AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಮಾಡುವ ಈ ತಪ್ಪುಗಳು ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು

ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಕಿಡ್ನಿಯೂ ಒಂದು. ನಮ್ಮ ಶರೀರಕ್ಕೆ ಪೂರಕವಾದ ರಾಸಾಯನಿಕಗಳನ್ನು ಬಳಸಿಕೊಂಡು, ಬೇಡವಾದ ವಸ್ತುಗಳನ್ನು ದೇಹದಿಂದ ಹೊರ ಹಾಕುವ ಮೂಲಕ ಫಿಲ್ಟರ್ ನಂತೆ ಕೆಲಸ ಮಾಡುತ್ತದೆ. ಆದರೆ ಪ್ರತಿನಿತ್ಯ ನಾವು ಮಾಡುವ ತಪ್ಪುಗಳು ಕಿಡ್ನಿಯ ಆರೋಗ್ಯವನ್ನು ಹಾಳು ಮಾಡಬಹುದು. ಇದರಿಂದ ಮೂತ್ರಪಿಂಡ ಕಿರಿಕಿರಿಗೆ ಒಳಗಾಗುವುದಲ್ಲದೆ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳು ಆರಂಭವಾಗಬಹುದು.

ಪ್ರೀತಿ ಭಟ್​, ಗುಣವಂತೆ
| Edited By: |

Updated on: Mar 13, 2025 | 10:26 AM

Share
ಪ್ರತಿನಿತ್ಯ ನಾವು ಮಾಡುವ ತಪ್ಪುಗಳು ಕಿಡ್ನಿಯ ಆರೋಗ್ಯವನ್ನು ಹಾಳು ಮಾಡಬಹುದು. ಇದರಿಂದ ಮೂತ್ರಪಿಂಡ ಕಿರಿಕಿರಿಗೆ ಒಳಗಾಗುವುದಲ್ಲದೆ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳು ಆರಂಭವಾಗಬಹುದು. ಹಾಗಾಗಿ ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.

1 / 5
ಮೂತ್ರ ವಿಸರ್ಜನೆ ಮಾಡಬೇಕು ಎನಿಸಿದರೂ ಅದನ್ನು ಒಂದಲ್ಲಾ ಒಂದು ಕಾರಣದಿಂದ ತಡೆಹಿಡಿಯುವ ಅಭ್ಯಾಸ ನಿಮಗಿದ್ದರೆ ಅದನ್ನು ಕೂಡಲೇ ಬಿಟ್ಟುಬಿಡಿ. ಏಕೆಂದರೆ ಇದು ಕಿಡ್ನಿಯಲ್ಲಿ ಕಲ್ಲುಗಳು ಉಂಟಾಗಲು ಮತ್ತು ಕಿಡ್ನಿ ವೈಫಲ್ಯಕ್ಕೆ ಮುಖ್ಯ ಕಾರಣವಾಗುತ್ತದೆ.

2 / 5
ಕೆಲವರಿಗೆ ನೀರನ್ನು ಕುಡಿಯುವುದು ದೊಡ್ಡ ಕಿರಿಕಿರಿಯಾಗಿರುತ್ತದೆ. ಆದರೆ ಈ ಅಭ್ಯಾಸದಿಂದ ನಿಮ್ಮ ಕಿಡ್ನಿಗಳಿಗೆ ಕಿರಿಕಿರಿಯಾಗಿ ತೊಂದರೆಯಾಗುತ್ತದೆ. ಅಲ್ಲದೆ, ದೇಹದಲ್ಲಿನ ಕೆಟ್ಟ ಅಂಶಗಳು ಹೊರಹೋಗಲು ತೊಂದರೆಯಾಗುತ್ತದೆ. ಹಾಗಾಗಿ ಕಿಡ್ನಿ ಆರೋಗ್ಯವಾಗಿರಲು ನೀರು ಕುಡಿಯುವುದು ಬಹಳ ಮುಖ್ಯ.

3 / 5
ಕೆಲವರಿಗೆ ಹೆಚ್ಚು ಸಕ್ಕರೆ ಅಥವಾ ಇನ್ನಿತರ ಸಿಹಿ ತಿಂಡಿಗಳ ಸೇವನೆ ಮಾಡಲು ಬಹಳ ಇಷ್ಟ. ಆದರೆ ಇಷ್ಟವೆಂದು ಮನಬಂದಂತೆ ತಿಂದರೆ ಅದು ನಿಮ್ಮ ಆರೋಗ್ಯಕ್ಕೆ ಕುತ್ತು ತರುತ್ತದೆ. ಹಾಗಾಗಿ ಸಿಹಿ ತಿಂಡಿಗಳ ಸೇವನೆ ಆದಷ್ಟು ಕಡಿಮೆ ಮಾಡಿ. ಪದೇ ಪದೇ ಸಿಹಿ ತಿನ್ನಬೇಕು ಎನಿಸಿದರೆ ಅದಕ್ಕೆ ಆರೋಗ್ಯಕರ ಪರ್ಯಾಯ ಹುಡುಕಿಕೊಳ್ಳಿ.

4 / 5
ಕೆಂಪು ಮಾಂಸ ಸೇವನೆ ಮಾಡಲು ಕೆಲವರಿಗೆ ತುಂಬಾ ಇಷ್ಟವಿರುತ್ತದೆ. ಕುರಿ, ಮೇಕೆ, ಹೀಗೆ ಮೊದಲಾದ ಪ್ರಾಣಿಗಳ ಮಾಂಸವನ್ನು ಚಪ್ಪರಿಸಿ ತಿನ್ನುತ್ತಾರೆ. ಆದರೆ ಇದನ್ನು ಇಷ್ಟವೆಂದು ಪ್ರತಿನಿತ್ಯ ಸೇವಿಸಲು ಆರಂಭಿಸಿದರೆ ಕಿಡ್ನಿ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ಮಾಂಸಾಹಾರ ಸೇವನೆ ಮಿತಿಯಲ್ಲಿದ್ದರೆ ಬಹಳ ಒಳ್ಳೆಯದು. ಅದೇ ರೀತಿ ಅತಿ ಹೆಚ್ಚು ಉಪ್ಪು ಸೇವನೆ ಮತ್ತು ನಿದ್ದೆ ಮಾಡದಿರುವುದು ಕೂಡ ಕಿಡ್ನಿ ಆರೋಗ್ಯವನ್ನು ಹಾಳು ಮಾಡುತ್ತದೆ.

5 / 5
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us