ಪುರುಷ ಪ್ರಧಾನ ವ್ಯವಸ್ಥೆಯನ್ನು ನಾಶ ಮಾಡಿ: ಸ್ಟೈಲ್ ಆಗಿ ಹೇಳಿದ ಸುಶಾಂತ್ ಮಾಜಿ ಗೆಳತಿ ರಿಯಾ
Rhea Chakraborty: ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ಪುರುಷ ಪ್ರಭುತ್ವವನ್ನು ಅಂತ್ಯಗೊಳಿಸಿ ಎಂಬ ಸಂದೇಶವನ್ನು ಸಖತ್ ಸ್ಟೈಲ್ ಆಗಿ ನೀಡಿದ್ದಾರೆ.
Updated on: Oct 06, 2023 | 9:04 PM

ದಿವಂಗತ ನಟ ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ಹೊಸ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ರಿಯಾ ಕಡು ನೀಲಿ ಬಣ್ಣದ ಬಟ್ಟೆಯನ್ನು ತೊಟ್ಟಿದ್ದು, ಆ ಬಟ್ಟೆಯ ಮೂಲಕ ಸಂದೇಶವೊಂದನ್ನು ಸಹ ಹಂಚಿಕೊಂಡಿದ್ದಾರೆ.

ರಿಯಾ ತೊಟ್ಟಿರುವ ಬಟ್ಟೆಯ ಮೇಲೆ 'ಪುರುಷ ಪ್ರಧಾನ ವ್ಯವಸ್ಥೆಯನ್ನು ನಾಶ ಮಾಡಿ' ಎಂದು ಇಂಗ್ಲೀಷ್ನಲ್ಲಿ ಬರೆದಿದೆ.

ರಿಯಾ ಚಕ್ರವರ್ತಿ ಹೀಗೆ ಸಂದೇಶಗಳನ್ನು ಮುದ್ರಿಸಿದ ಬಟ್ಟೆಗಳನ್ನು ತೊಟ್ಟು ತನ್ನ ಮನದ ಮಾತನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸುಶಾಂತ್ ಸಿಂಗ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಸಮಸ್ಯೆ ಎದುರಿಸಿದ್ದಾಗಲೂ ಇದೇ ರೀತಿಯ ಸಂದೇಶವುಳ್ಳ ಟಿ-ಶರ್ಟ್ ಧರಿಸಿ ಕೋರ್ಟ್ಗೆ ಹಾಜರಾಗಿದ್ದರು.

ರಿಯಾ ಧರಿಸಿದ್ದ ಟಿ-ಶರ್ಟ್ ಮೇಲಿದ್ದ ಸಂದೇಶ ಆ ಸಮಯದಲ್ಲಿ ವೈರಲ್ ಆಗಿತ್ತು, ರಿಯಾರನ್ನು ಬೆಂಬಲಿಸುವ ಹಲವು ನಟಿಯರು, ನಟರು ಅದೇ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಸುಶಾಂತ್ ನೆನಪಿನಿಂದ ಹೊರಬಂದಂತಿರುವ ರಿಯಾ ಚಕ್ರವರ್ತಿ ಈಗ ಕೆಲವು ರಿಯಾಲಿಟಿ ಶೋ, ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.



















