- Kannada News Photo gallery Some everyday items that have been found to carry more germs and bacteria than a toilet seat
Hygiene: ಮನೆಯಲ್ಲಿರುವ ಈ ವಸ್ತುಗಳು ರೋಗ ಹರಡಲು ಪ್ರಮುಖ ಕಾರಣವಾಗಬಹುದು
ನಿಮ್ಮ ಮನೆಯಲ್ಲಿರುವ ಕೆಲವು ವಸ್ತುಗಳಿಂದ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ನಿಮ್ಮ ದೇಹದೊಂದಿಗೆ ನೇರವಾಗಿ ಸಂಪರ್ಕವನ್ನು ಹೊಂದಬಹುದು. ಆದ್ದರಿಂದ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ.
Updated on: Jun 30, 2023 | 3:18 PM

ಅಮೇರಿಕಾದ ಹಾಸಿಗೆ ತಯಾರಿಸುವ ಕಂಪನಿಯೊಂದು ನಡೆಸಿದ ಅಧ್ಯಯನದ ಪ್ರಕಾರ ಒಂದು ವಾರದವರೆಗೆ ತೊಳೆಯದೆ ಇರುವ ದಿಂಬು ಕವರ್ಗಳು ನಿಮ್ಮ ಮನೆಯ ಟಾಯ್ಲೆಟ್ ಸೀಟ್ನಲ್ಲಿ ಉಳಿದುಕೊಳ್ಳುವ ಬ್ಯಾಕ್ಟೀರಿಯಾಗಳಿಗಿಂತ 17 ಸಾವಿರ ಪಟ್ಟು ಹೆಚ್ಚು ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.

ಫೋನ್: ಸೋಂಕು ಹರಡುವ ಪಟ್ಟಿಯಲ್ಲಿ ಫೋನ್ ಅಗ್ರಸ್ಥಾನದಲ್ಲಿದೆ. ವಿವಿಧ ಅಧ್ಯಯನಗಳ ಪ್ರಕಾರ ನಿಮ್ಮ ಸ್ಮಾರ್ಟ್‌ಫೋನ್ ಟಾಯ್ಲೆಟ್ ಸೀಟ್‌ಗಿಂತ ಸರಾಸರಿ 10 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳಿಗೆ ನೆಲೆಯಾಗಿದೆ.

ಕೀಬೋರ್ಡ್: ಕೆಲಸದ ಅವಧಿಗಳಲ್ಲಿ ನೀವು ಆಗಾಗ್ಗೆ ಸ್ಪರ್ಶಿಸುವ ಮತ್ತೊಂದು ಸೂಕ್ಷ್ಮ ವಸ್ತು ಕೀಬೋರ್ಡ್. ಅರಿಝೋನಾ ವಿಶ್ವವಿದ್ಯಾಲಯದ ಅಧ್ಯಯನವು ಸರಾಸರಿ ಕೀಬೋರ್ಡ್ ಪ್ರತಿ ಚದರ ಇಂಚಿಗೆ 3,000 ಬ್ಯಾಕ್ಟೀರಿಯಾಗಳನ್ನು ಹೊಂದಿದೆ ಎಂದು ಕಂಡುಹಿಡಿದಿದೆ.

ರಿಮೋಟ್ : ಹೂಸ್ಟನ್ ವಿಶ್ವವಿದ್ಯಾಲಯದ ಅಧ್ಯಯನವು ಸರಾಸರಿ ರಿಮೋಟ್ ಕಂಟ್ರೋಲ್ ಪ್ರತಿ ಚದರ ಇಂಚಿಗೆ 200 ಬ್ಯಾಕ್ಟೀರಿಯಾಗಳನ್ನು ಹೊಂದಿದೆ ಎಂದು ಕಂಡುಹಿಡಿದಿದೆ. ಇದು ಆಗಾಗ್ಗೆ ಸ್ಪರ್ಶಿಸಲ್ಪಡುತ್ತದೆ ಮತ್ತು ಅಷ್ಟೇನೂ ಸ್ವಚ್ಛವಾಗಿರುವುದಿಲ್ಲ.

ನೀರಿನ ನಲ್ಲಿ: ನೀವು ನಿಮ್ಮ ಕೈಗಳನ್ನು ತೊಳೆದ ನಂತರ ಸೋಪ್ ಅಥವಾ ಹ್ಯಾಂಡ್ ವಾಶ್ನಿಂದ ಟ್ಯಾಪ್ ಅನ್ನು ಸ್ವಲ್ಪ ಸ್ವಚ್ಛಗೊಳಿಸಿ. ಮನೆಯ ಎಲ್ಲರೂ ಇದನ್ನು ಸ್ವರ್ಶಿಸುವುದರಿಂದ ನೈರ್ಮಲ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ.

ರೆಫ್ರಿಜರೇಟರ್ ಡೋರ್: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ, ಡೇವಿಸ್ ನಡೆಸಿದ ಅಧ್ಯಯನವು ಸರಾಸರಿ ರೆಫ್ರಿಜರೇಟರ್ ಬಾಗಿಲು ಪ್ರತಿ ಚದರ ಇಂಚಿಗೆ 500 ಬ್ಯಾಕ್ಟೀರಿಯಾಗಳನ್ನು ಹೊಂದಿದೆ ಎಂದು ಕಂಡುಹಿಡಿದಿದೆ.

ಮೌಸ್: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಅಧ್ಯಯನವು ಸರಾಸರಿ ಮೌಸ್ ಪ್ರತಿ ಚದರ ಇಂಚಿಗೆ 1,500 ಬ್ಯಾಕ್ಟೀರಿಯಾಗಳನ್ನು ಹೊಂದಿದೆ ಎಂದು ಕಂಡುಹಿಡಿದಿದೆ.

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Read More



