- Kannada News Photo gallery Yash and Radhika Pandit celebrate Sankranti 2023 with kids Ayra and Yatharv
Yash: ಸಡಗರದಿಂದ ಸಂಕ್ರಾಂತಿ ಆಚರಿಸಿದ ಯಶ್ ಕುಟುಂಬ; ನಿರ್ಮಾಣ ಆಗುತ್ತಿದೆ ಹೊಸ ಮನೆ?
Sankranti 2023 | Yash Family: ಕುಟುಂಬದ ಜೊತೆ ಸಂಕ್ರಾಂತಿ ಆಚರಿಸಿದ ಫೋಟೋಗಳನ್ನು ಯಶ್ ಹಂಚಿಕೊಂಡಿದ್ದಾರೆ. ಆ ಮೂಲಕ ಅವರು ಅಭಿಮಾನಿಗಳಿಗೆ ಹಬ್ಬದ ವಿಶ್ ಮಾಡಿದ್ದಾರೆ.
Updated on: Jan 15, 2023 | 7:21 PM

ದೇಶಾದ್ಯಂತ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗಿದೆ. ನಟ ‘ರಾಕಿಂಗ್ ಸ್ಟಾರ್’ ಯಶ್ ಕೂಡ ಈ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ಕುಟುಂಬದವರ ಜೊತೆ ಸೇರಿ ಅವರು ಹಬ್ಬ ಆಚರಿಸಿದ್ದಾರೆ.

ಪತ್ನಿ ರಾಧಿಕಾ ಪಂಡಿತ್, ಮಕ್ಕಳಾದ ಯಥರ್ವ್, ಆಯ್ರಾ ಹಾಗೂ ತಂದೆ-ತಾಯಿ ಜೊತೆಯಲ್ಲಿ ಯಶ್ ಅವರು ಸಂಕ್ರಾಂತಿ ಹಬ್ಬದ ಪೂಜೆ ನೆರವೇರಿಸಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಭಿಮಾನಿಗಳಿಗೆ ಯಶ್ ಅವರು ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ನಟ ಯಶ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಹೆಚ್ಚು ಸಮಯವನ್ನು ಅವರು ಕುಟುಂಬದವರ ಜೊತೆ ಕಳೆಯಲು ಇಷ್ಟ ಪಡುತ್ತಾರೆ. ಮಕ್ಕಳ ಫೋಟೋ ಮತ್ತು ವಿಡಿಯೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾರೆ.

ನಿರ್ಮಾಣ ಹಂತದಲ್ಲಿ ಇರುವ ಕಟ್ಟಡದಲ್ಲಿ ಯಶ್ ಕುಟುಂಬದವರು ಸಂಕ್ರಾಂತಿ ಹಬ್ಬ ಮಾಡಿದ್ದಾರೆ. ಅವರು ಹೊಸ ಮನೆ ಕಟ್ಟಿಸುತ್ತಿದ್ದಾರೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಮನೆ ನಿರ್ಮಾಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.




