ಚನ್ನಪಟ್ಟಣದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ: ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ
ಚನ್ನಪಟ್ಟಣದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ, ರಾಜೀವ್ ಗಾಂಧಿ ವೈದ್ಯಕೀಯ ಕಾಲೇಜು ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ರಾಮನಗರ: ಚನ್ನಪಟ್ಟಣದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ (silk market) ನಿರ್ಮಾಣ, ರಾಜೀವ್ ಗಾಂಧಿ ವೈದ್ಯಕೀಯ ಕಾಲೇಜು ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ರಾಮನಗರ ಹೊರವಲಯದ ಅರ್ಚಕರಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಚಿವರಾದ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಡಾ. ಸುಧಾಕರ್, ಕೆ.ಸಿ.ನಾರಾಯಣಗೌಡ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ವಿಧಾನಪರಿಷತ್ ಸದಸ್ಯ ಅ.ದೇವೇಗೌಡ ಸೇರಿ ಹಲವರು ಭಾಗಿಯಾಗಿದ್ದರು. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ, ಕನಕಪುರ ಶಾಸಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಜಿಲ್ಲೆಯ ವಿರೋಧ ಪಕ್ಷದ ಜನಪ್ರತಿನಿಧಗಳ ಗೈರಿನಲ್ಲಿ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ.
ರಾಮನಗರಕ್ಕೆ ನಾವು ದೊಡ್ಡ ಕೊಡುಗೆ ಕೊಟ್ಟಿದ್ದೇವೆ: ಸಿಎಂ ಬೊಮ್ಮಾಯಿ
ಬಳಿಕ ಚನ್ನಪಟ್ಟಣ ಪೊಲೀಸ್ ತರಬೇತಿ ಕೇಂದ್ರದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ರಾಮನಗರ ಜಿಲ್ಲೆಯಲ್ಲಿ ಅತ್ಯಂತ ಮಹತ್ವದ ದಿನ. ಇಡೀ ರಾಜ್ಯದ ವ್ಯಾಪ್ತಿಯಲ್ಲಿ ಇರುವ ವಿಶ್ವವಿದ್ಯಾಲಯ ರಾಮನಗರದಲ್ಲಿ ಆಗುತ್ತಿದೆ. ರಾಜೀವ್ ಗಾಂಧಿ ವಿವಿ ಆಗಬೇಕು ಎಂದು 16 ವರ್ಷದಿಂದ ನೆನೆಗುದಿಗೆ ಬಿದ್ದಿದೆ. ಹಲವು ಗೊಂದಲದ ಗೂಡಾಗಿತ್ತು. ರಾಜ್ಯಕ್ಕೆ ಸಾಕಷ್ಟು ಅವಶ್ಯಕತೆ ಇದೆ ಎಂದು ವಿವಿಯನ್ನ ಕಟ್ಟಬೇಕು ಎಂದು ನಿರ್ಧಾರ ಮಾಡಿದ್ದೇವೆ. ಸಾಕಷ್ಟು ಅಡ್ಡಿಗಳು ಬಂದಿತ್ತು. ಹಿಂದಿನ ಸರ್ಕಾರ ಸಮಸ್ಯೆಯನ್ನ ಸಮಸ್ಯೆಯಾಗಿ ನೋಡುತ್ತಿತ್ತು. ನಮ್ಮ ಸರ್ಕಾರ ಸಮಸ್ಯೆಯನ್ನ ಬಗೆಹರಿಸುವ ಕೆಲಸ ಮಾಡುತ್ತಿದೆ ಎಂದರು.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ತವರು ಕ್ಷೇತ್ರದ ಪಂಚಮಸಾಲಿ ಮುಖಂಡ ಮರಳಿ ಕಾಂಗ್ರೆಸ್ಗೆ: ಬಿಜೆಪಿಗೆ ಆಘಾತ ನೀಡಿದ ಮಂಜುನಾಥ ಕುನ್ನೂರು
ಹೈಟೆಕ್ ಮಾರುಕಟ್ಟೆಗೆ ಅಡಿಗಲ್ಲು
ಇಲ್ಲಿ ವಿವಿ ಆದರೆ ರಾಮನಗರ ಹೊಸ ಜಿಲ್ಲೆಯಾಗಿ ಸಾರ್ಥಕವಾಗುತ್ತದೆ. ಇಡೀ ಜಿಲ್ಲೆ ಅಭಿವೃದ್ಧಿ ಆಗುತ್ತದೆ. ಹೈಟೆಕ್ ಮಾರುಕಟ್ಟೆಗೆ ಅಡಿಗಲ್ಲು ಹಾಕಿದ್ದೇವೆ. ಇಂತಹ ಮಾರುಕಟ್ಟೆ ರಾಜ್ಯದಲ್ಲಿ ಎಲ್ಲೂ ಇಲ್ಲ. ರಾಮನಗರಕ್ಕೆ ನಾವು ದೊಡ್ಡ ಕೊಡುಗೆ ಕೊಟ್ಟಿದ್ದೇವೆ. ಇದು ನಮ್ಮ ಸರ್ಕಾರದ ಬದ್ದತೆ ತೋರಿಸುತ್ತದೆ. ಜೊತೆಗೆ ಮಾವು ಸಂಸ್ಕರಣ ಘಟಕಕ್ಕೆ ಚಾಲನೆ ಕೊಟ್ಟಿದ್ದೇವೆ. ಹಿಂದಿನ ಸರ್ಕಾರ ಅನುದಾನ ಬಿಡುಗಡೆ ಮಾಡದ ಯೋಜನೆಗಳಿಗೆ ನಾವು ಚಾಲನೆ ಕೊಟ್ಟಿದ್ದೇವೆ. ನಾವು ಜನರ ಹಿತದೃಷ್ಟಿಯಿಂದ ಚಾಲನೆ ಕೊಟ್ಟಿದ್ದೇವೆ.
ಇದನ್ನೂ ಓದಿ: BS Yediyurappa: ಏಕಾಏಕಿ ಕಲ್ಲು ತೂರಾಟದಿಂದ ನನಗೆ ನೋವಾಗಿದೆ: ಬಿಎಸ್ ಯಡಿಯೂರಪ್ಪ
ಇಡೀ ಭಾರತದ ದೊಡ್ಡ ಆರೋಗ್ಯ ಕೇಂದ್ರ ರಾಮನಗರದಲ್ಲಿ ಆಗಲಿದೆ. ಕೆಂಗಲ್ ಹನುಮಂತಯ್ಯ ನವರ ಹೆಸರು ಇಡಬೇಕು ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಈ ಭಾಗದ ಮಣ್ಣಿನ ಮಗನ ಹೆಸರು ಇಡದೇ ಯಾರ ಹೆಸರು ಇಡಲು ಸಾಧ್ಯ. ರಾಜೀವ್ ಗಾಂಧಿ ವಿವಿ ಸಿಂಡಿಕೇಟ್ನಲ್ಲಿ ಇಡಲಾಗುತ್ತದೆ. ಈ ಬಗ್ಗೆ ಸೂಚನೆ ಕೊಡುತ್ತೇನೆ. ಘೋಷಣೆಗಳ ಮೂಲಕ ಕೆಲವರು ರಾಜಕಾರಣ ಮಾಡಿದ್ದಾರೆ. ಭಾಷಣದಿಂದ ಯಾರ ಹೊಟ್ಟೆ ತುಂಬುವುದಿಲ್ಲ ಎಂದು ಹೇಳಿದರು.
ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಹೆಸರಿಡುವಂತೆ ಮನವಿ
ಸಚಿವ ಅಶ್ವತ್ಥ್ ನಾರಾಯಣ್ ಮಾತನಾಡಿ, ಹಲವು ಕಾರ್ಯಕ್ರಮಗಳನ್ನ ರೈತರಿಗೆ ಕೊಟ್ಟಿದ್ದೇವೆ. ರೈತ ಬಂಧುವಾಗಿ ಕೆಲಸ ಮಾಡುತ್ತಿದ್ದಾರೆ. ರಾಮನಗರದಲ್ಲಿ ನಿರ್ಮಾಣ ಆಗಲಿರುವ ವಿವಿಗೆ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಅವರ ಹೆಸರನ್ನ ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಇಡುವಂತೆ ಸಿಎಂಗೆ ಮನವಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:42 pm, Mon, 27 March 23