Updated on: Apr 28, 2023 | 9:17 AM
ನಟಿ ಸಮಂತಾ ರುತ್ ಪ್ರಭು ಅವರಿಗೆ ಇಂದು (ಏಪ್ರಿಲ್ 28) ಬರ್ತ್ಡೇ ಸಂಭ್ರಮ. ಇದೇ ವೇಳೆ ಅವರು ಮದುವೆ ಡ್ರೆಸ್ನಲ್ಲಿ ಮಿಂಚಿದ್ದಾರೆ. ಅಷ್ಟೇ ಅಲ್ಲ, ಒಂದಷ್ಟು ನೀತಿ ಪಾಠ ಮಾಡಿದ್ದಾರೆ.
ಸಮಂತಾ ರುತ್ ಪ್ರಭು ಅವರು ಪೆಪ್ಸಿ ಸಂಸ್ಥೆಯ ಪ್ರಚಾರ ರಾಯಭಾರಿ ಆಗಿ ಆಯ್ಕೆ ಆಗಿದ್ದಾರೆ. ಅವರ ಬರ್ತ್ಡೇ ಸಂದರ್ಭದಲ್ಲೇ ಹೊಸ ಜಾಹೀರಾತು ರಿಲೀಸ್ ಮಾಡಲಾಗಿದೆ.
ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ನೀಡಬೇಕು ಎನ್ನುವ ಆಗ್ರಹ ಕೇಳಿಬರುತ್ತಲೇ ಇರುತ್ತದೆ. ಇದೇ ಥೀಮ್ನಲ್ಲಿ ಸಮಂತಾ ಅವರ ಜಾಹೀರಾತು ಮೂಡಿ ಬಂದಿದೆ.
‘ಜಗತ್ತು ನಿಮ್ಮನ್ನು ಕೆಳಕ್ಕೆ ತಳ್ಳುತ್ತದೆ, ನೀವೇ ಮೇಲೇಳಬೇಕು’ ಎಂದು ಸಮಂತಾ ರುತ್ ಪ್ರಭು ಹೇಳಿದ್ದಾರೆ. ಸದ್ಯ ಈ ಜಾಹೀರಾತು ವೈರಲ್ ಆಗುತ್ತಿದೆ.
ಸಮಂತಾ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಸಿಟಾಡೆಲ್’ ಇಂಡಿಯನ್ ವರ್ಷನ್ನಲ್ಲೂ ಅವರು ನಟಿಸುತ್ತಿದ್ದಾರೆ.