ಕೊಡವ ಶೈಲಿಯಲ್ಲಿ ಸೀರೆ ಧರಿಸಿ ಮಿಂಚಿದ ರಶ್ಮಿಕಾ ಮಂದಣ್ಣ; ಅಭಿಮಾನಿಗಳಿಂದ ಸಿಕ್ತು ಮಿಲಿಯನ್ ಲೈಕ್ಸ್
‘ಪುಷ್ಪ 2’ ನಟಿ ರಶ್ಮಿಕಾ ಮಂದಣ್ಣ ಅವರು ಕೊಡವ ಶೈಲಿಯಲ್ಲಿ ಸೀರೆ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಅವರ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿವೆ.
Updated on: May 22, 2022 | 11:22 AM

Rashmika Mandanna drapes Kodava saree and shares photo on social media

Rashmika Mandanna drapes Kodava saree and shares photo on social media

ರಶ್ಮಿಕಾ ಈಗ ಬಹುಭಾಷೆಯಲ್ಲಿ ಫೇಮಸ್ ಆಗಿದ್ದಾರೆ. ಹಾಗಾಗಿ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಕೋಟ್ಯಂತರ ಜನರು ಫಾಲೋ ಮಾಡುತ್ತಾರೆ. ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಏನಾದರೂ ಪೋಸ್ಟ್ ಮಾಡುತ್ತಾ ಇರುತ್ತಾರೆ.

ಕೊಡವ ಶೈಲಿಯಲ್ಲಿ ಸೀರೆ ಧರಿಸಿ ರಶ್ಮಿಕಾ ಮಂದಣ್ಣ ಹಂಚಿಕೊಂಡಿರುವ ಈ ಫೋಟೋ ಅವರ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ. ಕೆಲವೇ ಗಂಟೆಗಳು ಕಳೆಯುವುದರೊಳಗೆ ಈ ಫೋಟೋಗೆ ಬರೋಬ್ಬರಿ 17 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಬಟನ್ ಒತ್ತಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವುದರಿಂದ ರಶ್ಮಿಕಾ ಮಂದಣ್ಣ ಅವರಿಗೆ ಫ್ಯಾಮಿಲಿ ಜೊತೆ ಸಮಯ ಕಳೆಯಲು ಕೂಡ ಬಿಡುವು ಸಿಗುತ್ತಿಲ್ಲ. ಆದರೆ ಬಾಲ್ಯದ ಸ್ನೇಹಿತೆಯ ಮದುವೆಗಾಗಿ ಅವರು ಬಿಡುವು ಮಾಡಿಕೊಂಡು ಕೊಡಗಿಗೆ ಬಂದಿದ್ದಾರೆ. ಎಲ್ಲರ ಜತೆ ಖುಷಿಗಾಗಿ ಕಾಲ ಕಳೆದಿದ್ದಾರೆ.




