Updated on: Feb 23, 2024 | 10:56 PM
ನಟಿ ಸಮಂತಾ ಸಿನಿಮಾಗಳಿಂದ ಬಿಡುವು ಪಡೆದು ಆರೋಗ್ಯದ ಕಡೆಗೆ ಗಮನ ಕೊಡುತ್ತಿದ್ದಾರೆ. ರಜೆಯನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ರೆಸಾರ್ಟ್ಗೆ ಭೇಟಿ ನೀಡಿರುವ ಸಮಂತಾ, ಅಲ್ಲಿ ನಿಸರ್ಗದ ನಡುವೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ನೈಸರ್ಗಿಕ ಕೊಳವೊಂದರಲ್ಲಿ ಸಮಂತಾ ಈಜಾಡಿ ಕಾಲ ಕಳೆದಿದ್ದು, ಆ ಖುಷಿಯ ಸಮಯದ ಕೆಲವು ಚಿತ್ರಗಳನ್ನು ಅಪ್ಲೋಡ್ ಮಾಡಿದ್ದಾರೆ.
ಫಿಟ್ನೆಸ್ ಹಾಗೂ ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸುತ್ತಿರುವ ಸಮಂತಾ. ಇದೇ ಕಾರಣಕ್ಕೆ ಮನಸ್ಸಿಗೆ ನೆಮ್ಮದಿ ನೀಡುವ ಪ್ರಕೃತಿ ನಡುವೆ ಸಮಯ ಕಳೆಯುತ್ತಿದ್ದಾರೆ.
ಸಮಂತಾ ಕೆಲವು ಆರೋಗ್ಯ ಸಮಸ್ಯೆಗಳನ್ನು ಕಳೆದ ಎರಡು ವರ್ಷಗಳ ಕಾಲ ಎದುರಿಸಿದ್ದರು. ಹಾಗಾಗಿ ಕಳೆದ ಕೆಲ ತಿಂಗಳುಗಳಿಂದ ಆರೋಗ್ಯ ಸುಧಾರಣೆ ಕಡೆ ಗಮನ ನೀಡುತ್ತಿದ್ದಾರೆ.
ಸಮಂತಾ ಕೊನೆಯದಾಗಿ ವರುಣ್ ಧವನ್ ಜೊತೆಗೆ ‘ಸಿಟಾಡೆಲ್’ ವೆಬ್ ಸರಣಿಯಲ್ಲಿ ನಟಿಸಿದರು. ಅದಾದ ಬಳಿಕ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ.
ಸಮಂತಾ ಆರೋಗ್ಯ ಸಾಕಷ್ಟು ಚೇತರಿಕೆ ಕಂಡಿದ್ದು ಆದಷ್ಟು ಶೀಘ್ರವೇ ಮತ್ತೆ ಚಿತ್ರರಂಗಕ್ಕೆ ಮರಳುವುದಾಗಿ ಇತ್ತೀಚೆಗಷ್ಟೆ ಸಮಂತಾ ಹೇಳಿಕೊಂಡಿದ್ದರು.