‘ಛಾವ’ ಸಿನಿಮಾಗೆ ಒಂದು ವರ್ಷ: ನೆನಪಿನ ಪುಟ ತೆರೆದ ರಶ್ಮಿಕಾ ಮಂದಣ್ಣ

Updated on: Feb 15, 2026 | 9:42 AM

ಬಾಕ್ಸ್ ಆಫೀಸ್​​ನಲ್ಲಿ ಧೂಳೆಬ್ಬಿಸಿದ ‘ಛಾವ’ ಸಿನಿಮಾ ತೆರೆಕಂಡು ಒಂದು ವರ್ಷ ಕಳೆದಿದೆ. ಈ ಚಿತ್ರದ ನೆನಪಿನಲ್ಲಿ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಕಲಾವಿದರ ಪಾಲಿಗೆ ನಿಜಕ್ಕೂ ಇದು ವಿಶೇಷ ಸಿನಿಮಾ. ಅವರ ಅಭಿಮಾನಿಗಳಿಗೂ ಈ ಚಿತ್ರ ಅಚ್ಚುಮೆಚ್ಚು.

1 / 5
ನಟಿ ರಶ್ಮಿಕಾ ಮಂದಣ್ಣ ಅವರ ಖಾತೆಯಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳಿವೆ. ಅವುಗಳಲ್ಲಿ ‘ಛಾವ’ ಸಿನಿಮಾ ಕೂಡ ವಿಶೇಷವಾಗಿದೆ. 2025ರ ಫೆಬ್ರವರಿ 14ಕ್ಕೆ ಈ ಸಿನಿಮಾ ರಿಲೀಸ್ ಆಗಿತ್ತು.

ನಟಿ ರಶ್ಮಿಕಾ ಮಂದಣ್ಣ ಅವರ ಖಾತೆಯಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳಿವೆ. ಅವುಗಳಲ್ಲಿ ‘ಛಾವ’ ಸಿನಿಮಾ ಕೂಡ ವಿಶೇಷವಾಗಿದೆ. 2025ರ ಫೆಬ್ರವರಿ 14ಕ್ಕೆ ಈ ಸಿನಿಮಾ ರಿಲೀಸ್ ಆಗಿತ್ತು.

2 / 5

ಬಾಕ್ಸ್ ಆಫೀಸ್​​ನಲ್ಲಿ ‘ಛಾವ’ ಸಿನಿಮಾ 600 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಐತಿಹಾಸಿಕ ಕಥಾಹಂದರ ಹೊಂದಿದ್ದ ಈ ಸಿನಿಮಾವನ್ನು ಪ್ರೇಕ್ಷಕರು ಸಖತ್ ಇಷ್ಟಪಟ್ಟಿದ್ದರು.

3 / 5

‘ಛಾವ’ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅವರು ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರ ಮಾಡಿದ್ದರೆ, ರಶ್ಮಿಕಾ ಮಂದಣ್ಣ ಅವರು ಯೇಸುಬಾಯಿ ಪಾತ್ರವನ್ನು ಮಾಡಿ ಅಭಿಮಾನಿಗಳ ಮನ ಗೆದ್ದರು.

4 / 5

ಆ ದಿನಗಳ ಫೋಟೋವನ್ನು ರಶ್ಮಿಕಾ ಮಂದಣ್ಣ ಅವರು ಹಂಚಿಕೊಂಡಿದ್ದಾರೆ. ‘ಎಂಥ ವಿಶೇಷ ಸಿನಿಮಾ. ಧನ್ಯವಾದಗಳು’ ಎಂದು ರಶ್ಮಿಕಾ ಮಂದಣ್ಣ ಅವರು ಫೋಟೋಗಳಿಗೆ ಕ್ಯಾಪ್ಷನ್ ನೀಡಿದ್ದಾರೆ.

5 / 5

ರಶ್ಮಿಕಾ ಮಂದಣ್ಣ ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಾತ್ರವಲ್ಲದೇ ಬಾಲಿವುಡ್​​ನಲ್ಲಿ ಕೂಡ ಅವರು ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

Loading...
Unable to load recommendations.
Follow Us