- Kannada News Photo gallery Varthur Santhosh and Tukali Santhosh entered Bigg Boss Kannada 11 as guests Entertainment News in Kannada
ಮತ್ತೆ ಬಿಗ್ ಬಾಸ್ ಮನೆಗೆ ಬಂದ ವರ್ತೂರು ಸಂತೋಷ್; ಸಾಥ್ ನೀಡಿದ ತುಕಾಲಿ
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋಗೆ ಕೆಲವು ಮಾಜಿ ಸ್ಪರ್ಧಿಗಳು ಕೂಡ ಬಂದಿದ್ದಾರೆ. ಡಿಸೆಂಬರ್ 10ರ ಸಂಚಿಕೆಯಲ್ಲಿ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಅವರು ದೊಡ್ಮನೆಗೆ ಕಾಲಿಟ್ಟಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ ಮೂಲಕ ಭಾರಿ ಮನರಂಜನೆ ನೀಡಿದ ಅವರಿಬ್ಬರು ಈಗ ಅತಿಥಿಗಳಾಗಿ ಬಂದು ಹೋಗಿದ್ದಾರೆ.
Updated on: Dec 10, 2024 | 10:27 PM

ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸ್ಪರ್ಧಿಸಿದ್ದರು. ಈಗ 11ನೇ ಸೀಸನ್ಗೆ ಅವರು ಬಂದಿದ್ದಾರೆ. ಆದರೆ ಅವರು ಈ ಬಾರಿ ಸ್ಪರ್ಧಿಸುತ್ತಿಲ್ಲ. ಬದಲಿಗೆ, ಗೆಸ್ಟ್ ಆಗಿ ಬಂದಿದ್ದಾರೆ. ಖುಷಿಯಾಗಿ ಕಾಲ ಕಳೆದಿದ್ದಾರೆ.

10ನೇ ಸೀಸನ್ನಲ್ಲಿ ತುಕಾಲಿ ಸಂತೋಷ್ ಅವರು ವರ್ತೂರು ಸಂತೋಷ್ ಜೊತೆ ಹೆಚ್ಚು ಕಾಲ ಕಳೆದಿದ್ದರು. ಅವರಿಬ್ಬರು ಜೋಡಿಯಾಗಿಯೇ ಇರುತ್ತಿದ್ದರು. ಈಗ ಗೆಸ್ಟ್ ಆಗಿ ಕೂಡ ಜೋಡಿಯಾಗಿ ಬಂದಿದ್ದಾರೆ. ಅವರ ಉಪಸ್ಥಿತಿಯಿಂದ 11ನೇ ಸೀಸನ್ ಸ್ಪರ್ಧಿಗಳಿಗೆ ಜೋಶ್ ಬಂದಿದೆ.

ಬಿಗ್ ಬಾಸ್ ಎಂದರೆ ಏನು ಎಂದು ಎಲ್ಲ ಸ್ಪರ್ಧಿಗಳಿಗೆ ವರ್ತೂರು ಸಂತೋಷ್ ವಿವರಿಸಿದ್ದಾರೆ. ಟಾಸ್ಕ್ ಯಾವ ರೀತಿ ಆಡಬೇಕು ಎಂದು ಕೂಡ ಅವರು ತಿಳಿಸಿ ಹೇಳಿದ್ದಾರೆ. ಬಳಿಕ ದೊಡ್ಮನೆಯ ಸದಸ್ಯರಿಂದ ನಾಮಿನೇಷನ್ ಪ್ರಕ್ರಿಯೆಯನ್ನು ವರ್ತೂರು ಸಂತೋಷ್ ಮಾಡಿಸಿದ್ದಾರೆ.

ಸ್ವಲ್ಪ ಸಮಯ ಮಾತ್ರ ಬಿಗ್ ಬಾಸ್ ಮನೆಯಲ್ಲಿ ಇರುವ ಅವಕಾಶವನ್ನು ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಅವರಿಗೆ ನೀಡಲಾಗಿತ್ತು. ಸಮಯ ಮುಗಿದ ಬಳಿಕ ದೊಡ್ಮನೆಯಿಂದ ಹೊರಗೆ ತೆರಳುವಂತೆ ಅವರಿಗೆ ಬಿಗ್ ಬಾಸ್ ಕಡೆಯಿಂದ ಆದೇಶ ಬಂತು.

‘ಪೇಮೆಂಟ್ ಕೊಡದೇ ಇದ್ದರೂ ಪರವಾಗಿಲ್ಲ, ಇಲ್ಲೇ ಇರುತ್ತೇವೆ. ಅವಕಾಶ ಕೊಡಿ’ ಎಂದು ತುಕಾಲಿ ಸಂತೋಷ್ ಮನವಿ ಮಾಡಿಕೊಂಡರು. ಅದಕ್ಕೆ ಬಿಗ್ ಬಾಸ್ ಒಪ್ಪಲಿಲ್ಲ. ಈ ಮನೆಯನ್ನು ತುಂಬ ಮಿಸ್ ಮಾಡಿಕೊಳ್ಳುವುದಾಗಿ ವರ್ತೂರು ಸಂತೋಷ್ ಅವರು ತಿಳಿಸಿದರು.




