- Kannada News Photo gallery Spandana Death Anniversary it is been one year for vijay Raghavendra wife Spandana death Entertainment News In Kannada
Spandana Death Anniversary: ಸ್ಪಂದನಾ ನಗು ಮರೆಯಾಗಿ ಒಂದು ವರ್ಷ; ವಿಜಯ್ ರಾಘವೇಂದ್ರ ಭಾವುಕ ಪೋಸ್ಟ್
ಸ್ಪಂದನಾ ಪುಣ್ಯತಿಥಿ: ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ನಿಧನ ಹೊಂದಿ ಒಂದು ವರ್ಷ ಕಳೆದಿದೆ. ಕಳೆದ ವರ್ಷ ಆಗಸ್ಟ್ 6ರಂದು ಅವರು ಬ್ಯಾಂಕಾಕ್ನಲ್ಲಿ ನಿಧನ ಹೊಂದಿದರು. ಅವರನ್ನು ಕಳೆದುಕೊಂಡ ಕುಟುಂಬ ಈಗಲೂ ನೋವಿನಲ್ಲೇ ಇದೆ.
Updated on:Aug 06, 2024 | 10:36 AM

ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ನಮ್ಮನ್ನು ಅಗಲಿಗೆ ಇಂದಿಗೆ (ಆಗಸ್ಟ್ 6) ಒಂದು ವರ್ಷ. ಅವರು ಇಲ್ಲ ಎಂಬುದನ್ನು ಮರೆಯಲು ವಿಜಯ್ ರಾಘವೇಂದ್ರ ಬಳಿ ಈಗಲೂ ಸಾಧ್ಯವಾಗುತ್ತಿಲ್ಲ.

ವಿಜಯ್ ರಾಘವೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಆಗಾಗ ಪತ್ನಿಯ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಮೂಲಕ ಅವರು ಪತ್ನಿ ಬಗ್ಗೆ ಇರುವ ಭಾವನೆಯನ್ನು ವ್ಯಕ್ತಪಡಿಸುತ್ತಾರೆ.

ಇಂದು ಸ್ಪಂದನಾ ಪುಣ್ಯತಿಥಿ. ಹೀಗಾಗಿ ಸ್ಪಂದನಾ ಅವರ ಫೋಟೋನ ವಿಜಯ್ ಹಂಚಿಕೊಂಡಿದ್ದಾರೆ. ಈ ಫೋಟೋಗೆ, ‘ಚಿನ್ನ, ಮೌನದಲ್ಲಿ ಅರಳಿದ ನಗು ನಿನ್ನದು. ನೀ ನಡೆದ ಹಾದಿಯ ನೆನಪಿನ ಬೆಳಕು ನನ್ನದು’ ಎಂದು ಬರೆದುಕೊಂಡಿದ್ದಾರೆ.

ಸ್ಪಂದನಾ ಹಾಗೂ ವಿಜಯ್ ಅವರದ್ದು ಲವ್ ಮ್ಯಾರೇಜ್. ಅನೇಕ ವರ್ಷಗಳ ಕಾಲ ಪ್ರೀತಿಸಿ, ಆ ಬಳಿಕ ಮನೆಯವರ ಒಪ್ಪಿಗೆ ಪಡೆದು ಇವರು ಮದುವೆ ಆದರು.

ಸ್ಪಂದನಾ ಅವರು ಬ್ಯಾಂಕಾಕ್ಗೆ ತೆರಳಿದ್ದರು. ಅಲ್ಲಿಯೇ ಅವರು ನಿಧನ ಹೊಂದಿದರು. ಕಡಿಮೆ ರಕ್ತದೊತ್ತಡದಿಂದ ಅವರು ಸತ್ತಿದ್ದಾರೆ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನುತ್ತಾರೆ.
Published On - 10:29 am, Tue, 6 August 24




