ಸ್ಮಾರ್ಟ್‌ಫೋನ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ಪ್ರಮುಖವಾದ ಗ್ಯಾಜೆಟ್ ಆಗಿದೆ. ಅದು ಇಲ್ಲದೆ ನಾವು ಒಂದು ದಿನ ಕಳೆಯುವುದು ಕಷ್ಟ. ಫೋನ್‌ಗೆ ಏನಾದರೂ ಸಂಭವಿಸಿದರೆ ಆಗುವ ಟೆನ್ಶನ್ ಅಷ್ಟಿಟ್ಟಲ್ಲ. ಫೋನ್ ಚಾರ್ಜ್ ಆಗದಿದ್ದರೆ, ಇಡೀ ಪ್ರಪಂಚವೇ ನಿಂತುಹೋದಂತೆ ಆಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ತಿಳಿಯುವುದಿಲ್ಲ.
ಕೆಲವೊಮ್ಮೆ ಫೋನ್ ಇದ್ದಕ್ಕಿದ್ದಂತೆ ಚಾರ್ಜ್ ಆಗುವುದನ್ನು ನಿಲ್ಲಿಸುತ್ತದೆ. ಅನ್-ಪ್ಲಗ್ ಮಾಡಿ ಪುನಃ ಪ್ಲಗ್ ಮಾಡಿದ್ರು ಚಾರ್ಜ್ ಆಗುವುದಿಲ್ಲ. ನೀವು ತಕ್ಷಣ ಸೇವಾ ಕೇಂದ್ರಕ್ಕೆ ಹೋಗಲು ಮುಂದಾಗುತ್ತೀರಿ. ಆದರೆ, ಅದಕ್ಕೂ ಮೊದಲು ಕೆಲವು ತಂತ್ರಗಳನ್ನು ಅನುಸರಿಸಬೇಕು. ಆಗ ಚಾರ್ಜ್ ಆಗುವ ಸಾಧ್ಯತೆ ಇರುತ್ತದೆ.
ನಿಮ್ಮ ಸ್ಮಾರ್ಟ್‌ಫೋನ್‌ನ ಕವರ್ ತೆಗೆದುಹಾಕಿ ಮತ್ತು ಫೋನ್ ಅನ್ನು ಚಾರ್ಜ್ ಮಾಡಿ. ನಿಮ್ಮ ಫೋನ್ ಕವರ್ ಚಾರ್ಜಿಂಗ್ ಪೋರ್ಟ್ ಸುತ್ತಲೂ ಅಡೆತಡೆಗಳನ್ನು ಉಂಟುಮಾಡಬಹುದು. ಇದರಿಂದಾಗಿ ಚಾರ್ಜಿಂಗ್ ಕೇಬಲ್‌ಗಳು ಸರಿಯಾಗಿ ಸಂಪರ್ಕಗೊಳ್ಳುವುದಿಲ್ಲ. ಈ ಸಮಸ್ಯೆ ಹೆಚ್ಚಾಗಿ ಎದುರಾಗುತ್ತದೆ.
ಕೆಲವೊಮ್ಮೆ ನಮ್ಮ ಫೋನ್ ನೀರಿನಿಂದ ಒದ್ದೆಯಾದರೆ ಅದು ಚಾರ್ಜ್ ಆಗುವುದನ್ನು ನಿಲ್ಲಿಸುತ್ತದೆ. ಫೋನ್‌ನ ಚಾರ್ಜಿಂಗ್ ಪೋರ್ಟ್‌ನಲ್ಲಿ ತೇವಾಂಶವಿದ್ದರೆ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಚಾರ್ಜ್ ಆಗುವುದಿಲ್ಲ. ಮೊದಲು ಪರಿಶೀಲಿಸಿ ಮತ್ತು ತೇವಾಂಶವನ್ನು ತೆಗೆದುಹಾಕಿದ ನಂತರ ಚಾರ್ಜ್ ಮಾಡಲು ಪ್ರಯತ್ನಿಸಿ.
ನಿಮ್ಮ ಸ್ಮಾರ್ಟ್ ಫೋನ್ ಕೇಬಲ್ ಹಾಳಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಬೇರೆ ಚಾರ್ಜರ್ ಅಥವಾ ಕೇಬಲ್ ಮೂಲಕ ಒಮ್ಮೆ ಚಾರ್ಜ್ ಆಗುತ್ತಾ ಎಂದು ಪ್ರಯತ್ನಿಸಿ. ನಿಮ್ಮ ಚಾರ್ಜರ್ ಅಥವಾ ಕೇಬಲ್ ಅನ್ನು ನೀವು ಬದಲಾಯಿಸಬೇಕಾಗಬಹುದು. ನಿಮ್ಮ ಪ್ಲಗ್ ಅಥವಾ ಸಾಕೆಟ್‌ನಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ನೀವು ಪರಿಶೀಲಿಸಬೇಕು. ಪ್ಲಗ್ ಅಥವಾ ಸಾಕೆಟ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ನಿಮ್ಮ ಫೋನ್ ಚಾರ್ಜ್ ಆಗುವುದಿಲ್ಲ.
ಕೆಲವೊಮ್ಮೆ ನಮ್ಮ ಫೋನ್ ನೀರಿನಿಂದ ಒದ್ದೆಯಾದರೆ ಅದು ಚಾರ್ಜ್ ಆಗುವುದನ್ನು ನಿಲ್ಲಿಸುತ್ತದೆ. ಫೋನ್‌ನ ಚಾರ್ಜಿಂಗ್ ಪೋರ್ಟ್‌ನಲ್ಲಿ ತೇವಾಂಶವಿದ್ದರೆ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಚಾರ್ಜ್ ಆಗುವುದಿಲ್ಲ. ಮೊದಲು ಪರಿಶೀಲಿಸಿ ಮತ್ತು ತೇವಾಂಶವನ್ನು ತೆಗೆದುಹಾಕಿದ ನಂತರ ಚಾರ್ಜ್ ಮಾಡಲು ಪ್ರಯತ್ನಿಸಿ.
ಕೆಲವೊಮ್ಮೆ ಚಾರ್ಜಿಂಗ್ ಪೋರ್ಟ್ ಧೂಳು ಅಥವಾ ಕೊಳಕಿನಿಂದ ಮುಚ್ಚಿಹೋಗುತ್ತದೆ. ಇದು ಸಂಭವಿಸಿದಲ್ಲಿ, ಪ್ಲಾಸ್ಟಿಕ್ ಟೂತ್‌ಪಿಕ್ ಅಥವಾ ಸಂಕುಚಿತ ಗಾಳಿಯಂತಹ ಮೃದುವಾದ ವಸ್ತುವಿನಿಂದ ಅದನ್ನು ಎಚ್ಚರಿಕೆಯಿಂದ ಸ್ವಚ್ಛಗೊಳಿಸಿ. ಇದಲ್ಲದೇ ನೀವು ಫೋನ್ ಅನ್ನು ರಿ-ಸ್ಟಾರ್ಟ್ ಮಾಡುವ ಮೂಲಕ ಪರಿಶೀಲಿಸಬಹುದು. ಅಂತಿಮವಾಗಿ, ಇಷ್ಟೆಲ್ಲ ಮಾಡಿದ ನಂತರವೂ ಫೋನ್ ಚಾರ್ಜ್ ಆಗದಿದ್ದರೆ, ನಿಮ್ಮ ಫೋನ್ ಅನ್ನು ಬ್ರ್ಯಾಂಡ್‌ನ ಸೇವಾ ಕೇಂದ್ರಕ್ಕೆ ಕೊಂಡೊಯ್ಯಿರಿ.
Published On - 11:59 am, Thu, 24 October 24