- Kannada News Photo gallery Six year old boy Viraj from Sirsi in Uttara Kannada charms catches snakes along with his father
ಆರು ವರ್ಷದ ಬಾಲಕ ಸರಾಗವಾಗಿ ಹಾವುಗಳೊಂದಿಗೆ ಸರವಾಡುತ್ತಾನೆ, ಇಷ್ಟು ಚಿಕ್ಕ ವಯಸ್ಸಲ್ಲಿ ಇದೆಲ್ಲ ಬೇಕಿತ್ತಾ? ಎಂದು ಕೆಲವರು ಟೀಕಿಸಿದ್ದಾರೆ -ನೀವೇನಂತೀರಿ
ಆತ ಇನ್ನೂ ಕೇವಲ ಆರು ವರ್ಷದ ಬಾಲಕ. ಆತ ಮಾಡುವ ಕೆಲಸ ನೋಡಿದ್ರೆ ನೀವು ನಿಜಕ್ಕೂ ಬೆಚ್ಚಿ ಬೀಳುತ್ತೀರಿ.. ಕೈಯಲ್ಲಿ ವಿಷ ಸರ್ಪಗಳನ್ನ ಹಿಡಿದು ಬುಗುರಿ ಆಡಿಸಿದಂಗೆ ಆಡಿಸುತ್ತಾನೆ.. ಇತನಿಗೆ ಹಾವುಗಳೆಂದರೆ ಭಯವೇ ಇಲ್ಲ.. ಎಲ್ಲಿಯೇ ಹಾವು ಕಂಡರು ತನ್ನ ತಂದೆಯ ಜೊತೆಗೆ ಇವನು ಸ್ಥಳಕ್ಕೆ ಎಂಟ್ರಿ ಕೊಡುತ್ತಾನೆ.. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ...
Updated on: Jul 10, 2023 | 1:54 PM

ಆತ ಇನ್ನೂ ಕೇವಲ ಆರು ವರ್ಷದ ಬಾಲಕ. ಆತ ಮಾಡುವ ಕೆಲಸ ನೋಡಿದ್ರೆ ನೀವು ನಿಜಕ್ಕೂ ಬೆಚ್ಚಿ ಬೀಳುತ್ತೀರಿ.. ಕೈಯಲ್ಲಿ ವಿಷ ಸರ್ಪಗಳನ್ನ ಹಿಡಿದು ಬುಗುರಿ ಆಡಿಸಿದಂಗೆ ಆಡಿಸುತ್ತಾನೆ.. ಇತನಿಗೆ ಹಾವುಗಳೆಂದರೆ ಭಯವೇ ಇಲ್ಲ.. ಎಲ್ಲಿಯೇ ಹಾವು ಕಂಡರು ತನ್ನ ತಂದೆಯ ಜೊತೆಗೆ ಇವನು ಸ್ಥಳಕ್ಕೆ ಎಂಟ್ರಿ ಕೊಡುತ್ತಾನೆ.. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ...

ವಿಷ ಸರ್ಪಗಳನ್ನ ಭಯವಿಲ್ಲದೆ ಕೈಯಲ್ಲಿ ಹಿಡಿಯುವ ಆರು ವರ್ಷದ ಬಾಲಕ.. ಬಾಲಕನ ಧೈರ್ಯಕ್ಕೆ ಎಲ್ಲರೂ ಫಿದಾ.. ಕಾಳಿಂಗ ಸರ್ಪಗಳನ್ನ ಹಿಡಿದು ಫೋಟೋಗೆ ಪೋಸ್ ಕೊಡುವ ಬಾಲಕ. ಅಪ್ಪನೊಂದಿಗೆ ಹಾವುಗಳನ್ನ ಹಿಡಿದು ರಕ್ಷಣೆ ಮುಂದಾಗುವ ಬಾಲಕ.. ಹೀಗೆ ಹಾವುಗಳನ್ನ ಹಿಡಿದು ಫೋಟೋಗೆ ಪೋಸ್ ಕೊಡುತ್ತಿರುವ ಬಾಲಕ, ಮತ್ತೊಂದು ಕಡೆ ಹಾವು ಹಿಡಿಯುವ ಬಗ್ಗೆ ಮಾಹಿತಿ ನೀಡುತ್ತಿರುವ ಬಾಲಕನ ತಂದೆ.. ಈ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆ ಶಿರಸಿ ನಗರದಲ್ಲಿ.

ಎಸ್ ಹಾವು ಎಂದರೆ ಸಾಕು ಕೆಲವರು ಮಾರು ದೂರ ಓಡಿಹೋಗುತ್ತಾರೆ. ಎಲ್ಲಾದರೂ ಹಾವು ಕಂಡರೇ ಸಾಕು, ಎಷ್ಟೇ ಧೈರ್ಯವಂತರಾದರೂ ಒಂದು ಕ್ಷಣ ಗಾಬರಿಗೊಳ್ಳುವುದು ಸತ್ಯ. ಅಂತಹುದರಲ್ಲಿ ಇಲ್ಲೊಬ್ಬ ಆರು ವರ್ಷದ ಬಾಲಕ ವಿರಾಜ್ ಹುಲೇಕಲ್ (6) ಹಾವನ್ನ ಯಾವುದೇ ಭಯವಿಲ್ಲದೆ ಹಿಡಿಯುತ್ತಾನೆ. ಒಂದು ವಾರದ ಹಿಂದೆ ಶಿರಸಿ ಬಳಿಯ ಜಡ್ಡಿಗದ್ದೆ ಗ್ರಾಮದಲ್ಲಿ ಕಾಳಿಂಗ ಸರ್ಪವನ್ನ ಹಿಡಿದು ಎಲ್ಲರ ಹುಬ್ಬೇರುವಂತೆ ಮಾಡಿದ್ದ. ಆ ವಿಡಿಯೋ ಸಖತ್ ವೈರಲ್ ಆಗಿತ್ತು.

ಇನ್ನು ಹಾವು ಹಿಡಿಯುವ ಬಗ್ಗೆ ಅವನ ತಂದೆಯನ್ನ ಕೇಳಿದ್ರೆ ಅವರು ಹೀಗೆ ಹೇಳುತ್ತಾರೆ.. ನಮ್ಮ ತಾತ ಮುತ್ತಾತನ ಕಾಲದಿಂದ ಹಾವು ಹಿಡಿದು ರಕ್ಷಣೆ ಮಾಡುತ್ತಾ ಬಂದಿದ್ದಾರೆ.. ಅದರಂತೆ ನಾನು ಹಾವುಗಳನ್ನ ರಕ್ಷಣೆ ಮಾಡುತ್ತಿದ್ದೇನೆ. ನನ್ನ ಮಗನಿಗೆ ಹಾವು ರೆಸ್ಕ್ಯೂ ಮಾಡುವ ಬಗ್ಗೆ ಕಲಿಸಿದ್ದೇನೆ ಎನ್ನುತ್ತಾರೆ ಪ್ರಶಾಂತ, ಉರಗ ಪ್ರೇಮಿ (ವಿರಾಜ್ ತಂದೆ).

ಇನ್ನು ಹುಲೇಕಲ್ ಕುಟುಂಬ ಅಜ್ಜಮುತ್ತಜ್ಜನ ಕಾಲದಿಂದಲೂ ಹಾವುಗಳನ್ನ ಹಿಡಿದು ರಕ್ಷಣೆ ಮಾಡುತ್ತಾ ಬಂದಿದೆ. ಈಗ ಅವರ ಮಗ ಪ್ರಶಾಂತ ಹುಲೇಕಲ್ ಅದೆ ಸಂಪ್ರದಾಯವನ್ನ ಮುಂದುವರೆಸಿಕೊಂಡು ಬಂದಿದ್ದಾರೆ. ಕಳೆದ 25 ವರ್ಷಗಳಿಂದ ಈತ ಹಾವುಗಳನ್ನ ಹಿಡಿದು ರಕ್ಷಣೆ ಮಾಡಿದ್ದಾನೆ.

ಅಂದಾಜು ಈವರಗೆ 15 ಸಾವಿರ ಹಾವುಗಳನ್ನ ಹಿಡಿದು ರಕ್ಷಣೆ ಮಾಡಿದ್ದಾನಂತೆ. ಇನ್ನು ಇವರ ಮಗಳು ಆಕರ್ಷ ಮತ್ತು ಮಗ ವಿರಾಜ್ ಇಬ್ಬರು ತಲಾ 60 ರಿಂದ 70 ಹಾವುಗಳನ್ನ ಈಗಾಗಲೇ ರೆಸ್ಕ್ಯೂ ಮಾಡಿದ್ದಾರೆ. ಇಬ್ಬರಿಗೂ ಹಾವುಗಳನ್ನ ರೆಸ್ಕ್ಯೂ ಮಾಡುವ ಕಲೆಯನ್ನ ತಂದೆ ಪ್ರಶಾಂತ ಅವರೇ ಹೇಳಿ ಕೊಟ್ಟಿದ್ದಾರೆ.

ಶಿರಸಿಯಾದ್ಯಂತ ಎಲ್ಲೆ ಹಾವು ಕಂಡರೂ ಮೊದಲಿಗೆ ಫೊನ್ ಬರುವುದೇ ಪ್ರಶಾಂತ ಹುಲೇಕಲ್‌ಗೆ. ಆಗ ಇವರು ತಕ್ಷಣ ಸ್ಥಳಕ್ಕೆ ಹೋಗಿ ಹಾವುಗಳನ್ನ ರೆಸ್ಕ್ಯೂ ಮಾಡಿ.. ಕಾಡಿಗೆ ಬಿಟ್ಟು ಬರುತ್ತಾರೆ.. ಜೀವನಕ್ಕೆ ಆಟೋ ಓಡಿಸುವುದರ ಜೊತೆಗೆ ಈ ಕಾಯಕವನ್ನು ಮಾಡುತ್ತಾ ಬಂದಿದ್ದಾರೆ.

ಇನ್ನು ಹಾವು ಹಿಡಿಯುವ ಬಗ್ಗೆ ವಿರಾಜ್‌ನನ್ನ ಕೇಳಿದ್ರೆ ಮೊದಲು ವಿಷರಹಿತ ಹಾವುಗಳನ್ನ ರೆಸ್ಕ್ಯೂ ಮಾಡಿದೆ, ನಂತರ ದೊಡ್ಡ ದೊಡ್ಡ ಹಾವುಗಳನ್ನ ಅಪ್ಪನೊಂದಿಗೆ ರೆಸ್ಕ್ಯೂ ಮಾಡುತ್ತಿದ್ದೇನೆ.. ನನಗೆ ಹಾವುಗಳನ್ನ ಕಂಡರೆ ಭಯವಿಲ್ಲ ಎನ್ನುತ್ತಾನೆ ಬಾಲಕ ವಿರಾಜ್ ಹುಲೇಕಲ್.

ಒಟ್ಟಿನಲ್ಲಿ ಆರು ವರ್ಷದ ಬಾಲಕ ಬೃಹತ್ ಗಾತ್ರದ ಕಾಳಿಂಗ ಸರ್ಪ ಹಿಡಿಯುವುದರೊಂದಿಗೆ ಈ ವರಗೆ 60 ಹಾವುಗಳನ್ನ ರಕ್ಷಣೆ ಮಾಡಿದ್ದಾನೆ.. ಈ ಬಾಲಕನ ಸಾಹಸ ನೋಡಿ ಕೆಲ ಜನ ಆಶ್ಚರ್ಯಪಟ್ಟರೆ, ಇನ್ನು ಕೆಲವರು ಇಷ್ಟು ಚಿಕ್ಕ ವಯಸ್ಸಲ್ಲಿ ಇದೆಲ್ಲ ಬೇಕಿತ್ತಾ? ಎಂದೂ ಟೀಕೆ ಮಾಡುತ್ತಿದ್ದಾರೆ.
























