- Kannada News Photo gallery Shilpa Shetty Shares Her glamorous photos On Instagram Fans Says You so fit
48ನೇ ವಯಸ್ಸಿನಲ್ಲೂ ಯುವತಿಯರನ್ನು ನಾಚಿಸುವಂತಿದ್ದಾರೆ ಶಿಲ್ಪಾ ಶೆಟ್ಟಿ; ಇಲ್ಲಿದೆ ಫೋಟೋಸ್
ಶಿಲ್ಪಾ ಶೆಟ್ಟಿ ಅವರು ಈಗ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಕಮೆಂಟ್ಗಳು ಸಿಗುತ್ತಿವೆ. ನಟಿಯನ್ನು ಎಲ್ಲರೂ ಹೊಗಳುತ್ತಿದ್ದಾರೆ. ಶಿಲ್ಪಾ ಶೆಟ್ಟಿ ಅವರ ಅಂದಕ್ಕೆ ಅನೇಕರು ಮರುಳಾಗಿದ್ದಾರೆ.
Updated on: Aug 30, 2023 | 9:09 AM

ನಟಿ ಶಿಲ್ಪಾ ಶೆಟ್ಟಿ ಅವರು ಫಿಟ್ನೆಸ್ಗೆ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ. ಜಿಮ್ನಲ್ಲಿ ಅವರು ಹೆಚ್ಚು ಹೊತ್ತು ವರ್ಕೌಟ್ ಮಾಡುತ್ತಾರೆ. ನಿತ್ಯವೂ ಯೋಗ ಮಾಡುತ್ತಾರೆ. ಈ ಕಾರಣದಿಂದಲೇ ಅವರು ಫಿಟ್ನೆಸ್ ಕಾಯ್ದುಕೊಂಡು ಬಂದಿದ್ದಾರೆ.

ಶಿಲ್ಪಾ ಶೆಟ್ಟಿ ಅವರು ಈಗ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಕಮೆಂಟ್ಗಳು ಸಿಗುತ್ತಿವೆ. ನಟಿಯನ್ನು ಎಲ್ಲರೂ ಹೊಗಳುತ್ತಿದ್ದಾರೆ.

ಶಿಲ್ಪಾ ಶೆಟ್ಟಿ ಅವರ ಅಂದಕ್ಕೆ ಅನೇಕರು ಮರುಳಾಗಿದ್ದಾರೆ. ಅವರು ಇಷ್ಟೊಂದು ಫಿಟ್ ಆಗಿರೋಕೆ ಹೇಗೆ ಸಾಧ್ಯ ಎಂದು ಅನೇಕರು ಅಚ್ಚರಿ ಹೊರಹಾಕಿದ್ದಾರೆ. ಅವರ ಬಗ್ಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಫೋಟೋಗೆ ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ.

ಶಿಲ್ಪಾ ಶೆಟ್ಟಿ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಇದರ ಜೊತೆಗೆ ಅವರು ಕಿರುತೆರೆ ರಿಯಾಲಿಟಿ ಶೋಗಳಲ್ಲೂ ತೊಡಗಿಕೊಂಡಿದ್ದಾರೆ. ವೆಬ್ ಸೀರಿಸ್ ಲೋಕದಲ್ಲೂ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ.

ಶಿಲ್ಪಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು 3 ಕೋಟಿ ಹಿಂಬಾಲಕರು ಫಾಲೋ ಮಾಡುತ್ತಿದ್ದಾರೆ. ಅಭಿಮಾನಿಗಳಿಗಾಗಿ ಅವರು ಹಲವು ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರು ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಸಿಕ್ಕಿ ಬಿದ್ದರು. ಇದಾದ ಬಳಿಕ ಅವರು ಮುಖ ಮುಚ್ಚಿಕೊಂಡೇ ಓಡಾಡುತ್ತಿದ್ದಾರೆ. ಶಿಲ್ಪಾ ಹಾಗು ರಾಜ್ ಇಬ್ಬರೂ ಬೇರೆ ಆಗುತ್ತಾರೆ ಎನ್ನುವ ಸುದ್ದಿ ಕೂಡ ಹರಿದಾಡಿತ್ತು.

ಆದರೆ, ಹಾಗಾಗಿಲ್ಲ. ಶಿಲ್ಪಾ ಶೆಟ್ಟಿ ಅವರು ಪತಿಯ ತಪ್ಪನ್ನು ಮನ್ನಿಸಿ ಮುಂದೆ ಸಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆಗಾಗ ಕುಟುಂಬದ ಜೊತೆ ಅವರು ವಿದೇಶ ಪ್ರಯಾಣ ಮಾಡುತ್ತಾರೆ. ಈ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾ ಇರುತ್ತಾರೆ.
























