- TV9 Kannada Photo gallery Salman Khan Reacts to Health Rumors with Cryptic Instagram Post Shares Fresh Pics
ವಯಸ್ಸಾಗಿದೆ ಎಂದವರಿಗೆ ತಿರುಗೇಟು ಕೊಟ್ಟ ನಟ ಸಲ್ಮಾನ್ ಖಾನ್
ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಯಲ್ಲಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅವರ ಮುಖದಲ್ಲಿ ವಯಸ್ಸಾದ ಕಳೆ ಹಾಗೂ ಅತಿಯಾದ ನಿಶ್ಯಕ್ತಿ ಕಂಡುಬಂದ ಹಿನ್ನೆಲೆಯಲ್ಲಿ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ನಟ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ವಿಭಿನ್ನವಾಗಿ ಟಾಂಗ್ ನೀಡಿದ್ದಾರೆ.
Updated on: Jul 20, 2026 | 2:27 PM

ಇತ್ತೀಚೆಗೆ ಸಲ್ಮಾನ್ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಅದರಲ್ಲಿ 60 ವರ್ಷದ ನಟ ಎಂದಿಗಿಂತಲೂ ತುಂಬಾ ಸಣ್ಣಗಾಗಿ, ಮುಖದಲ್ಲಿ ವಯಸ್ಸಾದಂತೆ ಮತ್ತು ಸುಸ್ತಾದವರಂತೆ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು.

ತಮ್ಮ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಊಹಾಪೋಹಗಳು ಮತ್ತು ಚರ್ಚೆಗಳು ಶುರುವಾಗುತ್ತಿದ್ದಂತೆ, ನಟ ಸಲ್ಮಾನ್ ಖಾನ್ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ತಮ್ಮ ಆರೋಗ್ಯದ ಬಗ್ಗೆ ನೇರವಾಗಿ ಯಾವುದೇ ಸ್ಪಷ್ಟನೆ ನೀಡದ ಸಲ್ಮಾನ್, ‘ನಿಮ್ಮೆಲ್ಲರ ಆರೋಗ್ಯ ಹೇಗಿದೆ’ ಎಂದು ಫೋಟೋಗೆ ಶೀರ್ಷಿಕೆ ಬರೆದಿದ್ದಾರೆ. ತಮ್ಮ ಬಗ್ಗೆ ತಲೆಕೆಡಿಸಿಕೊಂಡವರಿಗೆ ಹಾಸ್ಯಭರಿತವಾಗಿಯೇ ಮರುಪ್ರಶ್ನೆ ಹಾಕಿ ಟಾಂಗ್ ಕೊಟ್ಟಿದ್ದಾರೆ.

ಸಲ್ಮಾನ್ ಖಾನ್ ಹಂಚಿಕೊಂಡಿರುವ ಹೊಸ ಫೋಟೋಗಳಲ್ಲಿ ಅವರು ತುಂಬಾ ರಿಲ್ಯಾಕ್ಸ್ ಹಾಗೂ ಆತ್ಮವಿಶ್ವಾಸದಿಂದ ಕಾಣಿಸಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು, ‘ನೀವು ಚೆನ್ನಾಗಿದ್ದರೆ ನಾವೂ ಚೆನ್ನಾಗಿರುತ್ತೇವೆ ಸರ್’ ಎಂದು ಕಮೆಂಟ್ ಮಾಡಿ ನಿರಾಳರಾಗಿದ್ದಾರೆ.

ಸಲ್ಮಾನ್ ಖಾನ್ ಪ್ರಸ್ತುತ ಅಪೂರ್ವ ಲಾಖಿಯಾ ನಿರ್ದೇಶನದ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' ಸಿನಿಮಾದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಆದರೆ ಇತ್ತೀಚಿನ ಮಾಧ್ಯಮ ಸಂವಾದದಲ್ಲಿ ಚಿತ್ರದ ರಿಲೀಸ್ ಡೇಟ್ ಬಗ್ಗೆ ಅವರು ಉತ್ತರಿಸಿಲ್ಲ.




