Somanna Machimada: ಬಿಗ್ ಬಾಸ್ ಮನೆಗೆ ಖ್ಯಾತ ಪತ್ರಕರ್ತ: ಸೋಮಣ್ಣ ಬಗ್ಗೆ ನಿಮಗೆಷ್ಟು ಗೊತ್ತು?
Bigg Boss OTT kannada: ಇದೀಗ ಪತ್ರಕರ್ತ ಖೋಟಾದಿಂದ ಖಾಸಗಿ ಸುದ್ದಿ ವಾಹಿನಿಯ ಸೋಮಣ್ಣ ಮಾಚಿಮಾಡ (Somanna Machimada) ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.
Updated on: Aug 06, 2022 | 11:13 PM

ಈ ಬಾರಿ ಓಟಿಟಿ ಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ (Bigg Boss Kannada OTT) ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಒಬ್ಬೊಬ್ಬರೆ ಸ್ಪರ್ಧಿಗಳು ದೊಡ್ಮನೆ ಸೇರಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಕೆಲ ಸ್ಪರ್ಧಿಗಳು ಹೋದ ವಿಡಿಯೋವನ್ನು ವೂಟ್ ತನ್ನ ಅಧಿಕೃತ ಕಾತೆಯಲ್ಲಿ ಹಂಚುಕೊಂಡಿದೆ.

ಈ ಬಾರಿ ‘ಬಿಗ್ ಬಾಸ್’ ಅನ್ನು ಒಟಿಟಿಯಲ್ಲಿ ಮಾತ್ರ ವೀಕ್ಷಿಸಬಹುದು. ವೂಟ್ ಆ್ಯಪ್ನ ಚಂದಾದಾರರಾದರೆ ಮಾತ್ರ ‘ಬಿಗ್ ಬಾಸ್ ಒಟಿಟಿ’ ವೀಕ್ಷಣೆ ಸಾಧ್ಯ. ಈಗಾಗಲೇ ಆರ್ಯವರ್ಧನ್ ಗುರೂಜಿ (Aryavardhan Guruji), ಸೋನು ಶ್ರೀನಿವಾಸ್ ಗೌಡ, ರೂಪೇಶ್ ಶೆಟ್ಟಿ ಕಾಲಿಟ್ಟಾಗಿದೆ.

ಇದೀಗ ಪತ್ರಕರ್ತ ಖೋಟಾದಿಂದ ಖಾಸಗಿ ಸುದ್ದಿ ವಾಹಿನಿಯ ಸೋಮಣ್ಣ ಮಾಚಿಮಾಡ (Somanna Machimada) ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.

ಸುಮಾರು ಒಂದೂವರೆ ದಶಕಗಳಿಂದ ಕನ್ನಡ ಮಾಧ್ಯಮದಲ್ಲಿ ಚಿರಪರಿಚಿತರಾಗಿರುವ ಕೊಡಗು ಮೂಲದ ಸೋಮಣ್ಣ ಮೈಸೂರಿನಲ್ಲಿ ಪತ್ರಿಕೋದ್ಯಮ ಪ್ರಾರಂಭಿಸಿದ್ದರು. ಬಳಿಕ ಟಿವಿ9 ಕನ್ನಡ ಸೇರಿದ ಅವರು ಇದೀಗ ಮತ್ತೊಂದು ಖಾಸಗಿ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿರುವ ಸೋಮಣ್ಣ ಮಾಚಿಮಾಡ, ಹಲವಾರು ರಾಜಕಾರಣಿಗಳು, ಅನೇಕ ಸಿನಿಮಾ ಸೆಲೆಬ್ರಿಟಿಗಳನ್ನ ಸಂದರ್ಶನ ಮಾಡಿದ್ದಾರೆ.

ಸೋಮಣ್ಣ ಮಾಚಿಮಾಡ ಅವರಿಗೆ ಬಹುದೊಡ್ಡ ಫ್ಯಾನ್ಸ್ ಬಳಗ ಇದೆ. ಇವರು ಮಾಡುವ ಸಂದರ್ಶನಗಳು ತುಂಬಾ ಪ್ರಖ್ಯಾತಿ ಪಡೆದಿವೆ.

ಇವರಿಗೆ ಫೇಸ್ ಬುಕ್ ನಲ್ಲಿ 114k ಫಾಲೋವರ್ಸ್ ಇದ್ದರೆ, ಇನ್ ಸ್ಟಾಗ್ರಾಮ್ ನಲ್ಲಿ 27k ಕ್ಕೂ ಅಧಿಕ ಹಿಂಬಾಲಕರಿದ್ದಾರೆ.




