- Kannada News Photo gallery Yadgiri 26 Year Old Daughter Of Rich Man Takes Deeksha To Become A Jain Monk
ಐಷಾರಾಮಿ ಜೀವನ ತ್ಯಜಿಸಿದ ಕೋಟ್ಯಾಧೀಶನ ಪುತ್ರಿ: 26ನೇ ವಯಸ್ಸಿಗೆ ಆಡಂಬರದ ಜೀವನಕ್ಕೆ ಯುವತಿ ಗುಡ್ಬೈ
ಈ ಕಾಲದಲ್ಲಿ ತಂದೆ ದೊಡ್ಡ ಶ್ರೀಮಂತ ಇದ್ದರೆ ಸಾಕು ಮಕ್ಕಳು ಸಿರಿ ಸಂಪತ್ತಿನಿಂದ ಮೆರೆಯುವವರೇ ಹೆಚ್ಚು. ಆದ್ರೆ, ಯಾದಗಿರಿ ಯುವತಿಯ ಆಸಕ್ತಿಯೇ ವಿಭಿನ್ನ. ತಂದೆ ಕೋಟ್ಯಾಧೀಶ. ಯಾವುದಕ್ಕೂ ಕಮ್ಮಿ ಇಲ್ಲ. ಆದರೂ ಸಹ 26 ವರ್ಷದ ಯುವತಿ ತಂದೆಯ ಶ್ರೀಮಂತಿಕೆ ಎಲ್ಲಾ ಬಿಟ್ಟು, ಲೌಕಿಕ ಸುಖಭೋಗಗಳಿಂದ ದೂರವಾಗಲು ನಿರ್ಧರಿಸಿ, ಐಷಾರಾಮಿ ಜೀವನ ತ್ಯಜಿಸಿ ಇದೀಗ ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ. ಸನ್ಯಾಸತ್ವ ಸ್ವೀಕರಿಸಿದ ಬಳಿಕ ಕೋಟ್ಯಾಧೀಶನ ಪುತ್ರಿಯ ಜೀವನ ಹೇಗಿರಲಿದೆ ಎನ್ನುವುದನ್ನು ತಿಳಿದುಕೊಳ್ಳಿ.
Updated on: Apr 06, 2025 | 3:58 PM

ಹೆಣ್ಣು ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಮದುವೆಯಾಗಿ ಗಂಡನ ಮನೆ ಸೇರಿ ಸುಖ ಸಂಸಾರ ನಡೆಸುವ ಕನಸು ಕಾಣುತ್ತಾರೆ. ಆದ್ರೆ, ಯಾದಗಿರಿಯಲ್ಲಿ ಕೋಟ್ಯಾಧೀಶನ 26 ವರ್ಷದ ಪುತ್ರಿ ಐಷಾರಾಮಿ ಜೀವನ ತ್ಯಜಿಸಿ ಸನ್ಯಾಸತ್ವ ಸೀಕಾರಕ್ಕೆ ಮುಂದಾಗಿದ್ದಾರೆ.

ಯಾದಗಿರಿ ನಗರದ ಜೈನ್ ಬಡಾವಣೆಯ ನರೇಂದ್ರ ಗಾಂಧಿ ಹಾಗೂ ಸಂಗೀತಾ ಗಾಂಧಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಪುತ್ರ ಇದ್ದಾನೆ. ಅದರಲ್ಲಿ ಈಗ26 ವರ್ಷದ ಪುತ್ರಿ ನಿಖಿತಾ ಐಷಾರಾಮಿ ಜೀವನ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ.

ನರೇಂದ್ರ ಗಾಂಧಿ ಕೋಟ್ಯಾಧಿಪತಿ. ದೊಡ್ಡ ಶ್ರೀಮಂತ. ಆದ್ರೆ, ಇದೀಗ ಕೋಟ್ಯಾಧೀಶನ ಪುತ್ರಿ ನಿಖಿತಾ ಸಿರಿ ಸಂಪತ್ತು ಯಾವುದು ಬೇಡವೆಂದು ದಿಕ್ಕರಿಸಿದ್ದಾರೆ. ಕಳೆದ ಏಳು ವರ್ಷದಿಂದ ಸನ್ಯಾಸಿ ಆಗಬೇಕೆಂದು ನಿಖಿತಾ ಬಯಸಿದ್ದಳು. ಅದರಂತೆ ಇದೀಗ ನಿಖಿತಾಳ ಆಸೆ ಈಡೇರಿದೆ.

ನಿಖಿತಾ ಸನ್ಯಾಸತ್ವ ಸ್ವೀಕರಿಸಲು ತೀರ್ಮಾನಿಸಿದ್ದರಿಂದ ಕೊನೆಯದಾಗಿ ಸಂಬಂಧಿಕರು ಎಲ್ಲರೂ ಸೇರಿ ಯಾದಗಿರಿಯಲ್ಲಿಂದು ನಿಖಿತಾಳನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಿದರು. ನಾನಾ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಗಿದ್ದು, ಇದರಲ್ಲಿ ಇಡೀ ಜೈನ ಸಮುದಾಯವೇ ಪಾಲ್ಗೊಂಡಿದ್ದರು.

ತಾನು ಇನ್ಮುಂದೆ ಯಾವುದೇ ವಸ್ತುಗಳನ್ನ ಬಳಸಲ್ಲ ಎನ್ನುವ ಕಾರಣಕ್ಕೆ ನಿಖಿತಾ ಮೆರವಣಿಗೆ ವೇಳೆ ಹೊಸ ಬಟ್ಟೆ ಸೇರಿದಂತೆ ನಾನಾ ವಸ್ತುಗಳನ್ನ ಜನರಿಗೆ ದಾನ ಮಾಡಿರು.

ಸನ್ಯಾಸತ್ವ ಸ್ವೀಕರಿಸಿದ ಬಳಿಕ ಕಠಿಣಾತೀ ಕಠಿಣ ದಾರಿಯನ್ನ ಹಿಡಿಯಬೇಕು. ಪಾದರಕ್ಷೆ ಹಾಕುವ ಹಾಗಿಲ್ಲ,ಸಂಚಾರ ಮಾಡಲು ವಾಹನ ಬಳಸುವ ಹಾಗಿಲ್ಲ. ಒಂದೇ ಜಾಗದಲ್ಲಿ ಎರಡು ದಿನಕ್ಕಿಂತ ಅಧಿಕ ದಿನ ಉಳಿದುಕೊಳ್ಳುವಂತಿಲ್ಲ.

ಬಿಳಿ ಬಣ್ಣದ ಸಾದ ಉಡುಪು ತೊಟ್ಟು ನಿತ್ಯ ಕಾಲ್ನಡಿಗೆಯಲ್ಲೇ ಸಂಚಾರ ಮಾಡುತ್ತಲೇ ಜೀವನ ಸಾಗಿಸಬೇಕು. ಸನ್ಯಾಸತ್ವ ಸ್ವೀಕರಿಸಿದ ಬಳಿಕ ತಲೆಯ ಕುದಲಿಗೆ ಯಾವುದೇ ಬ್ಲೇಡ್ ಬಳಸದೆ ಕೈಯಿಂದ ಕಿತ್ತಿ ಬೋಳು ಮಾಡಲಾಗುತ್ತೆ.

ಇಂತಹ ಕಠಿಣ ಜೀವನವನ್ನ ಯುವತಿ ನಿಖಿತಾ ಆಯ್ದುಕೊಂಡಿದ್ದಾರೆ. ಅಪ್ಪ ದೊಡ್ಡ ಶ್ರೀಮಂತವಾಗಿದ್ದರೂ ಸಹ ಅದನ್ನೆಲ್ಲಾ ತೊರೆದು ಹೋಗುತ್ತಿದ್ದಾರೆ. ಹೀಗಾಗಿ ಕೊನೆಯದಾಗಿ ಹೊಸ ಬಟ್ಟೆ, ಚಿನ್ನಾಭರಣ ಧರಿಸಿಕೊಂಡು ಖುಷಿಪಟ್ಟರು.

ಇನ್ನು ಕುಟುಂಬ, ಸಂಬಂಧಿಕರುನ್ನು ತೊರೆದು ಸನ್ಯಾಸತ್ವ ಸೀಕರಿಸುತ್ತಿರುವ ಬಗ್ಗೆ ಮಾತನಾಡಿರುವ ನಿಖಿತಾ, ನಾನು ಗುರುಕುಲವಾಸಿಗೆ ಹೋಗುತ್ತಿರುವುದು ಖುಷಿಯಾಗುತ್ತಿದೆ. ಎಲ್ಲವನ್ನೂ ಬಿಟ್ಟುಹೋಗುತ್ತಿರುವುದಕ್ಕೆ ಸ್ವಲ್ಪವೂ ದುಖವಿಲ್ಲ. ಬದಲಿಗೆ ನನಗೆ ಬಹಳ ಖುಷಿಯಾಗುತ್ತಿದೆ ಎಂದು ತಮ್ಮ ಮನದಾಳದ ಮಾತು ಹಂಚಿಕೊಂಡರು.

ಭಗವಾನ್ ಮಹಾವೀರ ಹೇಳಿದಂತೆ ನನ್ನ ಆತ್ಮ ಪರಮಾತ್ಮವಾಗಬೇಕೆದೆ, ಹೀಗಾಗಿ ಈ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಇಷ್ಟು ದಿನ ಕಾರು ಬೈಕ್ ಸೇರಿದಂತೆ ಕೇಳಿದನೆಲ್ಲಾವನ್ನು ಅಪ್ಪ ಸೇರಿದಂತೆ ಇಡೀ ಪರವಾರವೇ ಕೊಟ್ಟಿದೆ. ಆದ್ರೆ, ಇದೀಗ ಅದ್ಯಾವುದು ನನಗೆ ಬೇಡ ಎಂದಿದ್ದಾರೆ.

ಏಳು ವರ್ಷದ ಹಿಂದೆಯೇ ಈ ಜೀವನ ನನಗೆ ಬೇಡ ಎನ್ನಿಸಿತ್ತು. ಹೀಗಾಗಿ ಸನ್ಯಾಸತ್ವ ಸೀಕರಿಸಲು ತೀರ್ಮಾನಿಸಿದ್ದೆ. ಆದ್ರೆ, ತಂದೆ ತಾಯಿ ಬೇಡ ಎಂದಿದ್ದರೂ. ಆದರೂ ಸಹ ನಾನು ಅವರನ್ನು ಮನವೊಲಿಸಿ 7 ವರ್ಷಗಳ ಬಳಿಕ ಪರಮಾತ್ಮನ ಹಾದಿಯಲ್ಲಿ ನಡೆಯುತ್ತಿದ್ದೇನೆ ಎಂದು ಹೇಳಿದರು.



















