Cracked Heels: ನಿಮ್ಮ ಹಿಮ್ಮಡಿ ಬಿರುಕು ಬಿಟ್ಟಿದ್ದರೆ ಪರಿಹಾರ ಇಲ್ಲಿದೆ
TV9kannada Web Team | Edited By: sandhya thejappa
Updated on: Jul 08, 2022 | 8:30 AM
ಬಿರುಕು ಕಂಡು ಬಂದರೆ ಕಾಲುಗಳು ಸುಂದರವಾಗಿ ಕಾಣಿಸುವುದಿಲ್ಲ. ಕಾಲಿನ ಪಾದದ ನೋವು ಕಾಡುತ್ತದೆ. ಅದರಲ್ಲಿಯೂ ಮಣ್ಣಿನ ಕೆಸರು ಒಡಕುಗಳಲ್ಲಿ ಸಿಲುಕಿಕೊಂಡು ಹೆಚ್ಚು ಸಮಸ್ಯೆಯನ್ನು ತಂದೊಡ್ಡುತ್ತದೆ.
Jul 08, 2022 | 8:30 AM
ಕಲ್ಲು ಉಪ್ಪನ್ನು ಪುದೀನ ಅಥವಾ ನೀಲಗಿರಿ ಎಣ್ಣೆಯಲ್ಲಿ ಸೇರಿಸಿ. ಆ ಮಿಶ್ರಣವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕಾಲುಗಳನ್ನು 20 ನಿಮಿಷಗಳ ಕಾಲ ನೆನೆಸಿಡಿ. ಇದರಿಂದ ಪಾದಗಳ ಒಡಕು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
1 / 5
ನಿಂಬೆ ರಸ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ಪಾದಗಳ ಒಡದಿರುವ ಜಾಗಕ್ಕೆ ಹಚ್ಚಿಕೊಳ್ಳಿ. ನಂತರ ಕಾಲುಗಳನ್ನು ಸ್ವಚ್ಛಗೊಳಿಸಿ. ಪ್ರತಿನಿತ್ಯ 5 ನಿಮಿಷಗಳ ಕಾಲ ಹೀಗೆ ಮಾಡುವುದರ ಮೂಲಕ ಬಹು ಬೇಗ ಪಾದದ ಒಡಕು ಸಮಸ್ಯೆ ನಿವಾರಣೆಯಾಗುತ್ತದೆ.
2 / 5
ಔಷಧಿ ಗುಣವನ್ನು ಹೊಂದಿರುವ ಜೇನುತುಪ್ಪವನ್ನು ಒಡೆದ ಹಿಮ್ಮಡಿಗೆ ಹಚ್ಚಿ. ಅರ್ಧ ಗಂಟೆ ಬಳಿಕ ತೊಳೆಯಿರಿ.
3 / 5
ಬಾದಾಮಿ ಎಣ್ಣೆ, ಸಮುದ್ರದ ಉಪ್ಪು, ಜೇನುತುಪ್ಪ, ಅಕ್ಕಿ ಪುಡಿ, ಪುದೀನಾ ಎಣ್ಣೆಯನ್ನು ಬೆರೆಸಿ. ಇದರ ಮೂಲಕ ಪಾದಗಳನ್ನು ಸ್ಕ್ರಬ್ ಮಾಡಿ. ಪಾದಗಳಲ್ಲಿ ಅಂಟಿಕೊಂಡಿರುವ ಕೆಸರನ್ನು ತೆಗದು ಹಾಕಲು ಇದು ಸಹಾಯ ಮಾಡುತ್ತದೆ. ಒಣಗಿದ ಚರ್ಮವನ್ನು ಕಿತ್ತುಹಾಕಿ, ಹೊಸ ಚರ್ಮ ಹುಟ್ಟಿಕೊಳ್ಳಲು ಸಹಾಯಕವಾಗಿದೆ. ಜತೆಗೆ ಚರ್ಮವನ್ನು ಮೃದುಗೊಳಿಸುತ್ತದೆ.
4 / 5
ಅಲೋವೆರಾ ಜೆಲ್ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಅನೇಕರು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಬಳಸುತ್ತಾರೆ. ಕಾಲಿನ ಪಾದಗಳಲ್ಲಿ ಬಿರುಕು ಬಿಟ್ಟ ಜಾಗದಲ್ಲಿ ಸರಿಯಾಗಿ ನೈಸರ್ಗಿಕ ಅಲೋವೆರಾವನ್ನು ಹಚ್ಚಿದರೆ ಪಾದಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಪಾದಗಳು ಮೃದುವಾಗಿರುತ್ತವೆ ಮತ್ತು ಬಿರುಕು ಸಮಸ್ಯೆ ನಿವಾರಣೆಯಾಗುತ್ತದೆ.