Updated on:Sep 17, 2022 | 9:45 AM
ದಿನವಿಡೀ ಕಛೇರಿಯಲ್ಲಿ ಕೆಲಸ ಮಾಡುವುದು ಸವಾಲಾಗಿ ಹೋಗಿದೆ. ಅಂತಹ ಪರಿಸ್ಥಿತಿಯಲ್ಲಿ, ಮಧ್ಯಾಹ್ನದ ಊಟವನ್ನು ಮಾಡಲು ಸಾಧ್ಯವಾಗದಿದ್ದರೆ ಅಥವಾ ಮಧ್ಯದಲ್ಲಿ ಹಸಿವಾಗುತ್ತಿದ್ದರೆ, ಈ ಕಾರಣದಿಂದಾಗಿ ನೀವು ಆರೋಗ್ಯಕರ ಆಯ್ಕೆಗಳನ್ನು ಹುಡುಕುತ್ತಿದ್ದರೆ, ಇಂದು ನಾವು ನಿಮಗೆ ಕೆಲವು ಆರೋಗ್ಯಕರ ಸಲಾಡ್‌ಗಳ ಬಗ್ಗೆ ಹೇಳಲಿದ್ದೇವೆ. ಇದರಿಂದ ಹೊಟ್ಟೆ ತುಂಬುವುದರೊಂದಿಗೆ ಚೈತನ್ಯ ನೀಡುತ್ತದೆ.
ಬೀನ್ಸ್ ಮತ್ತು ಕಡಲೆಕಾಯಿ ಸಲಾಡ್ ಅತ್ಯುತ್ತಮವಾಗಿದೆ. ಈ ಸಲಾಡ್‌ನಲ್ಲಿ ರುಚಿಗೆ ಅನುಗುಣವಾಗಿ ಚೆರ್ರಿಗಳು, ದ್ರಾಕ್ಷಿಗಳು, ಟೊಮೆಟೊಗಳು ಮತ್ತು ಸೌತೆಕಾಯಿಗಳನ್ನು ಮಿಶ್ರಣ ಮಾಡಬಹುದು. ತಾಜಾತನವನ್ನು ಕಾಪಾಡಿಕೊಳ್ಳಲು ತುಳಸಿ ಎಲೆಗಳನ್ನು ಸೇರಿಸಬಹುದು.
ಕಪ್ಪು ಬೀನ್ಸ್ ಸಲಾಡ್ ದೀರ್ಘ ಹಸಿವನ್ನು ನೀಗಿಸಲು ತುಂಬಾ ಆರೋಗ್ಯಕರವಾಗಿದೆ. ಇದು ಅಡುಗೆಯ ಸಲಾಡ್ ಅಲ್ಲ. ಆವಕಾಡೊ ಪೇಸ್ಟ್ನ್ನು ಇದಕ್ಕೆ ಸೇರಿಸಲಾಗುತ್ತದೆ. ಇದಲ್ಲದೆ, ಯಾವುದೇ ನಿಮ್ಮ ನೆಚ್ಚಿನ ಗ್ರೀನ್ಸ್ ಇದಕ್ಕೆ ಸೇರಿಸಬಹುದು.
ಪಾಲಕ್: ಪಾಲಕ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ನಿಮ್ಮ ರುಚಿಗೆ ಅನುಗುಣವಾಗಿ ಆಲಿವ್ ಎಣ್ಣೆ, ಮೊಸರಿನೊಂದಿಗೆ ಇದನ್ನು ತಯಾರಿಸಿಕೊಳ್ಳಿ. ತ್ವರಿತ ಸಲಾಡ್ ಮಾಡುವ ಈ ವಿಧಾನವು ತುಂಬಾ ಆರೋಗ್ಯಕರವಾಗಿದೆ. ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ.
ಆವಕಾಡೊ, ವಾಲ್‌ನಟ್ಸ್, ಪಾಲಕ್ ಮತ್ತು ಸ್ಟ್ರಾಬೆರಿಗಳೊಂದಿಗೆ ತಯಾರಿಸಲಾದ ಈ ಸಲಾಡ್ನ್ನು ಬೇಯಿಸಿದ ಚಿಕನ್ ಅಥವಾ ಹುರಿದ ಸಾಲ್ಮನ್‌ನೊಂದಿಗೆ ತಿನ್ನಬಹುದು. ಕಛೇರಿಯಲ್ಲಿ ನಿಮ್ಮ ಹಸಿವು ನೀಗಿಸಲು ಇದು ತುಂಬಾ ಆರೋಗ್ಯಕರ ಸಲಾಡ್ ಆಗಿದೆ.
Published On - 8:00 am, Sat, 17 September 22