ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿದ ತಾಲ್ಲೂಕುಗಳಿಂದ ಸುಮಾರು 50ಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರು ವಿಧ ವಿಧವಾದ ಸಿರಿಧಾನ್ಯಗಳಿಂದ ಮಾಡಲಾಗಿದ್ದ ಖಾದ್ಯಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಸಜ್ಜೆ, ಸಾಮೆ, ಆರ್ಕ, ಉದುಲು, ರಾಗಿ, ನವಣೆ ಸೇರಿದಂತೆ ವಿವಿದ ಸಿರಿಧಾನ್ಯಗಳನ್ನು ಬಳಸಿಕೊಂಡು ನಿಪ್ಪಟ್ಟು, ಚಕ್ಕುಲಿ, ಸಿರಿಧಾನ್ಯದ ಉಂಡೆ, ಬಿಸಿ ಬೇಳೆ ಬಾತ್, ಸಿರಿಧಾನ್ಯದ ರೊಟ್ಟಿ, ಸಿರಿಧಾನ್ಯದ ಹುರಿಹಿಟ್ಟು ಉಂಡೆ, ಮ್ಯಾಂಗೋ ಸೀಕರಣೆ, ಸಿರಿಧಾನ್ಯ ಕಜ್ಜಾಯ, ಮಶ್ರೂಮ್ ಕಬಾಬ್ ಸೇರಿದಂತೆ ಹಲವು ತಿಂಡಿಗಳನ್ನು ವಿವಿದ ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರು ಇಂದು ಪ್ರದರ್ಶನಕ್ಕೆ ಇಟ್ಟಿದ್ದರು.