ಅತ್ತಿಗೆ-ನಾದಿನಿಯರು ತಲೆಗೆ ತಲೆ ಡಿಕ್ಕಿ ಹೊಡೆಯುವುದೇ ಹಬ್ಬ! ಚಿತ್ರದುರ್ಗ ಚಿಕ್ಕೀರಣ್ಣನ ಮಾಳಿಗೆ ಗ್ರಾಮದಲ್ಲೊಂದು ವಿಶಿಷ್ಟ ಆಚರಣೆ

Edited By:

Updated on: Mar 03, 2026 | 11:51 AM

ಚಿತ್ರದುರ್ಗ, ಮಾರ್ಚ್ 3: ಅತ್ತಿಗೆ ಹಾಗೂ ನಾದಿನಿಯರ ನಡುವೆ ಶೀತಲ ಸಮರ ನಡೆಯುವುದು ಸಾಮಾನ್ಯ. ಆದರೆ ಕೋಟೆನಾಡು ಚಿತ್ರದುರ್ಗದಲ್ಲಿ ಅತ್ತಿಗೆ-ನಾದಿನಿಯರಿಗಾಗಿಯೇ ವಿಶೇಷ ಹಬ್ಬವೊಂದು ಆಚರಣೆಯಲ್ಲಿದೆ. ಅದುವೇ ಡಿಕ್ಕಿ ಹಬ್ಬ! ಅತ್ತಿಗೆ-ನಾದಿನಿಯರು ತಲೆಗೆ ತಲೆ ಡಿಕ್ಕಿ ಹೊಡೆಯುವ ಅಪರೂಪದ ಸಾಂಪ್ರದಾಯಿಕ ಆಚರಣೆಯೊಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಚಿಕ್ಕೀರಣ್ಣನ ಮಾಳಿಗೆ ಗ್ರಾಮದಲ್ಲಿ ನಡೆದುಬಂದಿದೆ. ಡಿಕ್ಕಿ ಹಬ್ಬದ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ.

1 / 5
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಚಿಕ್ಕೀರಣ್ಣನ ಮಾಳಿಗೆ ಗ್ರಾಮದಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸುವ ಬುಡಕಟ್ಟು ಸಂಸ್ಕೃತಿಯ ಅಪರೂಪದ ಆಚರಣೆಯೊಂದು ನಡೆಯುತ್ತಿದೆ. ಅದುವೇ ಅತ್ತಿಗೆ ನಾದಿನಿಯರು ತಲೆಗೆ ಡಿಕ್ಕಿ ಹೊಡೆವ ಡಿಕ್ಕಿ ಹಬ್ಬ. ವಿಶಿಷ್ಟ ಆಚರಣೆಗೆ ಸಾವಿರಾರು ಜನರು ಸಾಕ್ಷಿಯಾಗಿದ್ದಾರೆ.

ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಚಿಕ್ಕೀರಣ್ಣನ ಮಾಳಿಗೆ ಗ್ರಾಮದಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸುವ ಬುಡಕಟ್ಟು ಸಂಸ್ಕೃತಿಯ ಅಪರೂಪದ ಆಚರಣೆಯೊಂದು ನಡೆಯುತ್ತಿದೆ. ಅದುವೇ ಅತ್ತಿಗೆ ನಾದಿನಿಯರು ತಲೆಗೆ ಡಿಕ್ಕಿ ಹೊಡೆವ ಡಿಕ್ಕಿ ಹಬ್ಬ. ವಿಶಿಷ್ಟ ಆಚರಣೆಗೆ ಸಾವಿರಾರು ಜನರು ಸಾಕ್ಷಿಯಾಗಿದ್ದಾರೆ.

2 / 5

ಚಿಕ್ಕೀರಣ್ಣನ ಮಾಳಿಗೆ ಗ್ರಾಮದಲ್ಲಿ ಬುಡಕಟ್ಟು ಸಮುದಾಯದ ಜನ ವಿಶಿಷ್ಟ ಹಬ್ಬವನ್ನು ಆಚರಿಸುತ್ತಾರೆ. ಅಹೋಬಲ ನರಸಿಂಹಸ್ವಾಮಿ ದೇವರ ಜಾತ್ರೆ, ಉತ್ಸವದ ಅಂಗವಾಗಿ ಈ ಆಚರಣೆ ನಡೆಯುತ್ತದೆ. ದೇವರ ಉತ್ಸವ ಮೆರವಣಿಗೆ ವೇಳೆ ನೆಲಕ್ಕೆ ಬಾಳೆ ಹಣ್ಣು, ಬೆಲ್ಲ ಹಾಕಿ ಸೇವಿಸುವ ಸಾಂಪ್ರದಾಯಿಕ ಮಣೇವು ಸಾಂಪ್ರದಾಯಿಕ ಆಚರಣೆ ಸಹ ಆಚರಿಸಲಾಗುತ್ತದೆ.

3 / 5

ಯುವಕರು ಟಗರುಗಳನ್ನು ತಂದು ದೇಗುಲದ ಆವರಣದಲ್ಲಿ ಡಿಕ್ಕಿ ಹೊಡೆಸಿ ಖುಷಿ ಪಡುತ್ತಾರೆ. ಆ ಬಳಿಕ ಅತ್ತಿಗೆ ನಾದಿನಿಯರು ಸಾಂಪ್ರದಾಯಿಕ ಡಿಕ್ಕಿ ಹಬ್ಬ ಆಚರಿಸುತ್ತಾರೆ. ಈ ಆಚರಣೆ ಅತ್ತಿಗೆ ನಾದಿನಿಯರ ಪ್ರೀತಿಯ ಅಪ್ಪುಗೆಯ ಹಬ್ಬವಾಗಿದ್ದು, ಪುರಾತನ ಕಾಲದಿಂದಲೂ ಆಚಿರಿಸಿಕೊಂಡು ಬರಲಾಗುತ್ತಿದೆ ಅಂತಾರೆ ಅಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ಅವರು.

4 / 5

ಇನ್ನು ಈ ಗ್ರಾಮದ ಹೆಣ್ಣುಮಕ್ಕಳು ಅದೆಷ್ಟು ದೂರದ ಊರಿಗೆ ಸೊಸೆಯಾಗಿ ಹೋಗಿದ್ದರೂ ಸಹ ತಪ್ಪದೆ ಈ ಹಬ್ಬಕ್ಕೆ ಬರುತ್ತಾರೆ. ಅತ್ತಿಗೆ, ನಾದಿನಿಯರ ಮಧ್ಯೆ ಏನೇ ವೈಮನಸ್ಸು ಇದ್ದರೂ ಸಹ ಇಂದು ಒಂದಾಗಿ ಹಬ್ಬ ಆಚರಿಸುತ್ತಾರೆ. ಈ ಹಬ್ಬಕ್ಕೆ ಗೈರಾದರೆ ಸಣ್ಣ ತಲೆನೋವು ಬಂದರೂ ಈ ಹಬ್ಬಕ್ಕೆ ಗೈರಾಗಿದ್ದಕ್ಕೆ ಬಂತೆಂಬ ಭಾವನೆ ಮೂಡತ್ತದೆ. ಹೀಗಾಗಿ, ಅತ್ತಿಗೆ ಮತ್ತು ನಾದಿನಿಯರು ಈ ಹಬ್ಬದಲ್ಲಿ ತಪ್ಪದೇ ಪಾಲ್ಗೊಳ್ತಾರೆ ಎನ್ನುತ್ತಾರೆ ರಂಜಿತಾ.

5 / 5

ಒಟ್ಟಾರೆಯಾಗಿ ಚಿತ್ರದುರ್ಗದ ಸಿಎನ್ ಮಾಳಿಗೆ ಗ್ರಾಮದಲ್ಲಿ 3 ದಿನ ಕಾಲ ನಡೆದ ಅಹೋಬಲ ನರಸಿಂಹಸ್ವಾಮಿ ಉತ್ಸವಕ್ಕೆ ತೆರೆ ಬಿದ್ದಿದೆ. ಈ ಅಪರೂಪದ ಆಚರಣೆಯ ಮೂಲಕ ಬಾಂಧ್ಯವಗಳು ಮತ್ತಷ್ಟು ಗಟ್ಟಿಗೊಳ್ಳುತ್ತವೆ ಎಂಬುದು ಜನರ ನಂಬಿಕೆ ಆಗಿದೆ. ಒಟ್ಟಿನಲ್ಲಿ ಬುಡಕಟ್ಟು ಸಂಸ್ಕೃತಿಯ ಡಿಕ್ಕಿ ಹಬ್ಬ ಆಚರಿಸಿ ಅತ್ತಿಗೆ-ನಾದಿನಿಯರು ಖುಷಿಪಟ್ಟಿದ್ದಾರೆ.

ಬಸವರಾಜ ಮುದನೂರ್

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Loading...
Unable to load recommendations.
Follow Us