Relationship: ನಿಮ್ಮ ಈ ವರ್ತನೆಯಿಂದ Boy Friend ದೂರವಾಗಬಹುದು
ನಿಮ್ಮ ಲವರ್ ಜೊತೆಗೆ ಹೇಗಿರಬೇಕು, ಅವರು ನಿಮ್ಮ ಯಾವ ಗುಣಗಳನ್ನು ಇಷ್ಟಪಡುವುದಿಲ್ಲ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು.
Updated on:Aug 27, 2022 | 5:23 PM

your behavior

Attitude

ತುಂಬಾ ಅಲಂಕಾರ ಮಾಡಿಕೊಳ್ಳುವುದು: ನಿಮ್ಮ ಗೆಳೆಯನಿಗೆ ನೀವು ಮಾಡುವ ಓವರ್ ಮೇಕಪ್ ಇಷ್ಟವಾಗದೇ ಇರಬಹುದು. ಇದು ನಿಮ್ಮ ಮೇಲೆ ಅವರಿಗೆ ಅಸಮಾಧನವನ್ನು ಉಂಟು ಮಾಡುಬಹುದು. ಈ ವರ್ತನೆಯಿಂದ ಅವರ ಮುಂದು ನಿಮ್ಮ ಬಗ್ಗೆ ಅವರ ಸ್ನೇಹಿತರು ಕೆಟ್ಟದಾಗಿ ಕಮೆಂಟ್ ಮಾಡಬಹುದು, ಇದು ನಿಮ್ಮ ಸಂಬಂಧದ ಮೇಲೆ ನಿಶಕ್ತ ಪರಿಣಾಮವನ್ನು ಉಂಟು ಮಾಡಬಹುದು.

ನಿಮ್ಮ ಸೆಲ್ಫೀ ಹುಚ್ಚು: ನಿಮ್ಮ ಸೆಲ್ಫೀ ಹುಚ್ಚು ಅವರಿಗೆ ಸ್ವಲ್ಪ ಇರಿಸುಮುರಿಸು ಎಂದೆನ್ನಿಸಬಹುದು. ಇದು ನಿಮ್ಮ ಪ್ರೀತಿ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡಬಹುದು. ಇದು ನಿಮ್ಮ ನಡುವಿನ ತಾಳ್ಮೆ, ವಿಶ್ವಾಸವನ್ನು ಹುಸಿ ಮಾಡಬಹುದು. ಸೆಲ್ಫೀ ತೆಗೆಯುವುದು ತಪ್ಪಲ್ಲ ಆದರೆ ಅದು ಹುಡುಗರಿಗೆ ತನ್ನ ಸ್ನೇಹಿತೆ ಜೊತೆಗೆ ಪದೇ ಪದೇ ತೆಗೆಸಿಕೊಳ್ಳವುದು ಸರಿಲ್ಲ ಎಂದು ಅನಿಸಬಹುದು.

ಪ್ರತಿಯೊಂದು ವಿಚಾರಕ್ಕೂ ಅಳುವುದು: ನೀವು ಪ್ರತಿಯೊಂದು ವಿಚಾರಕ್ಕೂ ಅಳುವುದು ಅವರಿಗೆ ಇಷ್ಟವಾಗದೇ ಇರಬಹುದು. ನಿಮ್ಮ ಕಣ್ಣೀರು ಅವರಿಗೆ ಹಿಂಸೆ ಎಂದು ಅನಿಸದಿದ್ದರು, ಅದು ಮತ್ತೆ ಮತ್ತೆ ಪುನರ್ವತನೆವಾದರೆ ಅವರಿಗೆ ಮತ್ತೆ ಅದು ಹಿಂಸೆ ಎಂದು ಭಾಸವಾಗುತ್ತದೆ. ನಿಮಗೆ ಎಲ್ಲ ವಿಷಯದಲ್ಲೂ ಧೈರ್ಯ ಇಲ್ಲ ಎಂಬ ಭಾವನೆ ಅವರಿಗೆ ಬರಬಾರದು, ಎಲ್ಲ ವಿಚಾರ ನೀವು ಭಾವುಕರಾಗಿರುವುದು ಅವರಿಗೆ ಸಮಸ್ಯೆ ಎಂದೆನ್ನಿಸಬಹುದು.

ಪ್ರತಿ ವಿಷಯದಲ್ಲೂ ಕಿರಿಕ್ ಮಾಡುವುದು: ನೀವು ಅವರಿಗೆ ಪ್ರತಿ ವಿಚಾರದಲ್ಲೂ ಕಿರಿಕ್ ಮಾಡಲು ಹೋಗಬೇಡಿ ಏಕೆಂದರೆ ಅವರಿಗೆ ನಿಮ್ಮ ಮೇಲಿನ ಪ್ರೀತಿಗೆ ಈ ಕಿರಿಕ್ ಸ್ವಭಾವ ತೊಂದರೆ ನೀಡಬಹುದು. ಅವರನ್ನು ಎಲ್ಲದಕ್ಕೂ ಪ್ರಶ್ನೆ ಮಾಡಲು ಹೋಗಬೇಡಿ, ಕೆಲವೊಂದು ವಿಚಾರದಲ್ಲಿ ಅವರ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಿ.
Published On - 5:19 pm, Sat, 27 August 22



















