ದಟ್ಟ ಕಾನನದ ನಡುವೆ ಮೈದುಂಬಿ ಹರಿಯುತಿದೆ ಅರ್ಬಿ ಜಲಪಾತ; ಜಲಧಾರೆ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು
ಮಳೆಗಾಲ ಬಂತೆಂದರೆ, ಸಾಮಾನ್ಯ ನೀರಿನ ಹರಿವಿಗೂ ಕೂಡ ಮೈದುಂಬಿ ಹರಿಯುವ ಜಲಪಾತದ ರೂಪ ಬರುತ್ತದೆ. ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಇಂತಹ ಸಣ್ಣಪುಟ್ಟ ಕಿರು ಜಲಪಾತಗಳು ಅನೇಕ ಇವೆ. ಅಪಾಯವಿಲ್ಲದೆ ಭೂಮಿಯ ಮೇಲೆ ಹರಿಯುವ ಈ ಜಲಪಾತಗಳಲ್ಲಿ ಮೋಜು ಮಸ್ತಿ ಮಾಡುವುದೇ ಒಂದು ಅದ್ಭುತ ಅನುಭವ. ಮಳೆ ಬಂದಾಗ ಮಾತ್ರ ಮೂಡಿಕೊಳ್ಳುವ ಮಣಿಪಾಲದ ಅರ್ಬಿ ಜಲಪಾತ ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ. ಪ್ರತಿದಿನ ಸಾವಿರಾರು ಜನ ಪ್ರವಾಸಿಗರು ಈ ಜಲಪಾತ ನೋಡಲು ಭೇಟಿ ಕೊಡುತ್ತಿದ್ದಾರೆ.