ಅಮೆರಿಕದಲ್ಲೂ ಜೋರಿದೆ ‘ಯುಐ’ ಹವಾ, ಚಿತ್ರಗಳಲ್ಲಿ ನೋಡಿ
UI Movie: ಉಪೇಂದ್ರ ನಟಿಸಿ ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾ ಡಿಸೆಂಬರ್ 20ಕ್ಕೆ ತೆರೆಗೆ ಬರಲಿದೆ. ಸಿನಿಮಾದ ಬಗ್ಗೆ ಅಭಿಮಾನಿಗಳು ಕಾತರರಾಗಿದ್ದಾರೆ. ಅಮೆರಿಕದಲ್ಲಿಯೂ ಸಹ ‘ಯುಐ’ ಸಿನಿಮಾದ ಹವಾ ಜೋರಾಗಿದೆ. ಅಮೆರಿಕ ಕನ್ನಡಿಗರು ‘ಯುಐ’ ಸಿನಿಮಾ ಪೋಸ್ಟರ್ಗಳನ್ನು ಹಿಡಿದು ಸಿನಿಮಾಕ್ಕೆ ಶುಭ ಕೋರಿದ್ದಾರೆ. ಸಿನಿಮಾ ನೋಡಲು ಕಾತರತೆ ವ್ಯಕ್ತಪಡಿಸಿದ್ದಾರೆ. ಇಲ್ಲಿವೆ ಕೆಲ ಚಿತ್ರಗಳು.
Updated on: Dec 17, 2024 | 1:09 PM

ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರದಲ್ಲಿ ಉಪೇಂದ್ರ ನಿರತರಾಗಿದ್ದಾರೆ. ಇದೀಗ ಅಮೆರಿಕದಲ್ಲೂ ಕನ್ನಡಿಗರು ‘ಯುಐ’ ಸಿನಿಮಾ ನೋಡಲು ರೆಡಿಯಾಗಿದ್ದಾರೆ.

ಅಮೆರಿಕದ ಹಲವು ನಗರಗಳಲ್ಲಿ ‘ಯುಐ’ ಸಿನಿಮಾದ ಹವಾ ಜೋರಾಗಿದ್ದು, ಅಮೆರಿಕದ ಕನ್ನಡ ಬಳಗಳು ‘ಯುಐ’ ಸಿನಿಮಾ ಪೋಸ್ಟರ್ ಹಿಡಿದು ಪ್ರಚಾರ ನಡೆಸಿವೆ. ಸಿನಿಮಾದ ಕಾತರ ಮತ್ತು ನಿರೀಕ್ಷೆಯನ್ನು ವ್ಯಕ್ತಪಡಿಸಿವೆ.

ಅಮೆರಿಕದ ದೊಡ್ಮನೆ ಅಭಿಮಾನಿ ಬಳಗದವರು ‘ಯುಐ’ ಸಿನಿಮಾಕ್ಕೆ ಶುಭ ಕೋರಿದ್ದು, ಐರನ್ ಲೇಡಿ ಆಫ್ ಇಂಡಿಯಾ ಖುದಿಸಿಯ ನಜಿರ್ ಅವರು ಬಿಡುಗಡೆ ಮಾಡಿದ ಅಮೆರಿಕದ ದೊಡ್ಮನೆ ಅಭಿಮಾನಿ ಬಳಗದ ಲೋಗೊ ಹಿಡಿದು ಯುಐ ಪೋಸ್ಟರ್ ಹಿಡಿದು ಫೋಟೊಕ್ಕೆ ಫೋಸು ನೀಡಿದ್ದಾರೆ.

ಡಲ್ಲಾಸ್ ಕನ್ನಡ ಸಂಘದ ಸದಸ್ಯರು ಸಹ ‘ಯುಐ’ ಪೋಸ್ಟರ್ ಹಿಡಿದುಕೊಂಡು ಫೋಟೊ ತೆಗೆಸಿಕೊಂಡಿದ್ದು ಸಿನಿಮಾ ನೋಡಲು ಉತ್ಸುಕರಾಗಿರುವುದಾಗಿ ಹೇಳಿದ್ದಾರೆ. ಡಾಲರ್ಸ್ ಕನ್ನಡ ಸಂಘದವರು ಸಹ ‘ಯುಐ’ ಸಿನಿಮಾಕ್ಕೆ ಬೆಂಬಲ ಸೂಚಿಸಿದ್ದಾರೆ.

ಕೆಲವು ಉತ್ಸಾಹಿ ಅಮೆರಿಕ ಕನ್ನಡಿಗರು ‘ಯುಐ’ ಸಿನಿಮಾದ ಪೋಸ್ಟರ್ ಹಿಡಿದುಕೊಂಡು ಉಪೇಂದ್ರ ಅವರ ವೈರಲ್ ಹಾಡಾಗಿರುವ ‘ಬರಿ ವೋಳು’ ಹಾಡಿಗೆ ಅವರಂತೆ ಸ್ಟೆಪ್ ಹಾಕಿದ್ದಾರೆ.

‘ಯುಐ’ ಸಿನಿಮಾವನ್ನು ಉಪೇಂದ್ರ ನಿರ್ದೇಶನ ಮಾಡಿದ್ದು, ಅವರೇ ನಟಿಸಿದ್ದಾರೆ. ಸಿನಿಮಾಕ್ಕೆ ಲಹರಿ ವೇಲು, ಕೆಪಿ ಶ್ರೀಕಾಂತ್ ಅವರುಗಳು ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸಿನಿಮಾ ಡಿಸೆಂಬರ್ 20 ರಂದು ಹಲವು ಭಾಷೆಗಳಲ್ಲಿ ತೆರೆಗೆ ಬರಲಿದೆ.



















