Vanitha Vijaykumar: ಮೂರನೇ ಪತಿಯ ನಿಧನಕ್ಕೆ ಕಂಬನಿ ಮಿಡಿದ ನಟಿ ವನಿತಾ ವಿಜಯ್ಕುಮಾರ್
Peter Paul: ವನಿತಾ ವಿಜಯ್ಕುಮಾರ್ ಅವರ ಮಾಜಿ ಪತಿ ಪೀಟರ್ ಪೌಲ್ ಅವರು ವಿಎಫ್ಎಕ್ಸ್ ಸಂಕಲನಕಾರನಾಗಿದ್ದರು. ಅವರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿತ್ತು.
Updated on: May 01, 2023 | 7:53 PM

ನಟಿ ವನಿತಾ ವಿಜಯ್ಕುಮಾರ್ ಅವರು ವಿವಾದಗಳಿಂದಲೇ ಸಾಕಷ್ಟು ಸುದ್ದಿ ಆಗಿದ್ದುಂಟು. ಪೀಟರ್ ಪೌಲ್ ಜೊತೆ ಅವರು 2020ರಲ್ಲಿ ಮದುವೆ ಆಗಿದ್ದರು. ಆದರೆ ಕೆಲವೇ ತಿಂಗಳಲ್ಲಿ ಆ ವಿವಾಹ ಮುರಿದುಬಿದ್ದಿತ್ತು.

ಪೀಟರ್ ಪೌಲ್ ಅವರು ಮದ್ಯ ವ್ಯಸನಿ ಆಗಿದ್ದರು. ಅತಿಯಾಗಿ ಸಿಗರೇಟ್ ಸೇದುತ್ತಿದ್ದರು. ಅದರಿಂದ ಅವರ ಆರೋಗ್ಯ ಕೈಕೊಟ್ಟಿತ್ತು. ಈಗ ಅವರ ನಿಧನದ ಸುದ್ದಿ ಕೇಳಿಬಂದಿದೆ. ಅವರ ಅಗಲಿಕೆಗೆ ವನಿತಾ ವಿಜಯ್ಕುಮಾರ್ ಕಂಬನಿ ಮಿಡಿದಿದ್ದಾರೆ.

ಮೊದಲ ಹೆಂಡತಿಗೆ ಪೀಟರ್ ಪೌಲ್ ವಿಚ್ಛೇದನ ನೀಡಿಲ್ಲ ಎಂಬ ವಿಷಯ ಗೊತ್ತಾದ ಬಳಿಕ ವನಿತಾ ವಿಜಯ್ಕುಮಾರ್ ಅವರು ಪೀಟರ್ ಜೊತೆಗಿನ ವಿವಾಹವನ್ನು ಮುರಿದುಕೊಂಡಿದ್ದರು. ತಮ್ಮ ಜೊತೆ ಕೆಲವೇ ದಿನ ಸಂಸಾರ ನಡೆಸಿದ ವ್ಯಕ್ತಿಯ ಸಾವಿಗೆ ಅವರೀಗ ಸಂತಾಪ ಸೂಚಿಸಿದ್ದಾರೆ.

ಪೀಟರ್ ಪೌಲ್ ಅವರು ವಿಎಫ್ಎಕ್ಸ್ ಸಂಕಲನಕಾರನಾಗಿದ್ದರು. ತಮಿಳು ಚಿತ್ರರಂಗದಲ್ಲಿ ಅವರು ಸಕ್ರಿಯರಾಗಿದ್ದರು. ಆದರೆ ಅವರ ವೈಯಕ್ತಿಕ ಜೀವನದಲ್ಲಿ ಬಿರುಕು ಉಂಟಾಗಿತ್ತು. ಅದರಿಂದ ಅವರು ಸಾಕಷ್ಟು ವಿವಾದ ಮಾಡಿಕೊಂಡಿದ್ದರು.

ಮಾಜಿ ಗಂಡನ ನಿಧನಕ್ಕೆ ಕಂಬನಿ ಮಿಡಿದಿರುವ ವನಿತಾ ವಿಜಯ್ ಕುಮಾರ್ ಅವರಿಗೆ ನೆಟ್ಟಿಗರು ಸಾಂತ್ವನ ಹೇಳಿದ್ದಾರೆ. ನಟಿಯ ಗುಣವನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ಪೀಟರ್ ಪೌಲ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನೆಟ್ಟಿಗರು ಪ್ರಾರ್ಥಿಸಿದ್ದಾರೆ.



















