- Kannada News Photo gallery Tharun Sudhir And Sonal Montero wedding date and place revealed Entertainment News In Kannada
ಕೊನೆಗೂ ರಿವೀಲ್ ಆಯ್ತು ಸೋನಲ್-ತರುಣ್ ಮದುವೆ ದಿನಾಂಕ, ಸ್ಥಳ
ಸೋಶಿಯಲ್ ಮೀಡಿಯಾದಲ್ಲಿ ಪ್ರೀ-ವೆಡ್ಡಿಂಗ್ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಚಿತ್ರಮಂದಿರದಲ್ಲಿ ಶೂಟ್ ಮಾಡಲಾಗಿದೆ. ಇಬ್ಬರೂ ಗಮನ ಸೆಳೆದಿದ್ದಾರೆ. ಈ ಜೋಡಿಗೆ ಎಲ್ಲ ಕಡೆಗೆಗಳಿಂದ ಶುಭಾಶಯ ಕೋರಲಾಗುತ್ತಿದೆ.
Updated on:Jul 22, 2024 | 12:13 PM

ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೋ ವಿವಾಹ ಆಗುತ್ತಿದ್ದಾರೆ. ಇಬ್ಬರ ಪ್ರೇಮ ವಿಚಾರದ ಬಗ್ಗೆ ಇತ್ತೀಚೆಗೆ ಸುದ್ದಿ ಆಗಿತ್ತು. ಈಗ ಈ ವಿಚಾರ ಅಧಿಕೃತ ಆಗಿದೆ. ಈ ಜೋಡಿ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪ್ರೀ-ವೆಡ್ಡಿಂಗ್ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಚಿತ್ರಮಂದಿರದಲ್ಲಿ ಶೂಟ್ ಮಾಡಲಾಗಿದೆ. ಇಬ್ಬರೂ ಗಮನ ಸೆಳೆದಿದ್ದಾರೆ. ಈ ಜೋಡಿಗೆ ಎಲ್ಲ ಕಡೆಗೆಗಳಿಂದ ಶುಭಾಶಯ ಕೋರಲಾಗುತ್ತಿದೆ.

ತರುಣ್ ಸುಧೀರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಇಬ್ಬರ ಫೋಟೋಶೂಟ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಇವರ ವಿವಾಹ ದಿನಾಂಕ ಕೂಡ ರಿವೀಲ್ ಆಗಿದೆ.

ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಕನ್ವೆಷನ್ ಹಾಲ್ನಲ್ಲಿ ವಿವಾಹ ನಡೆಯಲಿದೆ. ಆಗಸ್ಟ್ 10ರಂದು ಆರತಕ್ಷತೆ ಹಾಗೂ ಆಗಸ್ಟ್ 11ರಂದು ವಿವಾಹ ಕಾರ್ಯ ನಡೆಯಲಿದೆ.

ತರುಣ್ ಸುಧೀರ್ ಹಾಗೂ ಸೋನಲ್ ‘ರಾಬರ್ಟ್’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ತರುಣ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದರೆ ಸೋನಲ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು.
Published On - 12:13 pm, Mon, 22 July 24




