- Kannada News Photo gallery Who is hitesha chandranee who alleged and complained on zomato delivery boy
ಅವರೇ, ಇವರಾ? ಜೊಮ್ಯಾಟೋ ಪ್ರಕರಣದಲ್ಲಿ ಸದ್ದು ಮಾಡಿದ ಯುವತಿ ನಿಜ ಜೀವನದಲ್ಲಿ ಹೀಗಿದ್ದಾರಾ?
ಜೊಮ್ಯಾಟೋ ಡೆಲಿವರಿ ಬಾಯ್ನಿಂದ ಹಲ್ಲೆಗೊಳಗಾಗಿರುವೆ ಎಂದು ಹೇಳುತ್ತಿರುವ ಹಿತೇಶಾ ಚಂದ್ರಾಣಿ ಯಾರು? ಆಕೆ ಎಲ್ಲಿಯವರು? ಅವರ ಉದ್ಯೋಗ ಏನು? ಇಲ್ಲಿದೆ ವಿವರ
Updated on:Mar 16, 2021 | 12:43 PM

Who is Hitesha Chandranee who alleged and complained on Zomato Delivery Boy

Who is Hitesha Chandranee who alleged and complained on Zomato Delivery Boy

ಮಾಡಲಿಂಗ್ ಹಾಗೂ ಫ್ಯಾಶನ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಹಿತೇಶಾ ಅದಕ್ಕೆ ಸಂಬಂಧಿಸಿದ ಅನೇಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ

ಹಿತೇಶಾ ಚಂದ್ರಾಣಿ ಅವರ ಅಧಿಕೃತ ಇನ್ಸ್ಟಾಗ್ರಾಂ ಖಾತೆಯನ್ನು ಪ್ರಸ್ತುತ ಒಂದು ಲಕ್ಷಕ್ಕೂ ಅಧಿಕ ಮಂದಿ ಹಿಂಬಾಲಿಸುತ್ತಿದ್ದಾರೆ

ಜೊಮ್ಯಾಟೋ ಡೆಲಿವರಿ ಬಾಯ್ ತನ್ನ ಮುಖಕ್ಕೆ ಗುದ್ದಿರುವುದಾಗಿ ಆರೋಪಿಸಿದ್ದ ಹಿತೇಶಾ ಚಂದ್ರಾಣಿ, ವಿಡಿಯೋ ಮೂಲಕ ಅದಕ್ಕೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಂಡಿದ್ದರು

ಜೊಮ್ಯಾಟೋ ಮೂಲಕ ಊಟ ಆರ್ಡರ್ ಮಾಡಿದ್ದಾಗ ಅದನ್ನು ಡೆಲಿವರಿ ಬಾಯ್ ತಡವಾಗಿ ತಂದುಕೊಟ್ಟರು ಹಾಗೂ ಅದನ್ನು ಪ್ರಶ್ನಿಸದ್ದಕ್ಕೆ ನನ್ನ ಮೇಲೆಯೇ ಹಲ್ಲೆ ಮಾಡಿದರು ಎನ್ನುವುದು ಹಿತೇಶಾ ಚಂದ್ರಾಣಿಯ ಆರೋಪ

ಹಿತೇಶಾ ಚಂದ್ರಾಣಿ ಆರೋಪದ ಪರ ಮತ್ತು ವಿರುದ್ಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಲೇ ಇದೆ

ಅದೇನೇ ಇದ್ದರೂ ಈ ಪ್ರಕರಣದಿಂದ ಹಠಾತ್ ಬೆಳಕಿಗೆ ಬಂದ ಹಿತೇಶಾ ಚಂದ್ರಾಣಿಗೆ ಇನ್ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿದೆಯಂತೆ
Published On - 12:21 pm, Tue, 16 March 21














