- Kannada News Photo gallery Tollywood Actor Naga Chaitanya Bought Porsche 911 GT3 RS here is the car details
4 ಕೋಟಿ ರೂಪಾಯಿ ಕೊಟ್ಟು ಸ್ಪೋರ್ಟ್ಸ್ ಕಾರು ಖರೀದಿಸಿದ ನಾಗ ಚೈತನ್ಯ; ವಿಶೇಷತೆಗಳೇನು?
ತೆಲುಗು ನಟ ನಾಗ ಚೈತನ್ಯ ಅವರಿಗೆ ಕಾರಿನ ಬಗ್ಗೆ ವಿಶೇಷ ಕ್ರೇಜ್ ಇದೆ. ಅವರ ಬಳಿ ಹಲವು ದುಬಾರಿ ಕಾರುಗಳು ಇವೆ. ನಾಗ ಚೈತನ್ಯ ಅವರು ಚೆನ್ನೈನಲ್ಲಿ ‘ಪೋರ್ಷಾ 911 ಜಿಟಿ3 ಆರ್ಎಸ್’ ಕಾರನ್ನು ಖರೀದಿ ಮಾಡಿದ್ದಾರೆ. ಈ ಫೋಟೋಗಳನ್ನು ಶೋರೂಂನವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Updated on: May 22, 2024 | 11:58 AM

ತೆಲುಗು ನಟ ನಾಗ ಚೈತನ್ಯ ಅವರಿಗೆ ಕಾರಿನ ಬಗ್ಗೆ ವಿಶೇಷ ಕ್ರೇಜ್ ಇದೆ. ಅವರ ಬಳಿ ಹಲವು ದುಬಾರಿ ಕಾರುಗಳು ಇವೆ. ಅವರು ಶೂಟಿಂಗ್ನಿಂದ ಬಿಡುವು ಪಡೆದಾಗಲೆಲ್ಲ ಕಾರಲ್ಲಿ ಲಾಂಗ್ ಡ್ರೈವ್ ಹೋಗುತ್ತಾರೆ. ಈ ಅವರ ಮನೆಗೆ ಹೊಸ ಕಾರಿನ ಆಗಮನ ಆಗಿದೆ.

ನಾಗ ಚೈತನ್ಯ ಅವರು ಚೆನ್ನೈನಲ್ಲಿ ‘ಪೋರ್ಷಾ 911 ಜಿಟಿ3 ಆರ್ಎಸ್’ ಕಾರನ್ನು ಖರೀದಿ ಮಾಡಿದ್ದಾರೆ. ಈ ಫೋಟೋಗಳನ್ನು ಶೋರೂಂನವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಫೋರ್ಷಾ 911 ಜಿಟಿ3 ಆರ್ಎಸ್ ಕಾರಿನ ಎಕ್ಸ್ ಶೋರೂಂ ಬೆಲೆ 3.51 ಕೋಟಿ ರೂಪಾಯಿ. ಆನ್ರೋಡ್ ಬೆಲೆ 4 ಕೋಟಿ ರೂಪಾಯಿ ದಾಟಲಿದೆ. ಈ ಕಾರು ಆಟೋಮ್ಯಾಟಿಕ್, 7 ಗೇರ್, ಪ್ಯಾಡಲ್ ಶಿಫ್ಟ್ ಸ್ಪೋರ್ಟ್ ಮೋಡ್ ಟ್ರಾನ್ಸ್ಮೀಷನ್ನಲ್ಲಿ ಲಭ್ಯವಿದೆ. ಈ ಕಾರು ಪ್ರತಿ ಲೀಟರ್ಗೆ 7.4 ಕಿಮೀ ಮೈಲೇಜ್ ನೀಡಲಿದೆ.

ಈ ಪೋರ್ಷಾ ಕಾರಿನ ಟಾಪ್ ಸ್ಪೀಡ್ 296 Kmph. ಜೀರೋದಿಂದ 100 ಕಿಮೀ ಸ್ಪೀಡ್ನ ಕೇವಲ 3.2 ಸೆಕೆಂಡ್ನಲ್ಲಿ ತಲುಪಲಿದೆ. 3996 ಸಿಸಿ, 6 ಸಿಲಿಂಡರ್ ಇಂಜಿನ್ ಇದರಲ್ಲಿದ್ದು, ಪೆಟ್ರೋಲ್ ವೇರಿಯಂಟ್ನಲ್ಲಿ ಕಾರು ಲಭ್ಯವಿದೆ.

ಈ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ಕಾರಿನಲ್ಲಿ ಏಳು ಏರ್ ಬ್ಯಾಗ್ ಇದೆ. ಬೆಳ್ಳಿ ಬಣ್ಣದ ಕಾರನ್ನು ನಾಗ ಚೈತನ್ಯ ಖರೀದಿ ಮಾಡಿದ್ದಾರೆ.

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More



