- Kannada News Photo gallery Shahid Kapoor Birthday Here is The age gap between Shahid And Mira Rajput
ಶಾಹಿದ್ ಕಪೂರ್-ಮೀರಾ ಮಧ್ಯೆ 14 ವರ್ಷಗಳ ಅಂತರ; 16ನೇ ವಯಸ್ಸಿನಲ್ಲೇ ನಡೆದಿತ್ತು ಮೊದಲ ಭೇಟಿ
Shahid Kapoor Birthday: ಶಾಹಿದ್ ಕಪೂರ್ ಅವರು 2015ರಲ್ಲಿ ಮೀರಾ ರಜ್ಪೂತ್ ಅವರನ್ನು ಮದುವೆ ಆದರು. ಆಗ ಅವರಿಗೆ 20 ವರ್ಷ ವಯಸ್ಸು. ಶಾಹಿದ್ಗೆ 34 ವರ್ಷ. ಇಬ್ಬರ ಮಧ್ಯೆ 14 ವರ್ಷ ವಯಸ್ಸಿನ ಅಂತರ ಇದೆ. ಮದುವೆಗೆ ಇದು ಅಡ್ಡಿ ಆಗಿಲ್ಲ.
Updated on: Feb 25, 2023 | 9:25 AM

ಶಾಹಿದ್ ಕಪೂರ್ ಅವರು ಬಾಲಿವುಡ್ನಲ್ಲಿ ಬೇಡಿಕೆ ಹೊಂದಿದ್ದಾರೆ. ಇತ್ತೀಚೆಗೆ ಅವರ ನಟನೆಯ ‘ಫರ್ಜಿ’ ವೆಬ್ ಸೀರಿಸ್ ರಿಲೀಸ್ ಆಗಿ ಯಶಸ್ಸು ಕಂಡಿದೆ. ಇದೇ ಖುಷಿಯಲ್ಲಿ ಅವರು ಇಂದು (ಫೆ.25) ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ.

ಶಾಹಿದ್ ಕಪೂರ್ ಅವರು 2015ರಲ್ಲಿ ಮೀರಾ ರಜ್ಪೂತ್ ಅವರನ್ನು ಮದುವೆ ಆದರು. ಆಗ ಅವರಿಗೆ 20 ವರ್ಷ ವಯಸ್ಸು. ಶಾಹಿದ್ಗೆ 34 ವರ್ಷ. ಇಬ್ಬರ ಮಧ್ಯೆ 14 ವರ್ಷ ವಯಸ್ಸಿನ ಅಂತರ ಇದೆ. ಮದುವೆಗೆ ಇದು ಅಡ್ಡಿ ಆಗಿಲ್ಲ.

ಇವರ ಸ್ಟೋರಿ ಶುರುವಾಗಿದ್ದೇ ವಿಚಿತ್ರ. ಮೀರಾ ಆಗಿನ್ನೂ 16 ವರ್ಷದ ಬಾಲಕಿ. ಶಾಹಿದ್ನ ಅವರು ಭೇಟಿ ಆಗಿದ್ದು ಆಗಲೇ. ಫ್ಯಾಮಿಲಿ ಫ್ರೆಂಡ್ ಮನೆಯ ಕಾರ್ಯಕ್ರಮದಲ್ಲಿ ಶಾಹಿದ್ ಭಾಗಿ ಆಗಿದ್ದರು. ಅಲ್ಲಿಗೆ ಮೀರಾ ಕೂಡ ಬಂದಿದ್ದರು.

ಕೆಲ ವರ್ಷಗಳ ಬಳಿಕ ಶಾಹಿದ್ ಹಾಗೂ ಮೀರಾ ಕುಟುಂಬದವರು ಒಟ್ಟಾಗಿ ಸೇರಿದರು. ಇಬ್ಬರಿಗೂ ಮದುವೆ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದರು. ಮದುವೆ ಆಗಬೇಕು ಎಂದು ಬಂದಾಗ ಶಾಹಿದ್-ಮೀರಾ ಭೇಟಿ ಆದರು. ಆಗ ಬರೋಬ್ಬರಿ 7 ಗಂಟೆ ಮಾತನಾಡಿದರು.

ಮೀರಾ ಹಾಗೂ ಶಾಹಿದ್ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಶಾಹಿದ್ಗೆ ಈಗ ವಯಸ್ಸು 42. ಮೀರಾಗೆ 28 ವರ್ಷ.



















