ಕಣ್ಣೀರಲ್ಲೇ ಶಾಸ್ತ್ರ ಮಾಡಿದ ವಿಜಯ್ ರಾಘವೇಂದ್ರ; ರಾಘಣ್ಣನ ಸಮಾಧಾನ
ವಿಜಯ್ ರಾಘವೇಂದ್ರ ಅವರಿಗೆ ಪತ್ನಿಯ ಬಗ್ಗೆ ಅಪಾರ ಪ್ರೀತಿ. ಈಗ ಆ ಪ್ರೀತಿಯನ್ನು ಕಳೆದುಕೊಂಡು ಅವರು ದುಃಖಕ್ಕೆ ಒಳಗಾಗಿದ್ದಾರೆ. ಸ್ಪಂದನಾ ಪಾರ್ಥಿವ ಶರೀರವನ್ನು ಮಂಗಳವಾರ ರಾತ್ರಿ (ಆಗಸ್ಟ್ 8) ಬ್ಯಾಂಕ್ನಿಂದ ತರಲಾಗಿದೆ. ಇಂದು ಸ್ಪಂದನಾ ಅಂತ್ಯ ಸಂಸ್ಕಾರ ನಡೆಯಲಿದೆ.
Updated on:Aug 09, 2023 | 9:00 AM

ವಿಜಯ್ ರಾಘವೇಂದ್ರ ಅವರು ಪತ್ನಿ ಸ್ಪಂದನಾ ಅವರ ಪಾರ್ಥಿವ ಶರೀರ ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಅವರ ಸ್ಥಿತಿ ನೋಡಿ ಅನೇಕರು ಮರುಗಿದ್ದಾರೆ. ವಿಜಯ್ ಅವರನ್ನು ಸಂತೈಸುವ ಕೆಲಸ ಆಗುತ್ತಿದೆ.

ವಿಜಯ್ ರಾಘವೇಂದ್ರ ಅವರಿಗೆ ಪತ್ನಿಯ ಬಗ್ಗೆ ಅಪಾರ ಪ್ರೀತಿ. ಈಗ ಆ ಪ್ರೀತಿಯನ್ನು ಕಳೆದುಕೊಂಡು ಅವರು ದುಃಖಕ್ಕೆ ಒಳಗಾಗಿದ್ದಾರೆ.

ಸ್ಪಂದನಾ ಪಾರ್ಥಿವ ಶರೀರವನ್ನು ಮಂಗಳವಾರ ರಾತ್ರಿ (ಆಗಸ್ಟ್ 8) ಬ್ಯಾಂಕಾಕ್ನಿಂದ ತರಲಾಗಿದೆ. ಇಂದು ಸ್ಪಂದನಾ ಅಂತ್ಯ ಸಂಸ್ಕಾರ ನಡೆಯಲಿದೆ.

ರಾಘವೇಂದ್ರ ರಾಜ್ಕುಮಾರ್ ಅವರು ಆಗಮಿಸಿ ಸ್ಪಂದನಾ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ಅವರು ಭಾವುಕರಾದರು.

ವಿಜಯ್ ರಾಘವೇಂದ್ರ ಅವರನ್ನು ರಾಘಣ್ಣ ತಬ್ಬಿ ಸಮಾಧಾನ ಮಾಡಿದರು. ಆದರೂ ವಿಜಯ್ಗೆ ಸಮಾಧಾನ ಆಗಲೇ ಇಲ್ಲ.

ವಿಜಯ್ ಅವರನ್ನು ಸಂತೈಸುವ ಕೆಲಸ ಆಗುತ್ತಿದೆ. ವಿಜಯ್ಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಎಲ್ಲರೂ ಕೋರುತ್ತಿದ್ದಾರೆ.

ಶ್ರೀಮುರಳಿ ಅವರು ವಿಜಯ್ಗೆ ಬೆಂಬಲವಾಗಿ ನಿಂತಿದ್ದಾರೆ. ಸಹೋದರನ ಸಮಾಧಾನ ಮಾಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ.

ಸ್ಪಂದನಾಗೆ ಬಳೆ ತೊಡಿಸುವ ಶಾಸ್ತ್ರ ಮಾಡಿದ ವಿಜಯ್.
Published On - 7:58 am, Wed, 9 August 23

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More



