AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PayCM ಅಭಿಯಾನ: ಬಿಜೆಪಿಯ ಜಾತಿ ಅಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ

ಕಾಂಗ್ರೆಸ್​ನ PAYCM ಅಭಿಯಾನ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಲ್ಲದೇ ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

PayCM ಅಭಿಯಾನ: ಬಿಜೆಪಿಯ ಜಾತಿ ಅಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ
ಬಿಜೆಪಿ ಮತ್ತು ಕಾಂಗ್ರೆಸ್
Follow us
TV9 Web
| Updated By: Digi Tech Desk

Updated on:Sep 24, 2022 | 6:14 PM

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನೇನು ಆರೇಳು ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಅಸ್ತ್ರ-ಪ್ರತ್ಯಸ್ತ್ರ ಪ್ರಯೋಗಗಳು ಶುರುವಾಗಿವೆ.   ಆದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ರಾಝಕೀಯ ಪಕ್ಷಗಳ ಆರ್ಭಟ ಜೋರಾಗಿದ್ದು,  ಬಿಜೆಪಿ ಎಲ್ಲಾ ಪಕ್ಷಗಳಿಂದ ಒಂದು ಹೆಜ್ಜೆ ಮುಂದೆ ಇದೆ. ಬಿಜೆಪಿ ಐಟಿ ಸೆಲ್‌ ಪಕ್ಷದ ವರ್ಚಸ್ಸು ಹೆಚ್ಚಿಸುವ ನಿಟ್ಟಿನಲ್ಲಿ ದೊಡ್ಡ ದೊಡ್ಡ ಕ್ಯಾಂಪೇನ್‌ಗಳನ್ನು ಮಾಡಿದೆ. ಇಲ್ಲಿಯವರೆಗೂ ಬಿಜೆಪಿ ತಂತ್ರಗಾರಿಕೆಗೆ ಟಕ್ಕರ್‌ ಕೊಡಲು ಒದ್ದಾಡುತ್ತಿದ್ದ ಕರ್ನಾಟಕ ಕಾಂಗ್ರೆಸ್‌, ಪೇ ಸಿಎಂ ಮೂಲಕ ಅಬ್ಬರಿಸುತ್ತಿದೆ.

ಹೌದು.. ಕಾಂಗ್ರೆಸ್​ನ PAYCM ಅಭಿಯಾನ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು,  ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.   ಮುಂಬರುವ ಅಸೆಂಬ್ಲಿ ಎಲೆಕ್ಷನ್​ ತಯಾರಿ ನಡೆಸಿದ ನಡುವೆಯೇ ಪೇ ಸಿಎಂ ಬಿಜೆಪಿಗೆ ಇರುಸುಮುರುಸು ಉಂಟುಮಾಡಿದೆ.

ಈ ಬಗ್ಗೆ ಹೈಕಮಾಂಡ್​ ಸಹ ರಾಜ್ಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ ಎನ್ನಲಾಗಿದೆ. ಹೈಕಮಾಂಡ್ ಕ್ಲಾಸ್ ತೆಗೆದುಕೊಂಡ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಬಿಜೆಪಿ, ಕಾಂಗ್ರೆಸ್​ ವಿರುದ್ಧ ಜಾತಿ ಬಾಣ ಬಿಟ್ಟಿದೆ.

ಕಾಂಗ್ರೆಸ್ ಅಭಿಯಾನಕ್ಕೆ ಜಾತಿ ಟಚ್​ ಕೊಟ್ಟ ಬಿಜೆಪಿ ಕಾಂಗ್ರೆಸ್ ಅಭಿಯಾನದ ವಿರುದ್ಧ ಬಿಜೆಪಿ ಲಿಂಗಾಯತ ಅಭಿಯಾನ ನಡೆಸುತ್ತಿದ್ದು, ಲಿಂಗಾಯತ ಸಿಎಂಗೆ ಕಾಂಗ್ರೆಸ್​ ಅವಮಾನ ಮಾಡ್ತಿದೆ ಎಂದು ಬಿಜೆಪಿ ಜಾತಿಯನ್ನು ಎಳೆದುತಂದಿದೆ. ಲಿಂಗಾಯತ ಸಮುದಾಯಕ್ಕೆ ಸಿಎಂ ಸ್ಥಾನ ಸಿಕ್ಕಿದೆ. ಕಾಂಗ್ರೆಸ್​ನ ಲಿಂಗಾಯತ ನಾಯಕರು ಅಪಪ್ರಚಾರ ಮಾಡ್ತಿದ್ದೀರಿ. ನಿಮಗೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ಲಿಂಗಾಯತ ಅಸ್ತ್ರವನ್ನು ಬಿಟ್ಟಿದೆ. ಇನ್ನು ಬಿಜೆಪಿಯ ಲಿಂಗಾಯತ ಅಸ್ತ್ರಕ್ಕೆ ಕಾಂಗ್ರೆಸ್​ ಸಹ ತಿರುಗೇಟು ಕೊಟ್ಟಿದೆ.

ಬಿಜೆಪಿ ಜಾತಿ ಅಸ್ತ್ರಕ್ಕೆ ಕೈ ಪ್ರತ್ಯಸ್ತ್ರ ಜಾತಿ ಶೀಲ್ಡ್ ಹಿಡಿದು ಕಮಿಷನ್ ಭ್ರಷ್ಟಾಚಾರವನ್ನು ರಕ್ಷಿಸಲು ಬಿಜೆಪಿ ವಿಫಲ ಯತ್ನ ನಡೆಸುತ್ತಿದೆ. ಮಠಗಳ ಅನುದಾನದಲ್ಲೂ 30% ಕಮಿಷನ್ ದೋಚಲಾಗಿದೆ ಎಂದು ಲಿಂಗಾಯತ ಸ್ವಾಮಿಗಳೇ ಆರೋಪಿಸಿದ್ದರು. ಇದು ಲಿಂಗಾಯತರಿಗೆ ಮಾಡಿದ ಅವಮಾನವಲ್ಲವೇ? 40 ಪರ್ಸೆಂಟ್ ಸರ್ಕಾರದ್ದು, “ಜಾತ್ಯತೀತ ಭ್ರಷ್ಟಾಚಾರ” ಇದರಲ್ಲಿ ಲಿಂಗಾಯತರೂ ಸಂತ್ರಸ್ತರೇ ಎಂದು ಕಾಂಗ್ರೆಸ್​ ಟಾಂಗ್ ಕೊಟ್ಟಿದೆ.

40% ಕಮಿಷನ್ನಿಗಾಗಿ ಕಿರುಕುಳ ನೀಡಿ #40PercentSarkara ಕೊಲೆ ಮಾಡಿದ ಸಂತೋಷ್ ಪಾಟೀಲ್ ಕೂಡ ಲಿಂಗಾಯತ. ಲಿಂಗಾಯತನೊಬ್ಬನ ಜೀವ ತೆಗೆದ ಬಿಜೆಪಿ ಸರ್ಕಾರ ಲಿಂಗಾಯತ ವಿರೋಧಿಯಲ್ಲವೇ? ಕಮಿಷನ್ ಕಿರುಕುಳದ ಸಂತ್ರಸ್ತರಲ್ಲಿ ಲಿಂಗಾಯತ ಗುತ್ತಿಗೆದಾರರು ಇಲ್ಲವೇ? ಬಿಜೆಪಿ ಲಿಂಗಾಯತ ವಿರೋಧಿ ಮಾತ್ರವಲ್ಲ, ಇಡೀ ಮನುಕುಲದ ವಿರೋಧಿ ಎಂದು ಕಾಂಗ್ರೆಸ್ ಜಾಡಿಸಿದೆ.

Published On - 5:48 pm, Sat, 24 September 22