Kannada News » Photo gallery » Sandalwood actress Shubha Poonja ties knot with Sumanth here is pictures
Shubha Poonja: ದೀರ್ಘಕಾಲದ ಗೆಳೆಯ ಸುಮಂತ್ ಜತೆ ಶುಭಾ ಸಿಂಪಲ್ ಶಾದಿ; ಚಿತ್ರಗಳು ಇಲ್ಲಿವೆ
Shubha Poonja - Sumanth Marriage: ಸ್ಯಾಂಡಲ್ವುಡ್ ನಟಿ, ಬಿಗ್ ಬಾಸ್ ಸ್ಪರ್ಧಿ ಶುಭಾ ಪೂಂಜ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಬಹುಕಾಲದ ಗೆಳೆಯ ಸುಮಂತ್ ಅವರನ್ನು ಶುಭಾ ವರಿಸಿದ್ದಾರೆ. ಈ ಸಂದರ್ಭದ ಚಿತ್ರಗಳು ಇಲ್ಲಿವೆ.
ಸ್ಯಾಂಡಲ್ವುಡ್ ನಟಿ ಶುಭಾ ಪೂಂಜ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
1 / 7
ದೀರ್ಘಕಾಲದ ಗೆಳೆಯ ಸುಮಂತ್ ಅವರೊಂದಿಗೆ ಮಂಗಳೂರಿನ ಮಜಲಬೆಟ್ಟುಬೀಡುವಿನಲ್ಲಿ ಶುಭಾ ಸಪ್ತಪದಿ ತುಳಿದಿದ್ದಾರೆ.
2 / 7
ಯಾವುದೇ ಆಡಂಬರವಿಲ್ಲದೇ ಸಿಂಪಲ್ ಆಗಿ, ಆಪ್ತರ ಸಮ್ಮುಖದಲ್ಲಿ ಶುಭಾ ಹಾಗೂ ಸುಮಂತ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
3 / 7
ವಿವಾಹದ ಕುರಿತು ಶುಭಾ ಪೂಂಜ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿ, ಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದೇವೆ. ನಿಮ್ಮೆಲ್ಲರ ಹಾರೈಕೆ ನಮ್ಮ ಮೇಲಿರಲಿ ಎಂದು ಬರೆದುಕೊಂಡು ಚಿತ್ರವನ್ನು ಹಂಚಿಕೊಂಡಿದ್ದಾರೆ.
4 / 7
ಬಿಗ್ ಬಾಸ್ ವಿಜೇತ ಮಂಜು ಪಾವಗಡ ಅವರೂ ಆಗಮಿಸಿ ಶುಭಾ ಹಾಗೂ ಸುಮಂತ್ ಅವರಿಗೆ ಶುಭಕೋರಿದರು.