Kannada News Photo gallery Vaamana to Ghaati 7 Powerful South Indian Films Releasing in April A Must-Watch List
ಏಪ್ರಿಲ್ನಲ್ಲಿ ರಿಲೀಸ್ ಆಗುತ್ತಿವೆ ದಕ್ಷಿಣದ 7 ಪವರ್ಫುಲ್ ಸಿನಿಮಾಗಳು; ವಿಶೇಷತೆಗಳೇನು?
ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ದಕ್ಷಿಣದ ಹಲವು ಸಿನಿಮಾಗಳು ರಿಲೀಸ್ ಆಗಿವೆ. ಈ ಪೈಕಿ ಗೆದ್ದಿದ್ದು ಕೆಲವೇ ಕೆಲವು ಸಿನಿಮಾಗಳು. ಆದರೆ, ಏಪ್ರಿಲ್ನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಒಟ್ಟೂ 7 ಚಿತ್ರಗಳು ತೆರೆಗೆ ಬರುತ್ತಿವೆ. ಅವುಗಳ ವಿಶೇಷತೆ ಬಗ್ಗೆ ಇಲ್ಲಿದೆ ವಿವರ.
ಕನ್ನಡದಲ್ಲಿ ಧನ್ವೀರ್ ನಟನೆಯ ‘ವಾಮನ’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ದರ್ಶನ್ ಅವರು ಬೆಂಬಲ ನೀಡಿರುವುದರಿಂದ ನಿರೀಕ್ಷೆ ಹೆಚ್ಚಿದೆ. ಈ ಚಿತ್ರ ಭರ್ಜರಿ ಮಾಸ್ ಆ್ಯಕ್ಷನ್ನಿಂದ ಕೂಡಿದೆ ಎಂಬುದು ಟ್ರೇಲರ್ ನೋಡಿದವರಿಗೆ ಅರ್ಥವಾಗುತ್ತದೆ. ಈ ಚಿತ್ರ ಏಪ್ರಿಲ್ 10ರಂದು ಬಿಡುಗಡೆ ಕಾಣಲಿದೆ.
1 / 7
ಬಜೂಕಾ: ಮಮ್ಮುಟಿ ನಟೆಯ ‘ಬಜೂಕಾ’ ಚಿತ್ರವೂ ಏಪ್ರಿಲ್ 10ರಂದು ಬಿಡುಗಡೆ ಕಾಣಲಿದೆ. ಮಾಸ್ ಆ್ಯಕ್ಷನ್ನಲ್ಲಿ ಮಮ್ಮುಟ್ಟಿ ಅವರು ಮಿಂಚಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ಮಲಯಾಳಂ ಸಿನಿಮಾ. ಈ ಚಿತ್ರಕ್ಕೆ ಪ್ರಚಾರ ಜೋರಾಗಿದೆ.
2 / 7
ಅಜಿತ್ ನಟನೆಯ ತಮಿಳಿನ ‘ಗುಡ್ ಬ್ಯಾಡ್ ಅಗ್ಲಿ’ ಏಪ್ರಿಲ್ 10ರಂದು ತೆರೆಗೆ ಬರಲಿದೆ. ಇದರಲ್ಲಿ ಅಜಿತ್ ಅವರಿಗೆ ಮೂರು ಶೇಡ್ ಇದೆ ಎನ್ನಲಾಗಿದೆ. ಅವರ ನಟನೆಯ ‘ವಿದುಮುಯಾರ್ಚಿ’ ಇತ್ತೀಚೆಗೆ ರಿಲೀಸ್ ಆಗಿ ಸದ್ದು ಮಾಡಲು ವಿಫಲವಾಗಿದೆ. ಹೀಗಾಗಿ, ಈ ಸಿನಿಮಾ ಮೂಲಕ ಗೆಲ್ಲುವ ಭರವಸೆಯಲ್ಲಿ ಅವರಿದ್ದಾರೆ.
3 / 7
ತಮನ್ನಾ ಭಾಟಿಯಾ ನಟನೆಯ ತೆಲುಗಿನ ‘ಒಡೆಲಾ 2’ ಸಿನಿಮಾ ಏಪ್ರಿಲ್ 17ರಂದು ಬಿಡುಗಡೆ ಕಾಣುತ್ತಿದೆ. ಇದು ಸೂಪರ್ನ್ಯಾಚುರಲ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿದೆ. ಹಾರರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಸಿನಿಮಾ ಇಷ್ಟ ಆಗಲಿದೆ. ಅಶೋಕ್ ತೇಜಾ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
4 / 7
‘ದಿ ಪೆಟ್ ಡಿಟೆಕ್ಟಿವ್’ ಸಿನಿಮಾ ಇದೇ ಏಪ್ರಿಲ್ 25ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಬಗ್ಗೆ ಅನುಪಮಾ ಪರಮೇಶ್ವರನ್ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶರಫುದ್ದೀನ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
5 / 7
ಅನುಷ್ಕಾ ಶರ್ಮಾ ಅವರು ಸಿನಿಮಾ ಒಪ್ಪಿಕಂಡರು ಎಂದರೆ ಅದರಲ್ಲಿ ಒಂದು ವಿಶೇಷ ಇದ್ದೇ ಇರುತ್ತದೆ. ಈಗ ಅವರು ‘ಘಾಟಿ’ ಹೆಸರಿನ ಸಿನಿಮಾ ಮಾಡಿದ್ದಾರೆ. ತೆಲುಗಿನ ಈ ಚಿತ್ರ ಏಪ್ರಿಲ್ 18ರಂದು ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಅವರನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ.
6 / 7
‘ಲವ್ಲಿ’ ಹೆಸರಿನ ಸಿನಿಮಾ ಏಪ್ರಿಲ್ 4ರಂದು ತೆರೆಗೆ ಬರಲಿದೆ. ಮ್ಯಾಥೀವ್ ಥಾಮಸ್ ಈ ಚಿತ್ರದಲ್ಲಿದ್ದಾರೆ. ಈ ಸಿನಿಮಾದಲ್ಲಿ ನೊಣ ಕೂಡ ಇದೆ. ಈ ನೊಣ ಮಾತನಾಡುವ ಶಕ್ತಿಯನ್ನು ಹೊಂದಿದೆ. ಕಾಮಿಡಿ ಶೈಲಿಯಲ್ಲಿ ಚಿತ್ರ ಮೂಡಿ ಬಂದಿದೆ. ‘ಈಗ’ ನೊಣವನ್ನು ನೋಡಿದಂತೆ ಕಾಣಲಿದೆ.