‘ಕಲ್ಟ್’ ಸಿನಿಮಾ: ಝೈದ್ ಖಾನ್ ಎದುರು ರಚಿತಾ ನಾಯಕಿ, ಮುಹೂರ್ತದ ಚಿತ್ರಗಳು ಇಲ್ಲಿವೆ
Zaid Khan: ಝೈದ್ ಖಾನ್ ಎರಡನೇ ಸಿನಿಮಾಕ್ಕೆ ರಚಿತಾ ರಾಮ್ ನಾಯಕಿ. ಅಂದಹಾಗೆ ಈ ಸಿನಿಮಾದ ಮತ್ತೊಬ್ಬ ನಾಯಕಿ ಪಾತ್ರದಲ್ಲಿ ಮಲೈಕಾ ವಸುಪಾಲ್ ನಟಿಸಿದ್ದಾರೆ.
Updated on:Sep 08, 2024 | 9:05 AM

ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಇದೀಗ ತಮ್ಮ ಎರಡನೇ ಸಿನಿಮಾದಲ್ಲಿ ನಟಿಸಲು ರೆಡಿಯಾಗಿದ್ದಾರೆ. ಸಿನಿಮಾದ ಮುಹೂರ್ತ ನಡೆದಿದೆ.

ಝೈದ್ ಖಾನ್ ನಟನೆಯ ಎರಡನೇ ಸಿನಿಮಾಕ್ಕೆ ‘ಕಲ್ಟ್’ ಎಂದು ಹೆಸರಿಡಲಾಗಿದ್ದು, ಸಿನಿಮಾದಲ್ಲಿ ಇಬ್ಬರು ನಾಯಕಿಯರು ನಟಿಸಲಿದ್ದಾರೆ.

ಸಿನಿಮಾದಲ್ಲಿ ರಚಿತಾ ರಾಮ್ ಹಾಗೂ ‘ಉಪಾಧ್ಯಕ್ಷ’ ನಟಿ ಮಲೈಕಾ ನಾಯಕಿಯರಾಗಿ ನಟಿಸಲಿದ್ದಾರೆ. ಮಲೈಕಾಗೆ ಇದು ಎರಡನೇ ಸಿನಿಮಾ.

ಝೈದ್ ಖಾನ್, ರಚಿತಾ, ಮಲೈಕಾರ ಹೊಸ ಸಿನಿಮಾದ ಮುಹೂರ್ತ ಗಣೇಶ ಹಬ್ಬದಂದು ಅದ್ಧೂರಿಯಾಗಿ ಗಣೇಶ ದೇವಾಲಯದಲ್ಲಿ ನೆರವೇರಿದೆ.

ಝೈದ್ ಖಾನ್-ರಚಿತಾರ ಸಿನಿಮಾವನ್ನು ಮಾರ್ಚ್ ತಿಂಗಳಲ್ಲೇ ಘೋಷಿಸಲಾಗಿತ್ತು. ಆದರೆ ನಟಿಯರು, ತಂತ್ರಜ್ಞರ ಆಯ್ಕೆ ಅಂತಿಮಗೊಳಿಸಲು ಹೆಚ್ಚು ಸಮಯ ಹಿಡಿದಿದೆ.

ರಚಿತಾ ರಾಮ್, ಈ ಸಿನಿಮಾದಲ್ಲಿ ಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಪೋಸ್ಟರ್ನಲ್ಲಿ ಯುವತಿಯೊಬ್ಬಾಕೆ ಕಾಲಿನಿಂದ ಝೈದ್ ಖಾನ್ಗೆ ಸಿಗರೇಟು ಸೇದಿಸುತ್ತಿರುವ ದೃಶ್ಯವಿದೆ.

ಝೈದ್ ಖಾನ್ ಈ ಹಿಂದೆ ‘ಬನಾರಸ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಜಯತೀರ್ಥ ನಿರ್ದೇಶನ ಮಾಡಿದ್ದರು. ಸಿನಿಮಾಕ್ಕೆ ಉತ್ತಮ ವಿಮರ್ಶೆ ದೊರೆತಿತ್ತು.
Published On - 9:04 am, Sun, 8 September 24




