
ನಟ ಯಶ್ ಅವರು ಎಲ್ಲಿಯೇ ಅಟೆಂಡೆನ್ಸ್ ಹಾಕಿದರೂ ಒಂದು ಗತ್ತು ಇರುತ್ತದೆ. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಾ ಇರುತ್ತವೆ. ಈಗ ಯಶ್ ಅವರ ಫೋಟೋ ಒಂದು ವೈರಲ್ ಆಗಿ ಗಮನ ಸೆಳೆದಿದೆ. ಇದರಲ್ಲಿ ಅವರು ಹ್ಯಾಂಡ್ಸಮ್ ಹಂಕ್ ರೀತಿ ಕಾಣಿಸಿಕೊಂಡಿದ್ದಾರೆ.

‘ಉಗ್ರಂ’, ‘ಕೆಜಿಎಫ್’, ‘ಕೆಜಿಎಫ್ 2’ ರೀತಿಯ ಸಿನಿಮಾಗಳಲ್ಲಿ ಛಾಯಾಗ್ರಹಕನಾಗಿ ಕೆಲಸ ಮಾಡಿದವರು ಭುವನ್ ಗೌಡ. ಅವರ ವಿವಾಹ ಅದ್ದೂರಿಯಾಗಿ ನೆರವೇರಿದೆ. ಯಶ್ ಅವರು ಈ ವಿವಾಹಕ್ಕೆ ಹಾಜರಿ ಹಾಕಿ ವಿಶ್ ಮಾಡಿದ್ದಾರೆ.

ಯಶ್ ಅವರು ನವದಂಪತಿಗೆ ಖುಷಿ ಖುಷಿಯಿಂದ ಶುಭಾಶಯ ತಿಳಿಸಿದ್ದಾರೆ. ನವ ದಂಪತಿಗೆ ಅಕ್ಷತೆ ಹಾಕಿ ಹಾರೈಸಿದ್ದಾರೆ. ಯಶ್ ಅವರು ಮದುವೆಗೆ ಬಂದಿದ್ದಕ್ಕೆ ಭುವನ್ ಗೌಡ ಕೂಡ ಹಾಗೂ ಕುಟುಂಬ ತುಂಬಾನೇ ಖುಷಿಪಟ್ಟಿತು.

‘ಕೆಜಿಎಫ್ 2’ ಬಳಿಕ ಯಶ್ ಅವರು ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಿಲ್ಲ. ‘ಕೆಜಿಎಫ್ 3’ ಕೂಡ ಸೆಟ್ಟೇರೋದು ಇದೆ. ಅದು ಯಾವಾಗ, ಏನು ಎಂಬ ಬಗ್ಗೆ ಇನ್ನೂ ಕ್ಲ್ಯಾರಿಟಿ ಇಲ್ಲ. ಈ ಮಧ್ಯೆ ಯಶ್ ಹಾಗೂ ನೀಲ್ ಭೇಟಿ ಮಾಡಿದಂತೆ ಆಗಿದೆ.

ಭುವನ್ ಗೌಡ ಮದುವೆಯಲ್ಲಿ ಶ್ರೀನಿಧಿ ಶೆಟ್ಟಿ, ಶ್ರೀಲೀಲಾ, ಗರುಡಾ ರಾಮ್, ಪ್ರಶಾಂತ್ ನೀಲ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕರು ಹಾಜರಿ ಹಾಕಿದ್ದರು.

ಯಶ್ ಅವರು ಹ್ಯಾಂಡ್ಸಮ್ ಹಂಕ್ ರೀತಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್ಗೆ ಎಲ್ಲರೂ ಫಿದಾ ಆಗಿದ್ದಾರೆ. ಅವರ ಲುಕ್ ಸಾಕಷ್ಟು ಗಮನ ಸೆಳೆಯುವ ರೀತಿಯಲ್ಲಿ ಇದೆ. ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದರ ಜೊತೆಗೆ ‘ರಾಮಾಯಣ’ ಸಿನಿಮಾದಲ್ಲಿ ರಾವಣನಾಗಿಯೂ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.
Published On - 7:38 am, Sat, 25 October 25