‘NBK108’ ಸೆಟ್ನಲ್ಲಿ ಕನ್ನಡತಿ ಶ್ರೀಲೀಲಾ; ಕಣ್ ಹೊಡೆದು ಬಾಲಯ್ಯನ ಚಿತ್ರಕ್ಕೆ ಎಂಟ್ರಿ
Sreeleela: ಬಾಲಯ್ಯ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ಇರುತ್ತದೆ. ‘NBK 108’ ಚಿತ್ರದಲ್ಲೂ ಅದು ಮುಂದುವರಿಯಲಿದೆ ಎನ್ನಲಾಗಿದೆ. ಕಥಾ ನಾಯಕ ನಂದಮೂರಿ ಬಾಲಕೃಷ್ಣ ಅವರ ತಂಗಿ ಆಗಿ ಶ್ರೀಲೀಲಾ ನಟಿಸುತ್ತಿದ್ದಾರೆ ಎನ್ನಲಾಗಿದೆ.
Updated on:Mar 10, 2023 | 11:17 AM

ನಟಿ ಶ್ರೀಲೀಲಾ ಅವರು ತೆಲುಗಿನಲ್ಲಿ ದೊಡ್ಡ ಮಾರುಕಟ್ಟೆ ಸೃಷ್ಟಿ ಮಾಡಿಕೊಂಡಿದ್ದಾರೆ. ಅವರಿಗೆ ಸಾಕಷ್ಟು ಬೇಡಿಕೆ ಸೃಷ್ಟಿ ಆಗಿದೆ. ಈಗ ಅವರು ‘NBK108’ ಚಿತ್ರದ ಸೆಟ್ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿದೆ.

ಬಾಲಯ್ಯ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ಇರುತ್ತದೆ. ‘NBK 108’ ಚಿತ್ರದಲ್ಲೂ ಅದು ಮುಂದುವರಿಯಲಿದೆ ಎನ್ನಲಾಗಿದೆ. ಕಥಾ ನಾಯಕ ನಂದಮೂರಿ ಬಾಲಕೃಷ್ಣ ಅವರ ತಂಗಿ ಆಗಿ ಶ್ರೀಲೀಲಾ ನಟಿಸುತ್ತಿದ್ದಾರೆ ಎನ್ನಲಾಗಿದೆ.

‘NBK108’ ಚಿತ್ರಕ್ಕೆ ಅನಿಲ್ ರವಿಪುಡಿ ನಿರ್ದೇಶನ ಮಾಡುತ್ತಿದ್ದಾರೆ. ತ್ರಿಶಾ, ಕಾಜಲ್ ಅಗರ್ವಾಲ್ ಸೇರಿ ಅನೇಕರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಶ್ರೀಲೀಲಾ ಕೂಡ ಸಿನಿಮಾದ ಸೆಟ್ ಸೇರಿದ್ದಾರೆ.

ಇತ್ತೀಚೆಗೆ ತೆರೆಗೆ ಬಂದ ಶ್ರೀಲೀಲಾ ನಟನೆಯ ‘ಧಮಾಕ’ ಚಿತ್ರ ಗೆದ್ದು ಬೀಗಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನೂರು ಕೋಟಿ ರೂಪಾಯಿ ಬಾಚಿದೆ. ರವಿತೇಜ್ಗೆ ಜೊತೆಯಾಗಿ ಶ್ರೀಲೀಲಾ ಕಾಣಿಸಿಕೊಂಡಿದ್ದರು. ಈ ಚಿತ್ರದಿಂದ ಅವರ ಜನಪ್ರಿಯತೆ ಹೆಚ್ಚಿದೆ.

ಶ್ರೀಲೀಲಾ ಕನ್ನಡದವರು. ಟಾಲಿವುಡ್ಗೆ ಹೋದ ನಂತರದಲ್ಲಿಯೂ ಕನ್ನಡದ ಬಗ್ಗೆ ಪ್ರೀತಿ ಇಟ್ಟುಕೊಂಡಿದ್ದಾರೆ. ತೆಲುಗು ನಾಡಿನಲ್ಲಿ ಕನ್ನಡದ ಬಗ್ಗೆ ಗೌರವ ವ್ಯಕ್ತಪಡಿಸಿದ ಸಾಕಷ್ಟು ಉದಾಹರಣೆ ಇದೆ.
Published On - 11:16 am, Fri, 10 March 23

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More



