ಕೂಟ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಮ್ಯಾ, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ರಮ್ಯಾ, ಗೀತಾ ಶಿವರಾಜ್ ಕುಮಾರ್, ಶಿವರಾಜ್ ಕುಮಾರ್ ಇತರೆ ಗಣ್ಯರು ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ನಟಿ ರಮ್ಯಾ ಅವರಿಗೆ ಸನ್ಮಾನ ಮಾಡಲಾಯ್ತು.

ಕಾರ್ಯಕ್ರಮದ ಬಳಿಕ ರಮ್ಯಾ ಅವರು ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಅವರುಗಳೊಟ್ಟಿಗೆ ದುಬೈನಲ್ಲಿ ಸುತ್ತಾಟ ನಡೆಸಿದ್ದಾರೆ. ಈ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಶಿವಣ್ಣ ಮತ್ತು ಗೀತಕ್ಕ ಅವರೊಂದಿಗೆ ಕಳೆದ ಕ್ಷಣಗಳು ನನ್ನ ಅತ್ಯುತ್ತಮ ಕ್ಷಣಗಳು ಇಲ್ಲಿವೆ. ಅವರ ಪ್ರೀತಿ, ವಾತ್ಸಲ್ಯ, ಸರಳತೆ ಮತ್ತು ಹಾಸ್ಯಪ್ರಜ್ಞೆ ನನ್ನ ಪ್ರವಾಸವನ್ನು ನಿಜವಾಗಿಯೂ ಸ್ಮರಣೀಯವಾಗಿಸಿತು. ನನ್ನ ನೆಚ್ಚಿನ ದಂಪತಿಗಳು ಇವರು ಎಂದಿದ್ದಾರೆ ರಮ್ಯಾ




