- Kannada News Photo gallery Weight Loss Tips These Drinks help you to prevent Weight Gain after Heavy Meals
ಹೊಟ್ಟೆ ಬಿರಿಯುವಷ್ಟು ತಿಂದ ಬಳಿಕ ತೂಕ ಹೆಚ್ಚಾಗುವುದೆಂಬ ಭಯವೇ? ಹೀಗೆ ಮಾಡಿ
ಹೊಟ್ಟೆ ತುಂಬ ಭರ್ಜರಿ ಊಟ ಮಾಡಿದ ನಂತರವೂ ತೂಕ ಹೆಚ್ಚಾಗದಂತೆ ನೋಡಿಕೊಳ್ಳಲು ಊಟವಾದ ನಂತರ ಈ ಪಾನೀಯಗಳನ್ನು ಕುಡಿಯಿರಿ. ಈ ಪಾನೀಯಗಳು ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ, ಕೊಬ್ಬು ಶೇಖರಣೆಯಾಗದಂತೆ ನೋಡಿಕೊಳ್ಳುತ್ತವೆ.
Updated on:Jan 22, 2024 | 11:44 AM

ಹೊಟ್ಟೆ ತುಂಬ ಭರ್ಜರಿ ಊಟ ಮಾಡಿದ ನಂತರವೂ ತೂಕ ಹೆಚ್ಚಾಗದಂತೆ ನೋಡಿಕೊಳ್ಳಲು ಊಟವಾದ ನಂತರ ಈ ಪಾನೀಯಗಳನ್ನು ಕುಡಿಯಿರಿ.

ಮಜ್ಜಿಗೆಯಲ್ಲಿರುವ ಪ್ರೋಬಯಾಟಿಕ್‌ಗಳು ಕರುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ. ಕಡಿಮೆ ಕೊಬ್ಬಿನ ಈ ಮಜ್ಜಿಗೆ ಸೇವಿಸುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.

ಬೆಚ್ಚಗಿನ ದಾಲ್ಚಿನ್ನಿ ನೀರು ಸೇವಿಸಿ. ದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಆಹ್ಲಾದಕರ ಪರಿಮಳವನ್ನು ನೀಡುತ್ತದೆ.

ಶುಂಠಿ ಟೀ ಜೀರ್ಣಕಾರಿ ಗುಣಗಳನ್ನು ಹೊಂದಿದೆ. ಇದು ವಾಕರಿಕೆ ಮತ್ತು ಅಜೀರ್ಣದ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸಕ್ಕರೆ ಹಾಕದೆ ಊಟವಾದ ನಂತರ ಶುಂಠಿ ಚಹಾ ಸೇವಿಸಿ.

ಗ್ರೀನ್ ಟೀ ಉತ್ಕರ್ಷಣ ನಿರೋಧಕಗಳು ಮತ್ತು ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಆದರೆ, ಗ್ರೀನ್ ಟೀಗೆ ಸಕ್ಕರೆ ಹಾಕಿಕೊಂಡು ಕುಡಿಯಬೇಡಿ.

ಹರ್ಬಲ್ ಟೀ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಗಿಡಮೂಲಿಕೆಗಳಾದ ಕ್ಯಾಮೊಮೈಲ್, ಸೋಂಪು ಅಥವಾ ದಂಡೇಲಿಯನ್ ಚಹಾಗಳು ಜೀರ್ಣಾಂಗ ವ್ಯವಸ್ಥೆಗೆ ಹಿತಕಾರಿಯಾಗಿದೆ.

ಆಪಲ್ ಸೈಡರ್ ವಿನೆಗರ್ ಜೀರ್ಣಕ್ರಿಯೆಗೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ, ಇದರ ಮಿತಿಮೀರಿದ ಸೇವನೆಯು ದೇಹದ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದು. ಹೀಗಾಗಿ, ಆ್ಯಪಲ್ ಸೈಡರ್ ವಿನೆಗರ್ ಅನ್ನು ಮಿತವಾಗಿ ಸೇವಿಸಿ.

ಬೆಚ್ಚಗಿನ ನಿಂಬೆ ನೀರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಸಕ್ಕರೆ ಹಾಕಿದ ಪಾನೀಯಗಳ ಬದಲು ಬೆಚ್ಚಗಿನ ನಿಂಬೆ ಜ್ಯೂಸ್ ಕುಡಿಯಿರಿ.

ಪುದೀನಾ ಚಹಾವು ಜೀರ್ಣಾಂಗ ವ್ಯವಸ್ಥೆಯನ್ನು ಶಮನಗೊಳಿಸಲು ಮತ್ತು ಹೊಟ್ಟೆಯಲ್ಲಿ ಗ್ಯಾಸ್ ತುಂಬುವಿಕೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
Published On - 5:48 pm, Fri, 12 January 24




