AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bk Hariprasad: ನಾನು ವೇಶ್ಯೆ ಎಂಬ ಪದ ಬಳಸಿಲ್ಲ, ಸಾಕ್ಷ್ಯ ನೀಡಿದರೆ ರಾಜೀನಾಮೆ ನೀಡುವೆ ಎಂದ ಬಿ.ಕೆ.ಹರಿಪ್ರಸಾದ್

ಹರಿಪ್ರಸಾದ್​​ ನಾನು ವೇಶ್ಯೆ ಎಂಬ ಪದ ಬಳಸಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ. ಒಂದು ವೇಳೆ ನಾನು ವೇಶ್ಯೆ ಪದ ಬಳಸಿದ ವಿಡಿಯೋ ನೀಡಿದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದರು.

Bk Hariprasad: ನಾನು ವೇಶ್ಯೆ ಎಂಬ ಪದ ಬಳಸಿಲ್ಲ, ಸಾಕ್ಷ್ಯ ನೀಡಿದರೆ ರಾಜೀನಾಮೆ ನೀಡುವೆ ಎಂದ ಬಿ.ಕೆ.ಹರಿಪ್ರಸಾದ್
ಬಿಕೆ ಹರಿಪ್ರಸಾದ್ Image Credit source: contactdetailswala.in
TV9 Web
| Edited By: |

Updated on:Jan 20, 2023 | 1:55 PM

Share

ಬೆಂಗಳೂರು: ಹೊಟ್ಟೆಪಾಡಿಗಾಗಿ ಮೈಮಾರಿಕೊಂಡ ಮಹಿಳೆಗೆ ವೇಶ್ಯೆ ಎಂದು ಕರೆಯುತ್ತಾರೆ. ಆದರೆ ತಮ್ಮನೇ ಮಾರಾಟ ಮಾಡಿಕೊಂಡ ಶಾಸಕರಿಗೆ ಏನೆಂದು ಕರೆಯುತ್ತಾರೆ ಎಂದು ಇತ್ತೀಚೆಗೆ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ (BK Hariprasad) ಹೇಳಿದ್ದರು. ಈ ಹೇಳಿಕೆ ತುಂಬಾ ಚರ್ಚೆಗೆ ಕೂಡ ಗ್ರಾಸವಾಗಿತ್ತು. ಸದ್ಯ ಈ ಹೇಳಿಕೆ ಬಗ್ಗೆ ಮಾತನಾಡಿರುವ ಹರಿಪ್ರಸಾದ್​​ ನಾನು ವೇಶ್ಯೆ ಎಂಬ ಪದ ಬಳಸಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ. ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ಎಲ್ಲೂ ಅಸಭ್ಯವಾಗಿ ವರ್ತಿಸಿದ ಉದಾಹರಣೆ ಇಲ್ಲ. ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕೆಂದು ಚೆನ್ನಾಗಿ ಗೊತ್ತಿದೆ. ನಾನು ವೇಶ್ಯೆ ಪದ ಬಳಸಿದ ವಿಡಿಯೋ (ಫುಟೇಜ್​) ನೀಡಿದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದರು.

‘ಮೋದಿ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ’

ಮುಸ್ಲಿಮರನ್ನು ದ್ವೇಷಿಸಬೇಡಿ ಎಂದು ಮೋದಿ ಹೇಳಿಕೆ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದ್ದು, ಮೋದಿ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ. ಕಾಂಗ್ರೆಸ್​ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಜಾಸ್ತಿ ಇದ್ದಾರೆ. ಗೆಲ್ಲುವ ಅವಕಾಶ ಹೆಚ್ಚಿದ್ದಾಗ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುತ್ತೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ಬದಲಾಯಿಸಿದರು. ಹಿಂದುತ್ವಕ್ಕೂ ಹಿಂದೂ ಧರ್ಮಕ್ಕೂ ಬಹಳ ವ್ಯತ್ಯಾಸ ಇದೆ. ವಿ.ಡಿ.ಸಾವರ್ಕರ್ ಈ ಕುರಿತು ಸ್ಪಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್​​ ಪಕ್ಷ ನಾಗ್ಪುರದಿಂದ ಕಂಟ್ರೋಲ್ ಆಗುವುದಿಲ್ಲ. ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಖಾಕಿ ಚಡ್ಡಿ, ಕರಿ ಟೋಪಿಯಿಂದ ಯಾವ ಧರ್ಮ ಉಳಿಸೋಕೆ ಸಾಧ್ಯ? ಬಿ.ಕೆ ಹರಿಪ್ರಸಾದ್ ಹೇಳಿಕೆ

ಮೋದಿ, ಅಮಿತ್​ ಶಾ ಸಂಪೂರ್ಣ ಜಾತಕ ಹೇಳುವ ಧೈರ್ಯ ನನಗಿದೆ

ಮೋದಿ, ಅಮಿತ್ ಶಾ ನನಗೆ ವೈಯಕ್ತಿಕ ಪರಿಚಯ. ಅವರ ಸಂಪೂರ್ಣ ಜಾತಕ ಹೇಳುವ ಧೈರ್ಯ ಮಾಹಿತಿ ನನಗೆ ಇದೆ. ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಹೇಳುವ ಧೈರ್ಯ ಬಿಜೆಪಿಗೆ ಇಲ್ಲ. ಮಿಸ್ಟರ್ ನಳೀನ್ ಕುಮಾರ್ ಕಟೀಲ್ ಅಭಿವೃದ್ಧಿ ಬಗ್ಗೆ ಏನು ಹೇಳಿದ್ದಾರೆ. ರಸ್ತೆ ಚರಂಡಿ ಬಗ್ಗೆ ಮಾತಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತಾಡಿ ಅಂತ ಹೇಳಿದ್ದಾರೆ ಎಂದು ಕಿಡಿಕಾರಿದರು. ಚುನಾವಣಾ ದೃಷ್ಟಿಯಿಂದ ಮೂರು ವಾರಕ್ಕೊಂದು ಕೋಮು ಗಲಭೆ ಆಗುತ್ತಿರುವುದನ್ನು ಕಂಡಿದ್ದೇವೆ. ಕರ್ನಾಟಕ ರಾಜ್ಯ ನ್ಯಾಷನಲ್ ಎಜುಕೇಷನ್ ಪಾಲಿಸಿಯಿಂದ ಗುಣಮಟ್ಟದ ಶಿಕ್ಷಣ ಕುಸಿತ ಕಂಡಿದೆ.

ಮೋದಿ ಕರ್ನಾಟಕಕ್ಕೆ ಪಾಲಿಟಿಕಲ್ ಟೂರಿಸಂ ಮಾಡಲು ಬರುತ್ತಾರೆ 

ನಾವು ಪೆನ್ನು ಪುಸ್ತಕ ವಿಚಾರ ಮಾತಾಡಿದರೆ ಪ್ರಜ್ಞಾ ಠಾಖೂರ್ ಬಂದು ಚಾಕೂ ಚೂರಿ ವಿಚಾರ ಮಾತಾಡ್ತಾರೆ. ಅಮಿತ್ ಶಾ ಬಂದು ಅಮುಲ್ ಕೆಎಂಎಫ್ ಮರ್ಜ್ ಬಗ್ಗೆ ಮಾತಾಡ್ತಾರೆ. ಅಮಿತ್ ಶಾ ರಾಜ್ಯಕ್ಕೆ ವ್ಯಾಪರ ಮಾಡುವುದಕ್ಕೆ ಬಂದಿದ್ದಾರೆ ಹೊರತು ಚಾಣಾಕ್ಷತನದಿಂದ ಬೇರೆ ಕೆಲಸಕ್ಕೆ ಬಂದಿಲ್ಲ. ಕರ್ನಾಟಕದಲ್ಲಿ ನೆರೆ ಬಂತು ಮೋದಿ ಬರಲಿಲ್ಲ. ಕೋವಿಡ್ ಬಂದಾಗ ಬರಲಿಲ್ಲ ಆದರೆ ಚುನಾವಣೆ ಬಂತು ಅಂತ ಪಾಲಿಟಿಕಲ್ ಟೂರಿಸಂ ಮಾತ್ರ ಬರೋದಾ ಪ್ರಧಾನಿಗಳು ಎಂದು ಹರಿಹಾಯ್ದರು.

ಇದನ್ನೂ ಓದಿ: ಬಿಜೆಪಿ ಷಡ್ಯಂತ್ರದಿಂದ ಹಿಜಾಬ್ ವಿವಾದ: ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್

ಗುಜರಾತ್ ಹಾಗೂ ಯುಪಿಯಲ್ಲಿ ಕರ್ನಾಟಕದ ಮಾಡೆಲ್ ತನ್ನಿ

ಹುಬ್ಬಳ್ಳಿ ಧಾರವಾಡದಲ್ಲಿ ಯುವಜನೋತ್ಸವ ಸರ್ಕಾರಿ ಕಾರ್ಯಕ್ರಮ ಆದರೂ ಕೇವಲ ಬಿಜೆಪಿಯ ಧ್ವಜಗಳೇ ಕಾಣುತ್ತಿದ್ದವು. ಪ್ರಧಾನಿ ಇರುವುದು ದೇಶಕ್ಕಾ ಅಥವಾ ಕೇವಲ ಬಿಜೆಪಿಗಾ ಎಂದು ಪ್ರಶ್ನಿಸಿದರು. ತಾಂಡಗಳಿಗೆ ರೆವೆನ್ಯು ಗ್ರಾಮ ಮಾಡುವುದು ಖಾಸಗಿ ಮಸೂದೆ ಮಂಡನೆಯಾಗಿದ್ದು, ಸಿದ್ದರಾಮಯ್ಯ ಹಾಗೂ ಕಾಗೋಡು ತಿಮ್ಮಪ್ಪ ಅವರಿಂದ. ವಿರೋಧ ಪಕ್ಷದವರನ್ನು ಈ ಕಾರ್ಯಕ್ರಮ ಕರಿಬೇಕಾಗಿತ್ತಲ್ಲ? ಕರ್ನಾಟಕವನ್ನು ಗುಜರಾತ್ ಮಾಡೆಲ್ ಮಾಡಬೇಡಿ. ಗುಜರಾತ್ ಹಾಗೂ ಯುಪಿಯಲ್ಲಿ ಕರ್ನಾಟಕದ ಮಾಡೆಲ್ ತನ್ನಿ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಾವು ಸ್ವರ್ಗದಲ್ಲಿದ್ದೀವಿ ಅಂತ ಅನಿಸುತ್ತದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:54 pm, Fri, 20 January 23