PayCM: ಭಾವನಾತ್ಮಕ ಮಾತುಗಳಿಂದಲೇ ಕಾಂಗ್ರೆಸ್ ನಾಯಕರಿಗೆ ತಿವಿದ ಬೊಮ್ಮಾಯಿ
ಪೇಸಿಎಂ ಅಭಿಯಾನ ಶುರು ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಭಾವನಾತ್ಮಕ ಮಾತುಗಳಿಂದಲೇ ತಿರುಗೇಟು ನೀಡಿದ್ದಾರೆ.
ಮೈಸೂರು: ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಕೆಸರೆರಚಾಟ ಜೋರಾಗಿದೆ. 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಬಿಜೆಪಿ ವಿರುದ್ಧ ನಿರಂತರ ಟೀಕಿಸಲು ಶುರು ಮಾಡಿದ ಕಾಂಗ್ರೆಸ್, ಮತ್ತೊಂದು ಹೆಜ್ಜೆ ಮುಂದೆ ಹೋಗಿ ಪೇಸಿಎಂ ಅಭಿಯಾನ ಶುರುಮಾಡಿದೆ.
ಇದೀಗ ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai). ನಾನು ಕರ್ಣನಂತೆ ಎಂದು ಭಾವನಾತ್ಮಕವಾಗಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಇಂದು(ಭಾನುವಾರ) ಮಾತನಾಡಿದ ಬೊಮ್ಮಾಯಿ, ಕಾಂಗ್ರೆಸ್ ನಾಯಕರು ಮಾಡುತ್ತಿರುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅರ್ಜುನ ಹಾಗೂ ಕರ್ಣನ ತರಹ ಎರಡು ತರಹ ವ್ಯಕ್ತಿತ್ವ ಇರುತ್ತದೆ. ಅರ್ಜುನನಿಗೆ ಹೊಗಳಬೇಕು ಆಗ ಗುರಿ ಇಟ್ಟು ಬಾಣ ಹೊಡೆಯುತ್ತಾನೆ. ಆದರೆ ಕರ್ಣ ಹಾಗಲ್ಲ, ಕರ್ಣನಿಗೆ ಹೊಗಳುವ ಅಗತ್ಯ ಇಲ್ಲ. ಕರ್ಣನಿಗೆ ನಿನ್ನ ಕೈಯ್ಯಲ್ಲಿ ಆಗಲ್ಲ ಅಂದಾಗಲೇ ಅರ್ಜುನನಿಗಿಂತ ಹೆಚ್ಚು ಗುರಿ ಇಟ್ಟು ಹೊಡೆಯುತ್ತಾನೆ. ನಾನು ಕರ್ಣನ ತರಹ ಎರಡನೇ ಪಂಥಕ್ಕೆ ಸೇರಿದವನು ಎಂದು ಹೇಳು ಮೂಲಕ ಕಾಂಗ್ರೆಸ್ ನಾಯಕರಿಗೆ ಭಾವನಾತ್ಮಕ ಮಾತುಗಳಿಂದಲೇ ಟಾಂಗ್ ಕೊಟ್ಟರು.
ನೀವು ಎಷ್ಟು ಟೀಕೆ ಮಾಡ್ತೀರೋ, ಎಷ್ಟು ಅಪಮಾನ ಮಾಡ್ತೀರೋ ಅಷ್ಟು ನನ್ನ ವಿಶ್ವಾಸ ಹೆಚ್ಚುತ್ತದೆ. ಅದು ನನಗೆ ಶಕ್ತಿ ಕೊಡುತ್ತದೆ. ಟೀಕೆಗಳನ್ನು ಸವಾಲಾಗಿ ಮೆಟ್ಟಿಲಾಗಿ ಮಾಡಿಕೊಂಡು ನಾನು ಜನರ ಹೃದಯ ಗೆದ್ದು ಮತ್ತೆ ನಾನು ಜನಪರ ಸರ್ಕಾರ ಮಾಡಿಯೇ ಮಾಡ್ತೇವೆ. ಟೀಕೆಗಾಗಿಯೇ ನೀವು ಇದ್ದೀರಿ. ನಿನ್ನೆ ಬೆಂಗಳೂರಿನ ಯಾವ ಸ್ಥಳದಲ್ಲಿ ನೀವು ಇದ್ರೋ ಅದೇ ಸ್ಥಳ ನಿಮಗೆ ಪರ್ಮನೆಂಟ್ ಆಗುತ್ತದೆ ಎಂದು ತಿವಿದರು.
ಇದನ್ನೂ ಓದಿ: PayCM ಅಭಿಯಾನ: ಬಿಜೆಪಿಯ ಜಾತಿ ಅಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ
ನಾನು ಕರ್ಣನಂತೆ. ನೀವು ಎಷ್ಟು ಟೀಕೆ ಮಾಡ್ತಿರೋ ಅಷ್ಟು ನನ್ನ ವಿಶ್ವಾಸ ಹೆಚ್ಚುತ್ತದೆ. ನೀವು ಅಪಮಾನ ಮಾಡಿದಷ್ಟು ನನಗೆ ಶಕ್ತಿ ಹೆಚ್ಚುತ್ತದೆ. ಟೀಕೆಗಳನ್ನು ಸವಾಲಾಗಿ ಮೆಟ್ಟಿಲಾಗಿ ಮಾಡಿಕೊಂಡು. ಜನರ ಹೃದಯ ಗೆದ್ದು ಮತ್ತೆ ಜನಪರ ಸರ್ಕಾರ ಮಾಡುತ್ತೇನೆ. ನಾನು ಜನಪರ ಸರ್ಕಾರ ಮಾಡಿಯೇ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೆಹಲಿಯಲ್ಲಿ 100 ರೂಪಾಯಿ ಕೊಟ್ರೆ. ಹಳ್ಳಿಗೆ 15 ರೂಪಾಯಿ ತಲುಪುತ್ತದೆ ಎಂದು ಈ ವ್ಯವಸ್ಥೆ ನೋಡಿ ಮೋದಿಯವರು ಹೇಳಿದ್ರು. ಅದನ್ನು ಸರಿಪಡಿಸುವ ಕೆಲಸವನ್ನು ಮೋದಿಯವರು ಮಾಡುತ್ತಾರೆ. ಜನರಿಗೆ ಈ ಎಲ್ಲಾ ಮಾಹಿತಿ ಇದೆ. ಯಾವ ಯಾವ ಯೋಜನೆ ಇದೆ ಎಷ್ಟು ಅನುಕೂಲ ಆಗಿದೆ ಎಂದು ಗೊತ್ತಾಗುತ್ತದೆ. ಮಹಿಳೆಯರು ಮತ್ತು ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೆವೆ. ಮಹಿಳೆಯರಿಗೆ, ಯುವಕರಿಗೆ ಸಾಮರ್ಥ್ಯ ಇದೆ. ದುಡಿಯುವ ವರ್ಗಕ್ಕೆ ಕೆಲಸ ಕೊಡಬೇಕು. ಇದರಿಂದ ಆರ್ಥಿಕ ಪರಿಸ್ಥಿತಿ ಹೆಚ್ಚುತ್ತದೆ. ಮೈಸೂರಿಗೆ ತನ್ನದೇ ಆದ ಪರಂಪರೆ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ರಾಜಕಾರಣದಲ್ಲಿ ಆರೋಗ್ಯಕರ ಪೈಪೋಟಿ ಇರಲಿ. ಅದನ್ನು ನಾನು ಸ್ವಾಗತ ಮಾಡುತ್ತೆನೆ. ನೀವು ಮಾಡಬೇಡಿ ಎನ್ನೋವರು ಇದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಏನೂ ಅಭಿವೃದ್ಧಿ ಮಾಡಲಿಲ್ಲ. ಅದಕ್ಕೆ ನಾನು ಅದನ್ನು ಜನರ ಮುಂದೆ ಇಡುತ್ತೆವೆ ಎಂದರು.
ನನ್ನ ಬಗ್ಗೆ ಸಾಕಷ್ಟು ಟೀಕೆ ಟಿಪ್ಪಣಿ ಮಾಡುತ್ತಾರೆ. ಟೀಕೆ ಟಿಪ್ಪಣಿಗಳನ್ನು ಸ್ವೀಕಾರ ಮಾಡಿದ್ದೆನೆ. ನನಗೆ ಟೀಕೆಗಳೆ ಟಾನಿಕ್. ಸದನದಲ್ಲಿ ಮಾತನಾಡದೆ ಹೊರಗಡೆ ಪೋಸ್ಟರ್ ಅಂಟಿಸುತ್ತಾರೆ ಎಂದು ಪೇ ಸಿಎಂ ಅಭಿಯಾನದ ವಿರುದ್ದ ವೇದಿಕೆಯಲ್ಲಿ ಹೆಸರು ಹೇಳದೆ ಸಿದ್ದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.
Published On - 6:32 pm, Sun, 25 September 22