ನಿರಂತರ ಮಳೆ, ಮೈ ಕೊರೆಯುವ ಚಳಿಯಲ್ಲಿ ಸಾನ್ಯಾ ಐಯ್ಯರ್ ಟ್ರೆಕ್ಕಿಂಗ್; ಫೋಟೋ ಹಂಚಿಕೊಂಡ ನಟಿ
ಸಾನ್ಯಾ ಐಯ್ಯರ್ ಅವರು ಕಾಶ್ಮೀರಕ್ಕೆ ತೆರಳಿದ್ದಾರೆ. ಒಂದು ಕಡೆ ಮಳೆ. ಮತ್ತೊಂದು ಕಡೆ ಕೊರೆವ ಚಳಿ. ಇದರ ಮಧ್ಯೆ ಅವರು ಟ್ರೆಕ್ಕಿಂಗ್ ಮಾಡಿದ್ದಾರೆ.
Updated on:Jul 14, 2023 | 8:41 AM

ನಟಿ ಸಾನ್ಯಾ ಐಯ್ಯರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಹಲವು ಫೋಟೋಗಳನ್ನು ಫ್ಯಾನ್ಸ್ಗೋಸ್ಕರ ಹಂಚಿಕೊಳ್ಳುತ್ತಾರೆ. ನಿತ್ಯ ಏನು ಮಾಡುತ್ತೇನೆ ಎನ್ನುವ ಬಗ್ಗೆ ಅವರು ಅಪ್ಡೇಟ್ ನೀಡುತ್ತಾರೆ.

ಈಗ ಸಾನ್ಯಾ ಐಯ್ಯರ್ ಅವರು ಕಾಶ್ಮೀರಕ್ಕೆ ತೆರಳಿದ್ದಾರೆ. ಒಂದು ಕಡೆ ಮಳೆ. ಮತ್ತೊಂದು ಕಡೆ ಕೊರೆವ ಚಳಿ. ಇದರ ಮಧ್ಯೆ ಅವರು ಟ್ರೆಕ್ಕಿಂಗ್ ಮಾಡಿದ್ದಾರೆ.

ಈ ವಿಡಿಯೋ ಹಾಗೂ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

‘ಭಾರೀ ಮಳೆ ನಿರಂತರ 5 ಕಿಮೀ ಟ್ರೆಕ್ಕಿಂಗ್. ಹುಲ್ಲುಗಾವಲುಗಳು ಮತ್ತು ತೊರೆಗಳ ಮೂಲಕ ಮೇಲೇರಿದ್ದೇವೆ. ಮೊದಲ ದಿನದ ಅರ್ಧದಲ್ಲೇ ಸಾಕಷ್ಟು ನೋಡಿದ್ದೇವೆ. ಇನ್ನೂ ನೋಡಲು ಬಹಳಷ್ಟಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಸಾಕಷ್ಟು ಅವಾಂತರ ಆಗಿದೆ. ಈಗ ಕಾಶ್ಮೀರದಲ್ಲೂ ಮಳೆ ಆಗುತ್ತಿದೆ. ಹೀಗಾಗಿ ಸಾನ್ಯಾ ಐಯ್ಯರ್ ಅವರಿಗೆ ಎಚ್ಚರಿಕೆಯಿಂದ ಇರುವಂತೆ ಅನೇಕರು ಕೋರಿದ್ದಾರೆ.

ಬಿಗ್ ಬಾಸ್ಗೆ ಕಾಲಿಟ್ಟ ಬಳಿಕ ಸಾನ್ಯಾ ಐಯ್ಯರ್ ಅವರ ಖ್ಯಾತಿ ಹೆಚ್ಚಿತು. ಅವರ ಅಭಿಮಾನಿ ಬಳಗ ದೊಡ್ಡದಾಯಿತು.
Published On - 8:40 am, Fri, 14 July 23

ರಾಜೇಶ್ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



