Updated on: Jan 01, 2022 | 7:55 PM
Uri movie actor Mohit Raina and Aditi marriage Photos
ಮೋಹಿತ್ ರೈನಾ ಅವರು ತಮ್ಮ ಪ್ರೀತಿಯ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರು. ಅವರು ಮದುವೆ ಆಗುತ್ತಿದ್ದಾರೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಕೆಲವೇ ಕೆಲವು ಮಂದಿಯನ್ನು ಮಾತ್ರ ಈ ಮದುವೆಗೆ ಆಹ್ವಾನಿಸಲಾಗಿತ್ತು.
ಹಿಂದಿ ಕಿರುತೆರೆಯಲ್ಲಿ ಮೋಹಿತ್ ರೈನಾ ಹೆಚ್ಚು ಫೇಮಸ್. ‘ದೇವೋಂಕೆ ದೇವ್ ಮಹಾದೇವ್’ ಸೀರಿಯಲ್ನಲ್ಲಿ ಅವರು ಶಿವನ ಪಾತ್ರ ಮಾಡುವ ಮೂಲಕ ಮನೆಮಾತಾಗಿದ್ದರು.
ಕೆಲವು ವೆಬ್ ಸೀರಿಸ್ಗಳಲ್ಲಿ ಮೋಹಿತ್ ರೈನಾ ಅವರು ನಟಿಸಿದ್ದಾರೆ. ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಬಿಡುಗಡೆಯಾದ ‘ಮುಂಬೈ ಡೈರೀಸ್ 26/11’ ವೆಬ್ ಸರಣಿಯಲ್ಲಿ ಡಾಕ್ಟರ್ ಪಾತ್ರ ಮಾಡುವ ಮೂಲಕ ಅವರು ಗಮನ ಸೆಳೆದಿದ್ದಾರೆ.