AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಜಾಂ: ಬೀದಿಗೆ ಬಿದ್ದ ಗದ್ದೆ ರಂಗನಾಥ ಸ್ವಾಮಿ ಮೂರ್ತಿ! ಹೆದ್ದಾರಿ ಅಥಾರಿಟಿ ವಿರುದ್ದ ಭಕ್ತಗಣ ಕಡು ಕೋಪ, ಯಾಕೆ ಈ ಪರಿಸ್ಥಿತಿ?

Ranganath swamy temple: ಹೈವೆ ಅಥಾರಿಟಿ ಆಫ್ ಇಂಡಿಯಾ (High way authority) ಹಾಗೂ ಸ್ಥಳೀಯ ತಾಲೂಕು ಆಡಳಿತ ಮಾಡಿದ ಎಡವಟ್ಟಿಗೆ ಒಂದು ದೇವಾಲಯವೇ ನಾಶವಾದಂತಾಗಿದೆ.. ಪುರಾಣಗಳ ಐತಿಹ್ಯವುಳ್ಳ ಪ್ರಸಿದ್ದ ಗದ್ದೆ ರಂಗನಾಥಸ್ವಾಮಿ ದೇವಾಲಯ ದುಃಸ್ಥಿತಿ ಯಾರಿಗೂ ಹೇಳ ತೀರದಂತಾಗಿದೆ..

ಸಾಧು ಶ್ರೀನಾಥ್​
|

Updated on: May 31, 2023 | 12:46 PM

Share
ಸಾಮಾನ್ಯವಾಗಿ ಜನಸಾಮಾನ್ಯರಿಗೆ ಸಂಕಷ್ಟ ಎದುರಾದ್ರೆ ಎಲ್ಲರು ದೇವರ ಮೊರೆ ಹೋಗ್ತಾರೆ, ಸಂಕಷ್ಟ ಪರಿ ಹರಿಸುವಂತೆ ಬೇಡುತ್ತಾರೆ, ಆದ್ರೆ ಜನರ ಕಷ್ಟ ಆಲಿಸೊ ಪರಮಾತ್ಮನಿಗೆ ಕಷ್ಟ ಎದುರಾದ್ರೆ ಎಲ್ಲಿಗೆ ಹೋಗ್ಬೇಕು, ಯಾರ ಬಳಿ ದೂರು ಕೊಡಬೇಕು?? ಅಂತಹುದೆ ಒಂದು ಪರಿಸ್ಥಿತಿ ಈಗ ಮಂಡ್ಯದಲ್ಲಿ ಎದುರಾಗಿದೆ.

1 / 7
 Ranganath swamy temple: ಅಸಲಿಗೆ ಸಂಕಷ್ಟ ಬಂದಿರುವುದಾದ್ರು ಯಾರಿಗೆ ಅಂತೀರಾ? ಈ ರಿಪೋರ್ಟ್ ನೋಡಿ. ಬೇಕಾ ಬಿಟ್ಟಿಯಾಗಿ ಬಿದ್ದಿರುವ ಬೃಹದಾಕಾರದ ಕಲ್ಲುಗಳು.. ಕಾಟಾಚಾರಕ್ಕೆ ಒಂದಿಷ್ಟು ಫೌಂಡೇಷನ್ ಹಾಕಿರುವ ಸ್ಥಿತಿಯಲ್ಲಿ ಕಾಣ ಸಿಗುತ್ತಿರೊ ಅವಶೇಷಗಳು.. ಅನಾಥವಾಗಿ ಬಿದ್ದಿರುವ ಗದ್ದೆ ರಂಗನಾಥಸ್ವಾಮಿ (Ranganath swamy temple) ಬೃಹತ್ ಮೂರ್ತಿ ಕಲ್ಲು.. ಈ ಎಲ್ಲ ದೃಶ್ಯ ಕಣ್ಣಿಗೆ ಬಿದ್ದಿದ್ದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂನಲ್ಲಿ.. (ವರದಿ: ಸೂರಜ್ ಪ್ರಸಾದ್, ಟಿವಿ9, ಮಂಡ್ಯ)

2 / 7
ಹೌದು ಹೈವೆ ಅಥಾರಿಟಿ ಆಫ್ ಇಂಡಿಯಾ (High way authority) ಹಾಗೂ ಸ್ಥಳೀಯ ತಾಲೂಕು ಆಡಳಿತ ಮಾಡಿದ ಎಡವಟ್ಟಿಗೆ ಒಂದು ದೇವಾಲಯವೇ ನಾಶವಾದಂತಾಗಿದೆ.. ಪುರಾಣಗಳ ಐತಿಹ್ಯವುಳ್ಳ ಪ್ರಸಿದ್ದ ಗದ್ದೆ ರಂಗನಾಥಸ್ವಾಮಿ ದೇವಾಲಯ ದುಃಸ್ಥಿತಿ ಯಾರಿಗೂ ಹೇಳ ತೀರದಂತಾಗಿದೆ.. ಸೂಕ್ತ ಪರಿಹಾರ ನೀಡುವ ಬದಲು ತಾಲೂಕು ಆಡಳಿತ ಕೈಕಟ್ಟಿ ಕುಳಿತುಕೊಂಡಿದ್ದೆ ಇಷ್ಟೆಲ್ಲಾ ಅಚಾತುರ್ಯ, ಅಪಚಾರಕ್ಕೆ ಕಾರಣವಾಗಿದೆ.

3 / 7
ಆಗಿದ್ದಿಷ್ಟೆ. ಬೆಂಗಳೂರು-ಮೈಸೂರು ದಶಪಥ ರಸ್ತೆಯ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ನಾಲ್ಕು ವರ್ಷಗಳ ಹಿಂದೆ ಹೈವೆ ರೋಡ್ ಗಾಗಿ ಜಮೀನುಗಳನ್ನ ಪರಬಾರೆ ಮಾಡಲಾಯ್ತು,ಈ ವೇಳೆ ಗದ್ದೆರಂಗನಾಥ ಸ್ವಾಮಿ ದೇವಾಲಯವಿದ್ದ ಸ್ಥಳ ಕೂಡ ಹೈವೆ ಅಥಾರಿಟಿ ಆಫ್ ಇಂಡಿಯಾ ಪರಭಾರೆ ಮಾಡಿಕೊಂಡಿತು. ಈ ವೇಳೆ ಗದ್ದೆ ರಂಗನಾಥ ಸ್ವಾಮಿ ದೇವಾಲಯವನ್ನ ತೆರವುಗೊಳಿಸಲಾಯ್ತ.

4 / 7
ಅದಕ್ಕೆ ಪರ್ಯಾಯಾ ದೇವಾಲಯ ನಿರ್ಮಾಣ ಮಾಡಿ ಕೊಡುವುದಾಗಿ ಹೈವೆ ಅಥಾರಿಟಿ ಹಾಗೂ ಸ್ಥಳೀಯ ಆಡಳಿತ ಮಾತು ಕೊಟ್ಟಿತ್ತು. ಕೊಟ್ಟ ಮಾತಿನಂತೆ ಸರ್ವೀಸ್ ರಸ್ತೆಯಲ್ಲಿ ಸೂಕ್ತ ಸ್ಥಳ ಸಹ ಗುರುತು ಮಾಡಿ ನಿರ್ಮಾಣ ಕಾರ್ಯ ಸಹ ಆರಂಭಮಾಡಿತ್ತು.

5 / 7
ಆದ್ರೆ ಆಗ ಆರಂಭಶೂರತ್ವ ತೋರಿದ್ದ ಸ್ಥಳೀಯ ಆಡಳಿತ ಹಾಗೂ ಹೈವೆ ಅಥಾರಿಟಿ ಈಗ ನಿರ್ಲಕ್ಷ್ಯ ವಹಿಸಿದ ಪರಿಣಾಮವೇ ಇಂದಿಗೂ ದೇವಾಲಯ ನಿರ್ಮಾಣ ಆಗಿಲ್ಲ, ಮೂರ್ತಿಯ ಕೆತ್ತನೆಗಳು ಹಾಗೆಯೆ ಬೀದಿ ಬದಿ ಬಿದ್ದಿವೆ ಎಂದು ಪುರೋಹಿತರಾದ ಭಾನುಪ್ರಕಾಶ್ ಶರ್ಮಾ ವಿಷಾದ ವ್ಯಕ್ತಪಡಿಸಿದ್ದಾರೆ.

6 / 7
ಗದ್ದೆ ರಂಗನಾಥ ಸ್ವಾಮಿ ದೇವಾಲಯಕ್ಕಾದ ಅನ್ಯಾಯ, ಅಪಚಾರವನ್ನ ಗ್ರಾಮಸ್ಥರು ವಿರೋಧಿಸಿದ್ದಾರೆ. ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳದೆ ಇದ್ರೆ ಉಗ್ರ ಹೋರಾಟದ ಎಚ್ಚರಿಕೆಯನ್ನ ಭಕ್ತಗಣ ಸರ್ಕಾರಕ್ಕೆ ನೀಡಿದ್ದಾರೆ. ಈ ಮಂದ ಅಧಿಕಾರಿಗಳು ಯಾವಾಗ ಎಚ್ಚೆತ್ತು ದೇವಾಲಯ ಪೂರ್ಣ ಮಾಡ್ತಾರೊ ಕಾದು ನೋಡ್ಬೇಕಿದೆ.

7 / 7
Follow Us
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ

ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು

ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್

SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ

ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು

ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್

ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ

ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು

ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ

ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ