ಲೈಂಗಿಕ ಕಿರುಕುಳ ವಿಚಾರದಲ್ಲಿ ನಿಗೂಢ ಪೋಸ್ಟ್ ಹಾಕಿದ ಸಲ್ಮಾನ್ ಖಾನ್ ಮಾಜಿ ಪ್ರೇಯಸಿ
ಸೋಮಿ ಅಲಿ ಬಾಲಿವುಡ್ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಎಲ್ಲವನ್ನೂ ಬಿಟ್ಟು ತಮ್ಮದೇ ಎನ್ಜಿಒ ಕಟ್ಟಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ.
Updated on: Mar 30, 2022 | 10:13 PM

ಸಲ್ಮಾನ್ ಖಾನ್ ಹಲವು ನಟಿಯರ ಜತೆ ಸುತ್ತಾಟ ನಡೆಸಿದ್ದರು. ಆ ಪೈಕಿ ಸೋಮಿ ಅಲಿ ಕೂಡ ಒಬ್ಬರು. ಕೆಲವು ಚಿತ್ರಗಳಲ್ಲಿ ನಟಿಸಿರುವ ಅವರು, ಸಲ್ಮಾನ್ ಖಾನ್ ಜತೆ ಸುತ್ತಾಟ ನಡೆಸಿದ್ದರು. ಅವರು ಆಗಾಗ ಚರ್ಚೆಗೆ ಬರುತ್ತಿರುತ್ತಾರೆ.

ಸೋಮಿ ಅಲಿ ಬಾಲಿವುಡ್ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಎಲ್ಲವನ್ನೂ ಬಿಟ್ಟು ತಮ್ಮದೇ ಎನ್ಜಿಒ ಕಟ್ಟಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಸೋಮಿ ನಿಗೂಢ ಅರ್ಥದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ.

‘ನೀವು ಬಾಲಿವುಡ್ನ ಹಾರ್ವೆ ವೈನ್ಸ್ಟೀನ್! ನಿಮ್ಮ ವಿಚಾರಗಳು ಬಹಿರಂಗಗೊಳ್ಳುತ್ತವೆ. ನಿಮ್ಮಿಂದ ನಿಂದನೆಗೆ ಒಳಗಾದ ಮಹಿಳೆಯರು ಮುಂದೊಂದು ದಿನ ಎಲ್ಲರ ಎದುರು ಬಂದು ಸತ್ಯವನ್ನು ಹಂಚಿಕೊಳ್ಳುತ್ತಾರೆ, ಐಶ್ವರ್ಯಾ ರೈ ಅವರಂತೆ’ ಎಂದಿದ್ದಾರೆ ಸೋಮಿ. ಹಾರ್ವೆ ವೈನ್ಸ್ಟೀನ್ ಹಾಲಿವುಡ್ನ ಮಾಜಿ ನಿರ್ಮಾಪಕರು. ಇವರ ವಿರುದ್ಧ ಕೇಳಿ ಬಂದ ಲೈಂಗಿಕ ಕಿರುಕುಳ ಆರೋಪ ಸಾಬೀತಾಗಿತ್ತು.

ಸದ್ಯ ಈ ಪೋಸ್ಟ್ನ ಅರ್ಥವೇನು? ಸೋಮಿ ಹೀಗೇ ಹೇಳೋಕೆ ಕಾರಣವೇನು? ಎಂಬಿತ್ಯಾದಿ ಪ್ರಶ್ನೆಗಳು ಮೂಡಿವೆ. ಅವರು ಹೇಳಿದ್ದು ಯಾರ ಬಗ್ಗೆ ಎನ್ನುವ ಕುತೂಹಲವೂ ಮೂಡಿದೆ.

1992-97ರ ಅವಧಿಯಲ್ಲಿ ಸೋಮಿ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದರು. ಈ ವೇಳೆ ಸಲ್ಮಾನ್ ಖಾನ್ ಜತೆ ಅವರು ರಿಲೇಶನ್ಶಿಪ್ನಲ್ಲಿದ್ದರು. ನಂತರ ಇಬ್ಬರ ಸಂಬಂಧ ಮುರಿದು ಬಿದ್ದಿತ್ತು.

TV9 Kannada
Read More



