ಶ್ರೀರಂಗಪಟ್ಟಣ ದಸರಾ: ಮಹಿಳಾ ಪೈಲ್ವಾನರ ಕುಸ್ತಿ ಝಲಕ್ ಇಲ್ಲಿದೆ ನೋಡಿ

| Updated By: ಗಣಪತಿ ಶರ್ಮ

Updated on: Oct 06, 2024 | 6:50 PM

ಮಂಡ್ಯ, ಅಕ್ಟೋಬರ್ 6: ಈಗಾಗಲೇ ನಾಡಹಬ್ಬ ದಸರಾದ ಸಂಭ್ರಮ ಕಳೆಗಟ್ಟಿದೆ. ಅದರಲ್ಲೂ ಐಸಿಹಾಸಿಕ ಶ್ರೀರಂಗಪಟ್ಟಣ ದಸರಾ ಮೊನ್ನೆಯಿಂದ ಆರಂಭಗೊಂಡಿದೆ. ಶ್ರೀರಂಗಪಟ್ಟಣ ದಸರಾದ ಆಕರ್ಷಣೆ ಅಂದರೆ ಅದು ಕುಸ್ತಿ. ದಸರಾದ ಅಂಗವಾಗಿ ಆಯೋಜನೆ ಮಾಡಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯದ ಅನೇಕರ ಪೈಲ್ವಾನರು ಪಾಲ್ಗೊಂಡಿದ್ದರು. ಅದರಲ್ಲೂ ಮಹಿಳಾ ಪೈಲ್ವಾನರ ಕುಸ್ತಿ ಪಂದ್ಯಾವಳಿ ಎಲ್ಲರನ್ನ ಆಕರ್ಷಿಸುತ್ತಿತ್ತು.

1 / 5
ಹೂವಿನಿಂದ ಆಲಂಕಾರಗೊಂಡಿರುವ ಕುಸ್ತಿ ಅಖಾಡ. ಕುಸ್ತಿ ಅಖಾಡದಲ್ಲಿ ಪೈಲ್ವಾನರಿಗೆ ದುರುಂಬಿಸುತ್ತಿರುವ ಅಧಿಕಾರಿಗಳು. ಕುಸ್ತಿ ಅಖಾಡದಲ್ಲಿ ಕೈ ಕೈ ಮಿಲಾಯಿಸುತ್ತಿರೋ ಪೈಲ್ವಾನರು. ಅಂದಹಾಗೆ ಇಂತಹ ದೃಶ್ಯಕಂಡು ಬಂದಿದ್ದು, ಪಾರಂಪರಿಕನಗರಿ ಶ್ರೀರಂಗಪಟ್ಟಣದಲ್ಲಿ. ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಐಸಿಹಾಸಿಕ ಶ್ರೀರಂಗಪಟ್ಟಣ ದಸರಾ ಅಂಗವಾಗಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ಇವತ್ತು ಕುಸ್ತಿ ಪಂದ್ಯಾವಳಿಯನ್ನ ಆಯೋಜನೆ ಮಾಡಲಾಗಿತ್ತು.

2 / 5
ಸುಮಾರು 60 ಪುರುಷ ಹಾಗೂ ಮಹಿಳಾ ಜೋಡಿ ಸ್ವರ್ಧಿಗಳು ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಅದರಲ್ಲೂ ಮಹಿಳೆ ಪೈಲ್ವಾನರು ಅಖಾಡದಲ್ಲಿ ಇಳಿದು ಕೈ ಕೈ ಮಿಲಾಯಿಸಿದ್ದು, ಎಲ್ಲರನ್ನು ಆಕರ್ಷಿಸುತ್ತಿತ್ತು. ಇನ್ನು ಈ ಕುಸ್ತಿ ಪಂದ್ಯಾವಳಿಗೆ ಮಂಡ್ಯ, ಮೈಸೂರು, ರಾಮನಗರ, ದಾವಣಗೆರೆ, ಬೆಳಗಾಗಿ ಸೇರಿ ರಾಜ್ಯದ ವಿವಿಧ ಮೂಲಗಳಿಂದ ಪುರುಷ ಹಾಗೂ ಮಹಿಳಾ ಪೈಲ್ವಾನರು ಆಗಮಿಸಿದ್ದರು.

3 / 5
ಅಂದಹಾಗೆ ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಶುಕ್ರವಾರದಿಂದ ಆರಂಭಗೊಂಡಿದ್ದು, ಅದ್ದೂರಿಯಾಗಿ ಜಂಬೂಸವಾರಿ ನಡೆದಿದೆ. ನಾಲ್ಕು ದಿನಗಳ ಕಾಲ ನಡೆಯುವ ದಸರಾ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗಿದ್ದು, ಅದರಲ್ಲೂ ಕುಸ್ತಿ ಪಂದ್ಯಾವಳಿಯನ್ನ ಆಯೋಜನೆ ಮಾಡಲಾಗಿದೆ.

4 / 5
ಇನ್ನು ಕುಸ್ತಿ ಪಂದ್ಯಾವಳಿಗೆ ಈಗಾಗಲೇ ಶ್ರೀರಂಗಪಟ್ಟಣ ಸಾಕಷ್ಟು ಹೆಸರು ಮಾಡಿದೆ. ವರ್ಷದಲ್ಲಿ ಅನೇಕ ಬಾರಿ ಈ ರೀತಿಯ ಪಂದ್ಯಾವಳಿಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಪೈಲ್ವಾನರಿಗೆ ಸಾಕಷ್ಟು ಉತ್ತಜನೆ ನೀಡುವ ಹಿನ್ನೆಲೆಯಲ್ಲಿ ದಸರಾ ಹಬ್ಬದಲ್ಲಿ ಕುಸ್ತಿ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದ್ದಾರೆ.

5 / 5
ಒಟ್ಟಾರೆಯಾಗಿ ಶುಕ್ರವಾರದಿಂದ ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿರುವ ದಸರಾ ಅಂಗವಾಗಿ ಇವತ್ತು ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಅನೇಕ ಕುಸ್ತಿಪಟುಗಳು ಅಖಾಡದಲ್ಲಿ ಕೈಕೆ ಮಿಲಾಯಿಸಿದರು. ನಾಳೆ ಶ್ರೀರಂಗಪಟ್ಟಣ ದಸರಾಗೆ ತೆರೆ ಬೀಳಲಿದೆ.