- Kannada News Photo gallery Sangeetha Bhat Comeback as heroine Actin in Roopantara Movie with Kishore
ಡಾಲಿ ಧನಂಜಯ ಜತೆ ನಟಿಸಿದ್ದ ಸಂಗೀತಾ ಭಟ್ ಚಿತ್ರರಂಗಕ್ಕೆ ಕಂಬ್ಯಾಕ್
ಡಾಲಿ ಧನಂಜಯ ನಟನೆಯ ‘ಎರಡನೇ ಸಲ’ ಸಿನಿಮಾ 2017ರಲ್ಲಿ ತೆರೆಗೆ ಬಂದಿತ್ತು. ಈ ಚಿತ್ರದಿಂದ ಸಂಗೀತಾ ಅವರ ಖ್ಯಾತಿ ಹೆಚ್ಚಿತು. ನಂತರ ಕೆಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದರು.
Updated on:Mar 21, 2022 | 2:58 PM

ನಟಿ ಸಂಗೀತಾ ಭಟ್ ಅವರು ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ, ತೆಲುಗು ಹಾಗೂ ತಮಿಳು ಚಿತ್ರಗಳಲ್ಲೂ ಅವರು ಬಣ್ಣ ಹಚ್ಚಿದ್ದರು. ಈಗ ಅವರು ನಾಯಕಿಯಾಗಿ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ.

ಡಾಲಿ ಧನಂಜಯ ನಟನೆಯ ‘ಎರಡನೇ ಸಲ’ ಸಿನಿಮಾ 2017ರಲ್ಲಿ ತೆರೆಗೆ ಬಂದಿತ್ತು. ಈ ಚಿತ್ರದಿಂದ ಸಂಗೀತಾ ಅವರ ಖ್ಯಾತಿ ಹೆಚ್ಚಿತು. ನಂತರ ಕೆಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದರು. ಆ ಬಳಿಕ ವೈವಾಹಿಕ ಬದುಕನ್ನು ಆರಂಭಿಸಿದರು. ಈಗ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ.

‘ರೂಪಾಂತರ’ ಶೀರ್ಷಿಕೆಯ ಚಿತ್ರದಲ್ಲಿ ಸಂಗೀತಾ ಭಟ್ ನಟಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು, ಕೊನೆಯ ಹಂತದ ಚಿತ್ರೀಕರಣ ಪ್ರಗತಿಯಲ್ಲಿದೆ.

ಕಿಶೋರ್ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ಜತೆಗೆ ಇರುವ ಫೋಟೋಗಳನ್ನು ಸಂಗೀತಾ ಹಂಚಿಕೊಂಡಿದ್ದಾರೆ. ಸಿನಿಮಾದ ಫೋಟೋಗಳು ಹಳ್ಳಿ ಬ್ಯಾಕ್ಗ್ರೌಂಡ್ನಲ್ಲಿ ಇದ್ದು, ಸಿನಿಮಾದ ಕಥೆ ಕೂಡ ಹಾಗೆಯೇ ಸಾಗಲಿದೆ ಎನ್ನಲಾಗುತ್ತಿದೆ.

ಶ್ರೀನಿವಾಸ್ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ರಮೇಶ್ ರಾಜ್ ಛಾಯಾಗ್ರಹಣ ಚಿತ್ರಕ್ಕೆ ಇದೆ.

ಶೀಘ್ರವೇ ಸಿನಿಮಾ ಬಗ್ಗೆ ಮತ್ತೊಂದಷ್ಟು ಮಾಹಿತಿಯನ್ನು ಅವರು ನೀಡಲಿದ್ದಾರೆ.
Published On - 2:57 pm, Mon, 21 March 22




